BengaluruNationalPolitics

ನಾನು ಒಂದೂ ವರ್ಗಾವಣೆ ಮಾಡಿಲ್ಲ; ಹೆಚ್ಡಿಕೆಗೆ ಡಿ.ಕೆ.ಶಿವಕುಮಾರ್‌ ಟಾಂಗ್

ನವದೆಹಲಿ; ನಾನು ಇದುವರೆಗೆ ಒಂದೂ ವರ್ಗಾವಣೆ ಮಾಡಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್‌ ನೀಡಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ವರ್ಗಾವಣೆ ದಂದೆ ನಡೆಯುತ್ತಿದೆ ಎಂದು ಹೇಳಿಕೆಗೆ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್‌ನಲ್ಲಿ ಬರೀ ವರ್ಗಾವಣೆ ದಂದೆ ನಡೆಯುತ್ತಿದೆ. ಒಂದೇ ಹುದ್ದೆಗೆ ವರ್ಗಾವಣೆ ಮಾಡಿ ಹಲವರಿಗೆ ಶಿಫಾರಸು ಮಾಡಲಾಗಿದೆ ಎಂದು ಹೆಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದರು. ಇದಕ್ಕೆ ಉತ್ತರ ಕೊಟ್ಟ ಡಿ.ಕೆ.ಶಿವಕುಮಾರ್‌, ಒತ್ತಡದಲ್ಲಿ ಸಿಎಂ ಕಚೇರಿಯಿಂದ ಆದೇಶ ಆಗಿರಬಹುದು. ಈ ಬಗ್ಗೆ ಯಾರಿಗೆ ಪತ್ರ ಹೋಗಿದೆ ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

Share Post