Lifestyle

ಮಕ್ಕಳನ್ನು ಈ ರೀತಿ ಬೈದರೆ ನಿಮಗೇ ನಷ್ಟ..!; ಮಕ್ಕಳನ್ನು ಬೆಳೆಸೋದೂ ಒಂದು ಕಲೆ!

ಮಕ್ಕಳನ್ನು ಬೆಳೆಸುವಾಗ ಪಾಲಕರು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.. ಬಹುತೇಕ ಮನೆಗಳಲ್ಲಿ ಪೋಷಕರು, ಯಾವಾಗಲೂ ಮಕ್ಕಳನ್ನು ದೂಷಿಸುತ್ತಿರುತ್ತಾರೆ.. ನಿನಗೇನೂ ಗೊತ್ತಿಲ್ಲ, ನಿನಗೆ ಏನೂ ಬರೋದಿಲ್ಲ ಹೀಗೆ ಏನೇನೋ ಬೈಯ್ಯುತ್ತಿರುತ್ತಾರೆ.. ಹಾಗೆ ಬೈದರೆ ಬುದ್ಧಿ ಕಲಿಯುತ್ತಾರೆ ಎಂದು ಪೋಷಕರು ಭಾವಿಸಿರುತ್ತಾರೆ.. ಆದ್ರೆ ಇದರಿಂದ ಮಕ್ಕಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.. ಹೀಗಾಗಿ, ಈ ಕೆಳಗಿನಂತೆ ಮಕ್ಕಳನ್ನು ದೂಷಣೆ ಮಾಡುವುದನ್ನು ನಿಲ್ಲಿಸಿ..

ಇದನ್ನೂ ಓದಿ; ಮತಯಂತ್ರ ಕೈಕೊಟ್ಟು ರಾಜ್ಯದ ಹಲವೆಡೆ ಗೊಂದಲ; ಮತದಾರರ ಆಕ್ರೋಶ

ನೀನು ಉದ್ಧಾರವಾಗೋದಿಲ್ಲ;

ಎಲ್ಲಾ ಮಕ್ಕಳೂ ಕೂಡಾ ಒಂದೇ ರೀತಿ ಇರುವುದಿಲ್ಲ.. ಕೆಲವರು ಕ್ರಿಯಾಶೀಲರಾಗಿದ್ದರೆ ಇನ್ನು ಕೆಲವರು ಮಂದವಾಗಿರುತ್ತಾರೆ.. ಕೆಲವರು ಓದಿನಲ್ಲಿ ಮುಂದಿದ್ದರೆ, ಕೆಲವರು ಆಟದಲ್ಲಿ ಮುಂದಿರುತ್ತಾರೆ.. ಯಾವ ಕ್ಷೇತ್ರದಲ್ಲಿ ಮಗು ಆಸಕ್ತಿ ತೋರಿಸುತ್ತದೋ ಅದರಲ್ಲಿ ಆ ಮಗುವನ್ನು ಹೆಚ್ಚು ತೊಡಗಿಸಬೇಕು.. ಅದು ಬಿಟ್ಟು ನೀನು ಉದ್ಧಾರವಾಗೋದಿಲ್ಲ, ನೀವು ಫೇಲ್‌ ಆಗುತ್ತೀಯ ಎಂದು ಬೈಯ್ಯಬಾರದು.. ಹೀಗೆ ಬೈಯ್ಯುವುದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ಕುಗ್ಗುತ್ತಾ ಹೋಗುತ್ತದೆ..

ಇದನ್ನೂ ಓದಿ;ರಜೆ, ಹಣಕ್ಕಾಗಿ ಗರ್ಭಿಣಿ ಎಂದು ಸುಳ್ಳು ಮಾಹಿತಿ; 17 ಬಾರಿ ಸುಳ್ಳು ಹೇಳಿ ಸಿಕ್ಕಿಬಿದ್ದ ನಾರಿ!

ಚಿಕ್ಕವರು ನೀವು, ನಿಮಗೇನೂ ಗೊತ್ತಿಲ್ಲ;

ಮಕ್ಕಳಿಗೆ ಕುತೂಹಲ ಹೆಚ್ಚಿರುತ್ತದೆ.. ಏನಾದರೊಂದು ಪ್ರಶ್ನೆ ಕೇಳುತ್ತಿರುತ್ತವೆ.. ಅಷ್ಟೇ ಏಕೆ, ಏನಾದರೊಂದು ವಿಷಯ ತಿಳಿದುಕೊಂಡು ಅದರ ಬಗ್ಗೆ ಪೋಷಕರ ಜೊತೆ ಮಾತನಾಡಲು ಬರುತ್ತವೆ.. ಆಗ ಮಕ್ಕಳ ಮಾತನ್ನು ಪೋಷಕರು ಕೇಳೋದಿಲ್ಲ.. ಬದಲಾಗಿ ಸುಮ್ನಿರಿ.. ಚಿಕ್ಕ ಮಕ್ಕಳು ನೀವು.. ನಿಮಗೇನೂ ಗೊತ್ತಾಗೋದಿಲ್ಲ ಎಂದು ಹೇಳುತ್ತಿರುತ್ತಾರೆ.. ಹಾಗೆ ಮಾಡುವುದು ತಪ್ಪು.. ಮಕ್ಕಳಿಗೆ ಮಾತನಾಡಲು ಬಿಡಬೇಕು.. ಅವರು ತಪ್ಪು ಮಾತನಾಡುತ್ತಿದ್ದರೆ ಅದನ್ನು ತಿದ್ದಬೇಕು.. ಅದು ಬಿಟ್ಟು ಬಾಯಿ ಮುಚ್ಚಿಸುವುದು ತಪ್ಪಾಗುತ್ತದೆ..

ಇದನ್ನೂ ಓದಿ; ಕೊಪ್ಪದಲ್ಲಿ ಮದುವೆ ಊಟ ಸೇವಿಸಿ 150 ಮಂದಿ ಅಸ್ವಸ್ಥ!

ಹೋಲಿಕೆ ಮಾಡಬಾರದು;
ಇತರರನ್ನು ತೋರಿಸುವುದರ ಮೂಲಕ ಅವರು ಇದನ್ನು ಮಾಡುತ್ತಿದ್ದಾರೆ. ಅವರು ತುಂಬಾ ಅಂಕಗಳನ್ನು ಪಡೆಯುತ್ತಾರೆ.. ಆದ್ರೆ ನಿನ್ನಿಂದ ಏನನ್ನೂ ಸಾಧಿಸಲು ಆಗುತ್ತಿಲ್ಲ.. ಹೀಗೆ ಪಕ್ಕದ ಮನೆಯವರೋ ಎದುರಿನ ಮನೆಯ ಮಕ್ಕಳನ್ನೋ ತೋರಿಸಿ ಹೋಲಿಕೆ ಮಾಡಬಾರದು.. ಯಾಕಂದ್ರೆ, ಒಬ್ಬೊಬ್ಬರ ಟ್ಯಾಲೆಂಟ್‌ ಒಂದೊಂದು ರೀತಿ ಇರುತ್ತದೆ.. ಮಕ್ಕಳನ್ನು ಬೈಯ್ಯುವ ಬದಲು, ಎದುರಿನ ಮನೆಯವರು, ಪಕ್ಕದ ಮನೆಯವರು ಮಕ್ಕಳಿಗೆ ಯಾವ ರೀತಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿದುಕೊಳ್ಳಿ.. ಅದೇ ರೀತಿ ನಿಮ್ಮ ಮಕ್ಕಳನ್ನೂ ಪ್ರೋತ್ಸಾಹಿಸಿ.. ಅದರ ಬದಲು ಹೋಲಿಕೆ ಮಾಡಿ ಬೈಯ್ಯಬೇಡಿ..

ಇದನ್ನೂ ಓದಿ; ಕಂಕುಳಿನ ಕೂದಲು ಮಾರಿ ಲಕ್ಷ ಲಕ್ಷ ಸಂಪಾದಿಸುತ್ತಿರುವ ರೂಪದರ್ಶಿ!

ಲಿಂಗ ತಾರತಮ್ಯ;
ಹುಡುಗಿಯರೇ ಹೀಗೆ ಮಾಡ್ಬೇಕು.. ಹುಡುಗರ ಮುಂದೆ ಹಾಗಾಗತ್ತೆ ಅಂತ ಹೇಳಬೇಡಿ. ಈ ಕಾರಣದಿಂದಾಗಿ, ಅವರ ಪುಟ್ಟ ಮನಸ್ಸಿನಲ್ಲಿ ಅಸಂಗತತೆಗಳು ಸ್ಫೋಟಗೊಳ್ಳುತ್ತವೆ. ಹಾಗಾಗಿ, ಹಾಗೆ ಇರುವುದರ ಬದಲು ಅವರನ್ನು ಹಾಗೆಯೇ ನೋಡಿಕೊಳ್ಳಿ. ಯಾವತ್ತಿಗೂ ಲಿಂಗ ತಾರತಮ್ಯ ಮಾಡಿ ಮಾತನಾಡಲು ಹೋಗಬೇಡಿ..

Share Post