Politics

ಒಂದೇ ಕುಟುಂಬದ 90 ಮಂದಿ ಒಟ್ಟಿಗೆ ಬಂದು ಮತದಾನ

ಚಿಕ್ಕಬಳ್ಳಾಪುರ; ದಶಕಗಳ ಹಿಂದೆ ಕೂಡು ಕುಟುಂಬಗಳು ಹೆಚ್ಚಿದ್ದವು.. ಒಂದೊಂದು ಮನೆಯಲ್ಲಿ ಐವತ್ತು, ನೂರು ಜನ ಇರುತ್ತಿದ್ದರು.. ಆದ್ರೆ ಇತ್ತೀಚಿನ ದಿನಗಳಲ್ಲಿ ಇಂತಹ ಕುಟುಂಬಗಳು ಕಡಿಮೆಯಾಗುತ್ತಿವೆ.. ಅಣ್ಣ, ತಮ್ಮಂದಿರೇ ಒಟ್ಟಿಗೇ ಇರುತ್ತಿಲ್ಲ.. ಆದ್ರೆ ಇಲ್ಲೊಂದು ಕುಟುಂಬ ಇದೆ.. ಬೇರೆ ಬೇರೆ ಇದ್ದರೂ ಕೂಡಾ ಮತದಾನ ಮಾತ್ರ ಒಟ್ಟಿಗೆ ಬಂದು ಮಾಡುತ್ತಾರೆ.. ಈ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ..

ಚಿಕ್ಕಬಳ್ಳಾಪುರದ 19 ನೇ ವಾರ್ಡ್‌ನಲ್ಲಿ ಬಾದಾಮ್‌ ಫ್ಯಾಮಿಲಿ.. ಈ ಫ್ಯಾಮಿಲಿಯ ಸದಸ್ಯರು ಎಲ್ಲಿಯೇ ಇದ್ದರೂ ಚುನಾವಣೆಯಲ್ಲಿ ಪತ ಚಲಾವಣೆ ಮಾಡೇ ಮಾಡುತ್ತಾರೆ..  ಅದೂ ಕೂಡಾ ಇಡೀ ಕುಟುಂಬದ ಜನ ಒಟ್ಟಿಗೆ ಮತ ಚಲಾವಣೆ ಮಾಡುತ್ತಾರೆ.. ಇವತ್ತೂ ಕೂಡಾ ಚಿಕ್ಕಬಳ್ಳಾಪುರದ ಮತಗಟ್ಟೆ ಸಂಖ್ಯೆ 161ರಲ್ಲಿ ಎಲ್ಲಾ 90 ಮಂದಿಯೂ ಒಟ್ಟಿಗೆ ಮತ ಚಲಾವಣೆ ಮಾಡಿದ್ದಾರೆ…

ಬಾದಾಮ್‌ ಫ್ಯಾಲಿಮಿಯ 90 ಮಂದಿಯೂ ಒಟ್ಟಿಗೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ್ದಾರೆ.. ಅನಂತರ ಫ್ಯಾಮಿಲಿಯ ಹಲವರು ಕ್ಯಾಮರಾಗೆ ಫೋಸ್‌ ಕೂಡಾ ಕೊಟ್ಟಿದ್ದಾರೆ.. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರಕ್ಷಾ ರಾಮಯ್ಯ ಹಾಗೂ ಬಿಜೆಪಿಯಿಂದ ಡಾ.ಕೆ.ಸುಧಾಕರ್‌ ಕಣದಲ್ಲಿದ್ದಾರೆ..

 

Share Post