ಚಿಕ್ಕಬಳ್ಳಾಪುರ ಲೋಕಸಭಾ; ಕರ್ನಾಟಕ ಒಕ್ಕಲಿಗರು, ಆಂಧ್ರ ರೆಡ್ಡಿಗಳು..!; ಏನಿದು ಲೆಕ್ಕಾಚಾರ..?
ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾರ ಯಾವತ್ತೂ ಜಾತಿ ನೋಡಿ ಮತ ಹಾಕಿಲ್ಲ.. ಹೀಗಾಗಿ, ಇಲ್ಲಿ ಅಭ್ಯರ್ಥಿ ಆಯ್ಕೆ ವೇಳೆ ಯಾವ ಪಕ್ಷವೂ ಜಾತಿ ನೋಡುತ್ತಿರಲಿಲ್ಲ.. ಆದ್ರೆ ಕಳೆದ ಚುನಾವಣೆಯಿಂದೀಚೆಗೆ ಸ್ವಲ್ಪ ಲೆಕ್ಕಾಚಾರಗಳು ಬದಲಾಗಿವೆ.. ಹೀಗಾಗಿಯೇ ಜಾತಿ ಆಧಾರದ ಮೇಲೆ ಜಾರಿಗೆ ಟಿಕೆಟ್ ಸಿಕ್ಕರೆ ಒಳ್ಳೆಯದು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ.. ಬಿಜೆಪಿ ಟಿಕೆಟ್ ಅಂತ ಬಂದಾಗ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊರಸು, ಹೊಸದೇವರು, ಗಂಗಟ್ಕರ ಒಕ್ಕಲಿಗರು ಹಾಗೂ ಆಂಧ್ರ ಒಕ್ಕಲಿಗರು ಅನ್ನೋ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ.. ಇದಕ್ಕೆ ಕಾರಣವೂ ಇಲ್ಲದಿಲ್ಲ…
ಇದನ್ನೂ ಓದಿ;ಮೈಸೂರು-ಕೊಡಗು ಲೋಕಸಭಾ; ಶೃಂಗೇರಿಗೆ ಭೇಟಿ ನೀಡಿದ ಯದುವೀರ್!
ಡಾ.ಕೆ.ಸುಧಾಕರ್ ಹಾಗೂ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ನಡುವೆ ಟಿಕೆಟ್ ಫೈಟ್;
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ತಮ್ಮ ಪುತ್ರ ಅಲೋಕ್ ವಿಶ್ವನಾಥ್ ನಾಗಿ ಚಿಕ್ಕಬಳ್ಳಾಪುರ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ.. ಇತ್ತ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಕೂಡಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.. ಟಿಕೆಟ್‌ಗಾಗಿ ಇಬ್ಬರ ನಡುವೆ ಬಿಗ್ ಫೈಟ್ ನಡೆದಿದೆ.. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿದ್ದಾರೆ.. ವಿಶ್ವನಾಥ್ ಹಾಗೂ ಸುಧಾಕರ್ ಇಬ್ಬರೂ ಒಕ್ಕಲಿಗರೇ.. ಹೀಗಾಗಿ ಇಬ್ಬರೂ ಲಾಬಿ ಮಾಡುತ್ತಿದ್ದಾರೆ… ಡಾ.ಕೆ.ಸುಧಾಕರ್ ಕಾಂಗ್ರೆಸ್‌ನಿಂದ ವಲಸೆ ಬಂದವರು, ಜೊತೆಗೆ ಯಡಿಯೂರಪ್ಪ ಕುಟುಂಬಕ್ಕೆ ಅಷ್ಟೇನೋ ಬೇಕಾದವರಲ್ಲ.. ಡಾ.ಕೆ.ಸುಧಾಕರ್ ಬೆನ್ನಿಗೆ ಬೊಮ್ಮಾಯಿ ಇದ್ದಾರೆ.. ಜೊತೆಗೆ ಮಿತ್ರಪಕ್ಷ ಜೆಡಿಎಸ್‌ನ ದೇವೇಗೌಡರು ಹಾಗೂ ಕುಮಾರಸ್ವಾಮಿಯವರೂ ಸುಧಾಕರ್ ಪರ ನಿಂತಿದ್ದಾರೆ.. ಆದ್ರೆ, ವಿಶ್ವನಾಥ್ ಪುತ್ರನ ಪರವಾಗಿ ಯಡಿಯೂರಪ್ಪ ಹಾಗೂ ಆರ್‌ಎಸ್‌ಎಸ್ ನಾಯಕರು ನಿಂತಿದ್ದಾರೆ ಎನ್ನಲಾಗ್ತಿದೆ.. ಈ ನಡುವೆ ಜಾತಿ ವಿಚಾರ ಹೆಚ್ಚು ಚರ್ಚೆಗೆ ಬಂದಿದೆ.
ಇದನ್ನೂ ಓದಿ;ಇಂದೇ ಬಿಜೆಪಿ ಎರಡನೇ ಪಟ್ಟಿ ರಿಲೀಸ್; ರಾಜ್ಯದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್!
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಕ್ಕಲಿಗ ಉಪಪಂಗಡಗಳಾದ ಮೊರಸು, ಹೊಸದೇವರು, ಗಂಗಟ್ಕರ ಒಕ್ಕಲಿಗರು ಹೆಚ್ಚಿದ್ದಾರೆ… ರಾಜ್ಯದಲ್ಲಿ ಇದೇ ಪಂಗಡದ ಒಕ್ಕಲಿಗರೇ ಜಾಸ್ತಿ ಇರೋದು.. ಆದ್ರೆ, ಎಸ್.ಆರ್.ವಿಶ್ವನಾಥ್ ಅವರ ಮೂಲ ಆಂಧ್ರಪ್ರದೇಶ… ಅವರು ರೆಡ್ಡಿ ಒಕ್ಕಲಿಗರು.. ಕರ್ನಾಟಕದ ಒಕ್ಕಲಿಗರಿಗೂ ಈ ಆಂಧ್ರದ ರೆಡ್ಡಿ ಒಕ್ಕಲಿಗರಿಗೂ ಸಂಬಂಧವಿಲ್ಲವಂತೆ.. ಇದೇ ಕಾರಣವನ್ನು ನೀಡಿ ಡಾ.ಕೆ.ಸುಧಾಕರ್‌ಗೆ ಟಿಕೆಟ್ ನೀಡಿದರೆ ಗೆಲ್ಲಲು ಅನುಕೂಲವಾಗುತ್ತದೆ ಎಂಬ ವಾದವನ್ನು ಮುಂದಿಡಲಾಗಿದೆ.
ಇದನ್ನೂ ಓದಿ;ಮೈಸೂರಿಗೆ ʻಯಧುವೀರಾʼಧಿ ವೀರ; ಟಿಕೆಟ್ ಬೇಟೆಯ ಹೋಪ್ ಕಳೆದುಕೊಳ್ತಾ ʻಸಿಂಹʼ?
ಜೆಡಿಎಸ್ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ;
ಜೆಡಿಎಸ್ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ; ಹೀಗೆ ಎಸ್.ಆರ್.ವಿಶ್ವನಾಥ್ ಹಾಗೂ ಡಾ.ಕೆ.ಸುಧಾಕರ್ ನಡುವೆ ಟಿಕೆಟ್ ಗಾಗಿ ಬಿಗ್ ಫೈಟ್ ನಡೆದಿದೆ.. ಹೀಗಿರುವಾಗಲೇ ಮಿತ್ರಪಕ್ಷ ಜೆಡಿಎಸ್‌ನ ಕುಮಾರಸ್ವಾಮಿಯವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮುಖಂಡರನ್ನು ತಮ್ಮ ಜೆಪಿ ನಗರದ ನಿವಾಸಕ್ಕೆ ಕರೆಸಿ ಮಾತುಕತೆ ನಡೆಸಿದ್ದಾರೆ. ಯಾರೇ ಅಭ್ಯರ್ಥಿಯಾಗದರೂ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಡಾ.ಕೆ.ಸುಧಾಕರ್ ವಿಚಾರ ಹೆಚ್ಚು ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ.
ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷರಾದ ಕೆ.ಎಂ.ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಇ.ಕೃಷ್ಣಪ್ಪ, ಹೆಚ್.ಎಂ.ರಮೇಶ್ ಗೌಡ, ಡಾ.ಶ್ರೀನಿವಾಸ ಮೂರ್ತಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮುನೇಗೌಡ, ಕ್ಷೇತ್ರದ ಹಿರಿಯ ಮುಖಂಡರಾದ ಮುನೇಗೌಡ, ಡಿ. ಜೆ.ನಾಗರಾಜ್ ರೆಡ್ಡಿ, ನರಸಿಂಹ ಮೂರ್ತಿ, ಹರೀಶ್ ಗೌಡ , ಅಪ್ಪಣ್ಣಯ್ಯ, ಮಧು, ಹೊಸಕೋಟೆ ಶ್ರೀಧರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ;ಬಿಡದಿ ತೋಟದ ಮನೆಯಲ್ಲಿ 25 ತಲೆ ಬರುಡೆ ಪತ್ತೆ; ಎಲ್ಲಿಂದ ಬಂದವು ಇವು..?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಎಷ್ಟು..?;
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಎಷ್ಟು..?; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರಲಿದೆ. ಸುಮಾರು ಹತ್ತು ತಾಲ್ಲೂಕುಗಳು ಇದರ ವ್ಯಾಪ್ತಿಯಲ್ಲಿರಲಿಲ್ಲ. ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಯಲಹಂಕ, ದೊಡ್ಡಬಳ್ಳಾಪುರ, ಹೊಸಕೋಟೆ , ನೆಲಮಂಗಲ, ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರಲಿವೆ.. ಇಲ್ಲಿ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ಹೆಚ್ಚಿವೆ. ಅದು ಬಿಟ್ಟರೆ ಹಿಂದುಳಿದ ಹಾಗೂ ದಲಿತ ಮತಗಳು ಹೆಚ್ಚಿವೆ. ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ಕ್ಷೇತ್ರದಲ್ಲಿ ಬಲಜಿಗ ಮತಗಳು ಹೆಚ್ಚಿವೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು;
ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು; ಕಳೆದ ಅಂದ್ರೆ 2019ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಿ.ಎನ್.ಬಚ್ಚೇಗೌಡ ಅವರು ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ವಿರುದ್ಧ ಭಾರಿ ಬಹುಮತದಿಂದ ಗೆದ್ದು ಬೀಗಿದ್ದರು. ಆಗ ಬಿಜೆಪಿಯ ಬಿಎನ್ ಬಚ್ಚೇಗೌಡ 745912 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ 5,63,802 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದರು. ಈ ಹಿಂದೆ ಎರಡು ಬಾರಿ ಸತತವಾಗಿ ಸಂಸದರಾಗಿದ್ದ ವೀರಪ್ಪ ಮೊಯ್ಲಿ ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಈ ಬಾರಿ ವೀರಪ್ಪ ಮೊಯ್ಲಿಯವರು ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದಾರೆ. ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ವಯಸ್ಸಿನ ಕಾರಣದಿಂದ ಕಣದಿಂದ ಹಿಂದೆ ಸರಿದ್ದಾರೆ. ಈ ನಡುವೆ ಅವರ ಪುತ್ರ ಶರತ್ ಬಚ್ಚೇಗೌಡ ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದಾರೆ.
ಇದನ್ನೂ ಓದಿ;ಶಿವಮೊಗ್ಗ ಲೋಕಸಭಾ; ರಾಘವೇಂದ್ರ ಸೋಲಿಸಲು, ಗೀತಾ ಗೆಲ್ಲಿಸಲು ಕಾರಣಗಳೇ ಇಲ್ಲ!
ಜಾತಿ ನೋಡಿ ಮತ ಹಾಕದ ಚಿಕ್ಕಬಳ್ಳಾಪುರದ ಜನ;
ಜಾತಿ ನೋಡಿ ಮತ ಹಾಕದ ಚಿಕ್ಕಬಳ್ಳಾಪುರದ ಜನ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎಂದಿಗೂ ಇಲ್ಲಿನ ಮತದಾನ ಜಾತಿ ನೋಡಿ ಮತ ಹಾಕಿಲ್ಲ.. ಈ ಕಾರಣಕ್ಕಾಗಿಯೇ ಅತಿ ಕಡಿಮೆ ಮತಗಳನ್ನು ಹೊಂದಿರುವ ಈಡಿಗ ಸಮುದಾಯದ ಜಾಲಪ್ಪ, ಬ್ರಾಹ್ಮಣ ಸಮುದಾಯದ ಕೃಷ್ಣರಾವ್, ದೇವಾಡಿಗ ಸಮಾಜದ ವೀರಪ್ಪ ಮೊಯ್ಲಿ ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಕೊಂಚ ಜಾತಿ ಕೆಲಸ ಮಾಡುತ್ತಿದ್ದೆ. ಈ ಕ್ಷೇತ್ರದಲ್ಲಿ ಮೊರಸು ಒಕ್ಕಲಿಗರು ಹೆಚ್ಚಿದ್ದಾರೆ. ಡಾ.ಕೆ.ಸುಧಾಕರ್ ಅದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರಿಗೇ ಟಿಕೆಟ್ ಕೊಟ್ಟರೆ ಬಿಜೆಪಿಗೆ ಗೆಲುವು ಸುಲಭ ಎಂಬ ವಾದ ಮುಂದಿಡಲಾಗಿದೆ. ಇನ್ನು ಎಸ್.ಆರ್.ವಿಶ್ವನಾಥ್ ಅವರು ಕೂಡಾ ಒಕ್ಕಲಿಗರೇ ಆಗಿದ್ದರೂ, ಅವರು ಆಂಂಧ್ರದ ರೆಡ್ಡಿಗಳು. ಹೀಗಾಗಿ, ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಬರುವ ಒಕ್ಕಲಿಗರು, ಈ ರೆಡ್ಡಿಗಳಿಗೂ ಸಂಬಂಧವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಈ ಕ್ಷೇತ್ರದಲ್ಲಿ ಜಾತಿ, ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗುತ್ತಾರೆ ಅನ್ನೋದು ಈಗಾಗಲೇ ಸಾಬೀತಾಗಿದೆ. ಹೀಗಾಗಿ, ಬಿಜೆಪಿ ಹೈಕಮಾಂಡ್ ಜಾರಿಗೆ ಮಣೆ ಹಾಕುತ್ತೆ ಅನ್ನೋದು ಕುತೂಹಲದ ಸಂಗತಿ.
ಇದನ್ನೂ ಓದಿ; ಬೆಂಗ್ಳೂರಲ್ಲಿ ಪ್ರಭಾಸ್-ಅಲ್ಲು ಅರ್ಜುನ್ ಫ್ಯಾನ್ಸ್ ಕಿತ್ತಾಟ; ಓರ್ವನಿಗೆ ಹಿಗ್ಗಾಮುಗ್ಗಾ ಥಳಿತ!