NationalPolitics

ಛತ್ತಿಸ್‌ಗಢ ವಿಧಾನಸಭಾ ಚುನಾವಣೆ; ಐಇಡಿ ಸ್ಫೋಟಿಸಿದ ನಕ್ಸಲರು

ಛತ್ತೀಸ್‌ಗಢ; ಛತ್ತಿಸ್‌ ಘಡದಲ್ಲಿ ಇಂದು ಮೊದಲ ಹಂತದ ಚುನಾವಣೆ ನಡೆದಿದೆ. ಮೊದಲ ಹಂತದಲ್ಲೇ ಹಲವು ಅಹಿತಕರ ಘಟನೆಗಳು ನಡೆದಿವೆ. ಇಲ್ಲಿನ ಸುಕ್ಮಾದಲ್ಲಿ ಐಇಡಿ ಸ್ಫೋಟ ಸಂಭವಿಸಿದ್ದು, ಸಿಆರ್‌ಪಿಎಫ್ ಕಮಾಂಡೋ ಗಾಯಗೊಂಡಿದ್ದಾರೆ.
   ಮೊದಲ ಹಂತದಲ್ಲಿ ಮಾವೋವಾದಿ ಪೀಡಿತ ಪ್ರದೇಶಗಳು ಸೇರಿದಂತೆ 20 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಚುನಾವಣಾ ಆಯೋಗವು 10 ಕ್ಷೇತ್ರಗಳಾದ ಮೊಹ್ಲಾ-ಮಾನ್‌ಪುರ, ಅಂತಗಢ, ಭಾನುಪ್ರತಾಪುರ, ಕಂಕೇರ್, ಕೇಶ್ಕಲ್, ಕೊಂಡಗಾಂವ್, ನಾರಾಯಣಪುರ, ದಾಂತೇವಾಡ, ಬಿಜಾಪುರ ಮತ್ತು ಕೊಂಟಾಗಳಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ಮಾತ್ರ ಮತದಾನ ನಡೆಸಲಿದೆ. ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ಅವರು ತಮ್ಮ ಪಕ್ಷದ ನಾಯಕರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದು, ಸ್ಫೋಟದಿಂದ ಜನರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಮತ್ತು ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
Share Post