Politics

ಏಕಾಂಗಿಯಾಗಿ ಬಂದು ಪೂಜೆ ಸಲ್ಲಿಸಿದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ!

ಬೆಂಗಳೂರು; ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.. ಎಲ್ಲೆಡೆ ಮತದಾನ ಶಾಮತಿಯುತವಾಗಿ ನಡೆಯುತ್ತಿದೆ.. ಕೆಲವೆಡೆ ಮತಯಂತ್ರಗಳು ಕೈಕೊಟ್ಟು ಕೆಲಕಾಲ ಗೊಂದಲ ಉಂಟಾಗಿತ್ತಾದರೂ, ನಂತರ ಎಲ್ಲಾ ಸಮಸ್ಯೆಗಳೂ ಬಗೆಹರಿದಿವೆ.. ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.. ಇನ್ನು ಅಭ್ಯರ್ಥಿಗಳು ಕೂಡಾ ಬೆಳಗ್ಗೆಯೇ ಮತದಾನ ಮಾಡಿದ್ದಾರೆ.. ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಮತ ಚಲಾಯಿಸಿದ್ದಾರೆ..

ಇದನ್ನೂ ಓದಿ; ಮಕ್ಕಳನ್ನು ಈ ರೀತಿ ಬೈದರೆ ನಿಮಗೇ ನಷ್ಟ..!; ಮಕ್ಕಳನ್ನು ಬೆಳೆಸೋದೂ ಒಂದು ಕಲೆ!

 ಮತ ಚಲಾಯಿಸಿದ ಪ್ರಜ್ವಲ್‌ ರೇವಣ್ಣ;

ಹಾಲಿ ಸಂಸದ ಹಾಗೂ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪ್ರತಿ ಬಾರಿ ಕುಟುಂಬದ ಸದಸ್ಯರ ಜೊತೆ ಬಂದು ಮತ ಹಾಕುತ್ತಿದ್ದರು.. ಆದ್ರೆ ಈ ಬಾರಿ ಅವರ ಜೊತೆ ತಂದೆ ರೇವಣ್ಣ ಹಾಗೂ ತಾಯಿ ಭವಾನಿ ಬಂದಿರಲಿಲ್ಲ.. ಸಹೋದರ ಸೂರಜ್‌ ರೇವಣ್ಣ ಹಾಗೂ ಅವರ ಪತ್ನಿ ಜೊತೆಗಿದ್ದರು.. ಕಳೆದ ಎರಡು ದಿನಗಳಿಂದ ಪ್ರಜ್ವಲ್‌ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು.. ಇದರಿಂದಾಗಿ ಪ್ರಜ್ವಲ್‌ ಸ್ವಲ್ಪ ಮಂಕಾದಂತೆ ಕಾಣುತ್ತಿತ್ತು..

ಇನ್ನು ಮತದಾನಕ್ಕೂ ಮೊದಲು ಮಾತನಾಡಿದ ಪ್ರಜ್ವಲ್‌ ರೇವಣ್ಣ ಅವರು, ನಾವೆಲ್ಲಾ ಒಟ್ಟಾಗಿದ್ದೇನೆ.. ನಾನು ಗೆದ್ದೇ ಗೆಲ್ಲುತ್ತೇನೆ.. ಎನ್‌ಡಿಎ ಅಭ್ಯರ್ಥಿಗಳೆಲ್ಲರೂ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.. ಮೊದಲಿಗೆ ಪ್ರಜ್ವಲ್‌ ರೇವಣ್ಣ ಅವರು ಹರದನಹಳ್ಳಿಯಲ್ಲಿರುವ ದೇವೇಶ್ವರ ದೇವಸ್ಥಾನಕ್ಕೆ ಒಬ್ಬರೇ ಭೇಟಿ ನೀಡಿ ಪೂಜೆ ಸಲ್ಲಿಸಿದರು.. ಅನಂತರ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು..

ಇದನ್ನೂ ಓದಿ; ಮತಯಂತ್ರ ಕೈಕೊಟ್ಟು ರಾಜ್ಯದ ಹಲವೆಡೆ ಗೊಂದಲ; ಮತದಾರರ ಆಕ್ರೋಶ

ಕುಟುಂಬದೊಂದಿಗೆ ಮತ ಚಲಾಯಿಸಿದ ಯದುವೀರ್;

ಇನ್ನು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಅವರು ಮೈಸೂರಿನಲ್ಲಿ ಮತ ಚಲಾವಣೆ ಮಾಡಿದರು.. ಈ ವೇಳೆ ರಾಜಮಾತೆ ಪ್ರಮೋದ ದೇವಿ ಹಾಗೂ ಯದುವೀರ್ ಪತ್ನಿ ತ್ರಿಶಿಕಾ ದೇವಿ‌ ಕೂಡಾ ಇದ್ದರು.. ಅಗ್ರಹಾರದ ಶ್ರೀಕಾಂತ ಶಾಲೆಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಅವರು ಮತ ಚಲಾವಣೆ ಮಾಡಿದರು..

ಇದನ್ನೂ ಓದಿ; ರಜೆ, ಹಣಕ್ಕಾಗಿ ಗರ್ಭಿಣಿ ಎಂದು ಸುಳ್ಳು ಮಾಹಿತಿ; 17 ಬಾರಿ ಸುಳ್ಳು ಹೇಳಿ ಸಿಕ್ಕಿಬಿದ್ದ ನಾರಿ!

ಪೆರೇಸಂದ್ರದಲ್ಲಿ ಡಾ.ಕೆ.ಸುಧಾಕರ್ ಮತ ಚಲಾವಣೆ;

ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ತಾಲ್ಲೂಕು ಪೆರೇಸಂದ್ರ ಗ್ರಾಮದಲ್ಲಿ ಮತದಾನ ಮಾಡಿದ್ದಾರೆ. ಪತ್ನಿ ಡಾ ಪ್ರೀತಿ ಹಾಗೂ ತಂದೆ ಪಿ.ಎನ್.ಕೇಶವರೆಡ್ಡಿ ಅವರೊಂದಿಗೆ ಬಂದು ಮತದಾನ ಮಾಡಿದ್ದಾರೆ. ಚಿಕ್ಕಬಳ್ಳಾಪುರದ ಪೆರೇಸಂದ್ರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 21 ರಲ್ಲಿ ಮತದಾನ ಮಾಡಿದ್ದಾರೆ.

 

Share Post