HealthLifestyle

ರಜೆ, ಹಣಕ್ಕಾಗಿ ಗರ್ಭಿಣಿ ಎಂದು ಸುಳ್ಳು ಮಾಹಿತಿ; 17 ಬಾರಿ ಸುಳ್ಳು ಹೇಳಿ ಸಿಕ್ಕಿಬಿದ್ದ ನಾರಿ!

ಇಟಲಿ; ಕಚೇರಿಯಲ್ಲಿ ರಜೆ ಪಡೆಯುವುದಕ್ಕಾಗಿ ಏನೇನೋ ನಾಟಕ ಆಡೋರನ್ನು ನೋಡಿದ್ದೇವೆ.. ಆದ್ರೆ ಈ ಮಹಿಳೆ ಆಡಿದ ನಾಟಕ ಯಾರೂ ಆಡಿರೋದಕ್ಕೆ ಸಾಧ್ಯವೇ ಇಲ್ಲ.. ಯಾಕಂದ್ರೆ ಇಲ್ಲೊಬ್ಬಳು ಮಹಿಳೆ, ಗರ್ಭಿಣಿಯಾಗಿದ್ದೇನೆ ಎಂದು ಬರೋಬ್ಬರಿ 17 ಬಾರಿ ವೇತನ ಸಹಿತ ಹೆರಿಗೆ ರಜೆ ಪಡೆದಿದ್ದಾಳೆ.. ಪ್ರತಿ ಬಾರಿ ಆರು ತಿಂಗಳು ಹೆರಿಗೆ ರಜೆ ಪಡೆದಿದ್ದು, ಸರ್ಕಾರದಿಂದ ಸಿಗುವ ಆರ್ಥಿಕ ನೆರವು ಒಟ್ಟು 98 ಲಕ್ಷ ರೂಪಾಯಿ ಪಡೆದಿದ್ದಾಳೆ..

ಇದನ್ನೂ ಓದಿ; ಕೊಪ್ಪದಲ್ಲಿ ಮದುವೆ ಊಟ ಸೇವಿಸಿ 150 ಮಂದಿ ಅಸ್ವಸ್ಥ!

17 ಬಾರಿ ಹೆರಿಗೆ ರಜೆ ಪಡೆದಿರುವ ಮಹಿಳೆ!;

ಇಟಲಿಯ ಬಾರ್ಬರಾ ಐಯೋಲೆ ಎಂಬ 50 ವರ್ಷದ ಮಹಿಳೆ ಸುಮಾರು 24 ವರ್ಷಗಳಿಂದ ಸತತವಾಗಿ 17 ಸಲ ಹೆರಿಗೆ ಪಡೆದಿದ್ದಾಳೆ.. ಪ್ರತಿ ಹೆರಿಗೆ ರಜೆಯಾಗಿ ಆರು ತಿಂಗಳು ರಜೆ ತೆಗೆದುಕೊಂಡಿದ್ದಾಳೆ.. ಇದಕ್ಕೆ ಸಂಬಳ ಕೂಡಾ ಪಡೆದಿದ್ದಾಳೆ.. ಸಾಲದೆಂಬಂತೆ ಸರ್ಕಾರದಿಂದ ಸಿಗುವ ಆರ್ಥಿಕ ನೆರವನ್ನೂ ಪಡೆದಿದ್ದಾಳೆ.. ಒಟ್ಟು 17 ಹೆರಿಗೆಗಳಿಗೆ 98 ಲಕ್ಷ ರೂಪಾಯಿಗೂ ಅಧಿಕ ನೆರವನ್ನು ಪಡೆದುಕೊಂಡಿದ್ದಾಳೆ..

ಇದನ್ನೂ ಓದಿ; ಕಂಕುಳಿನ ಕೂದಲು ಮಾರಿ ಲಕ್ಷ ಲಕ್ಷ ಸಂಪಾದಿಸುತ್ತಿರುವ ರೂಪದರ್ಶಿ!

ಎಲ್ಲಾ ಸುಳ್ಳು ಲೆಕ್ಕ.. ಪರಿಹಾರ ಮಾತ್ರ ಪಕ್ಕಾ..!;

ಈ ಮಹಿಳೆ ಯಾವಾಗಲೂ ಬರೀ ಸುಳ್ಳು ಹೇಳುತ್ತಿದ್ದಳು.. ಗರ್ಭಿಣಿಯಾಗದಿದ್ದರೂ, ಗರ್ಭಿಣಿ ಎಂದು ಹೇಳಿಕೊಂಡು ರಜೆ ಹಾಗೂ ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದಳು.. 12 ಬಾರಿ ಗರ್ಭಪಾತ ಆಗಿದೆ ಎಂದು ಹೇಳಿಕೊಂಡಿರುವ ಈ ಮಹಿಳೆ ಐದು ಮಕ್ಕಳಿಗೆ ಜ್ನಮ ನೀಡಿರೋದಾಗಿ ಹೇಳಿಕೊಂಡಿದ್ದಾಳೆ.. ಆದ್ರೆ ಈಕೆ ಹೆಳುತ್ತಿರುವುದೆಲ್ಲಾ ಸುಳ್ಳು ಅನ್ನೋದು ಸಾಬೀತಾಗಿದೆ.. ಹೀಗಾಗಿ, ಪೊಲೀಸರು ಈಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ…

ಇದನ್ನೂ ಓದಿ; ಇಂದು ಎಲ್ಲೆಲ್ಲಿ ಮತದಾನ..?; ಪ್ರಮುಖ ಅಭ್ಯರ್ಥಿಗಳು ಯಾರು..?

youtube

ಮನೆಯಲ್ಲೇ ಇದ್ದು ಸೌಲಭ್ಯ ಪಡೆಯುವ ಹುನ್ನಾರ;

ಗರ್ಭಿಣಿಯರಿಗೆ ಇಟಲಿಯಲ್ಲಿ ಆರು ತಿಂಗಳ ಹೆರಿಗೆ ರಜೆ ಸಿಗುತ್ತದೆ.. ಮನೆಯಲ್ಲಿದ್ದರೂ ಆರು ತಿಂಗಳು ಇವರಿಗೆ ಸಂಬಳ ಕೂಡಾ ಸಿಗುತ್ತದೆ.. ಇದರ ಜೊತೆಗೂ ಸರ್ಕಾರದಿಂದಲೂ ಆರ್ಥಿಕ ನೆರವು ಸಿಗುತ್ತದೆ.. ಹೀಗಾಗಿ ಎರಡೂ ಕಡೆಯಿಂದ ಹಣ ಪಡೆದು ಮನೆಯಲ್ಲೇ ಆರಾಮಾಗಿ ಎಂಜಾಯ್‌ ಮಾಡಬಹುದೆಂದು ಈ ಮಹಿಳೆ ಹೀಗೆ 17 ಬಾರಿ ಸುಳ್ಳು ಹೇಳಿದ್ದಾಳೆ..

ಇದನ್ನೂ ಓದಿ; ವೋಟರ್‌ ಐಡಿ ಇಲ್ಲದಿದ್ದರೂ ಮತ ಹಾಕಬಹುದು; ಹೇಗೆ ಗೊತ್ತಾ..?

ಹೊಟ್ಟೆಯಲ್ಲಿ ದಿಂಬು ಇಟ್ಟುಕೊಳ್ಳುತ್ತಿದ್ದ ಮಹಿಳೆ;

ಗರ್ಭಿಣಿ ಎಂದು ತೋರಿಸಿಕೊಳ್ಳವುದಕ್ಕೆ ಮಹಿಳೆ ಹೊಟ್ಟೆಯಲ್ಲಿ ದಿಂಬು ಇಟ್ಟುಕೊಂಡು ಕಚೇರಿಗೆ ಬರುತ್ತಿದ್ದಳು.. ಕೆಲ ತಿಂಗಳ ನಂತರ ರಜೆ ಪಡೆಯುತ್ತಿದ್ದಳು.. ಹೆರಿಗೆಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ತಾನು ಕೆಲಸ ಮಾಡುವ ಸಂಸ್ಥೆಗೆ ನೀಡುತ್ತಿದ್ದಳು.. ಜೊತೆಗೆ ಸರ್ಕಾರಕ್ಕೂ ಅದೇ ದಾಖಲೆಗಳನ್ನು ಸಲ್ಲಿಸಿ, ಸರ್ಕಾರದಿಂದ ಸಿಗುವ ಆರ್ಥಿಕ ನೆರವನ್ನು ಕೂಡಾ ತಪ್ಪದೇ ಪಡೆಯುತ್ತಿದ್ದಳು.. ನಿಜವಾಗಿ ಆಕೆ ಇದುವರೆಗೂ ಒಮ್ಮೆಯೂ ಗರ್ಭ ಧರಿಸಿಲ್ಲವಂತೆ.. ಎಲ್ಲವನ್ನೂ ಸುಳ್ಳು ಹೇಳಿ ಸವಲತ್ತು ಪಡೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ..

ಮಹಿಳೆಯ ಪತಿ ಡೇವಿಡ್ ಪಿಜ್ಜಿನಾಟೊ ಕೂಡಾ ಆಕೆಯ ವಿರುದ್ಧ ಸಾಕ್ಷ್ಯ ನುಡಿದಿದ್ದಾನೆ.. ಪೊಲೀಸರು ಆಕೆಯನ್ನು ಬಂಧಿಸಿದ್ದು, ಕೋರ್ಟ್‌ ಆಕೆಗೆ ಒಂದು ವರ್ಷ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ..

ಇದನ್ನೂ ಓದಿ; ಖ್ಯಾತ ನಟಿ ತಮನ್ನಾಗೆ ಮಹಾರಾಷ್ಟ್ರ ಪೊಲೀಸರಿಂದ ಸಮನ್ಸ್‌

 

Share Post