CrimeNational

ಹನುಮಾನ್‌ಗಢದಲ್ಲಿ ಸೇನಾ ವಿಮಾನ ಪತನ; ಮೂವರ ದುರ್ಮರಣ

ಜೈಪುರ್; ಭಾರತೀಯ ಸೇನಾ ಯುದ್ಧ ವಿಮಾನ ಮಿಗ್-21 ಪತನಗೊಂಡು ದುರಂತ ಸಂಭವಿಸಿದೆ. ರಾಜಸ್ಥಾನದ ಹನುಮಾನ್‍ಗಢದಲ್ಲಿ ಇಂದು ಬೆಳಗ್ಗೆ ಈ ದುರಂತ ನಡೆದಿದ್ದು, ಘಟನೆಯಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಸೂರತ್‍ಗಢದಿಂದ ವಿಮಾನ ಟೇಕಾಫ್‌ ಆಗಿದ್ದು, ಕೆಲ ಹೊತ್ತಿನಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಪೈಲಟ್‌ ಹಾಗೂ ಸಹ ಪೈಲಟ್‌ ಪ್ಯಾರಾಚೂಟ್‌ ಧರಿಸಿ ವಿಮಾನದಿಂದ ಕೆಳಗೆ ಹಾರಿದ್ದಾರೆ. ಇದರಿಂದಾಗಿ ಇಬ್ಬರೂ ಸುರಕ್ಷಿತವಾಗಿ ಬದುಕಿಬಂದಿದ್ದಾರೆ. ಆದ್ರೆ ವಿಮಾನ ಮನೆಯೊಂದರ ಮೇಲೆ ಬಿದ್ದಿದ್ದು, ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೆ. 4 ರಂದು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನವಾಗಿತ್ತು. ಇದಾದ ಮೇಲೆ ಈಗ ಮತ್ತೆ ವಿಮಾನ ಪತನಗೊಂಡಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Share Post