Politics

Himachala;ಅಡ್ಡ ಮತದಾನ ಮಾಡಿದ 6 ಶಾಸಕರು ಅನರ್ಹ; ಸರ್ಕಾರ ಉಳಿಸ್ತಾರಾ ಡಿಕೆಶಿ..?

ಶಿಮ್ಲಾ; ಹಿಮಾಚಲದಲ್ಲಿ ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆರು ಮಂದಿ ಕಾಂಗ್ರೆಸ್‌ ಶಾಸಕರು ಬಿಜೆಪಿ ಪರವಾಗಿ ಅಡ್ಡ ಮತದಾನ ಮಾಡಿದ್ದರು. ಈ ನಡುವೆ ಸಿಎಂ ರಾಜೀನಾಮೆ ನೀಡುವಂತೆ ಕೆಲವರು ಪಟ್ಟು ಹಿಡಿದಿದ್ದರು. ಇದರ ಜೊತೆಗೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಮನವಿ ಮಾಡಿದ್ದರು.. ಹೀಗಿರುವಾಗಲೇ ಹಿಮಾಚಲ ಪ್ರದೇಶ ಸರ್ಕಾರದ ವಿಧಾನಸಭಾ ಸ್ಪೀಕರ್‌, ಅಡ್ಡಮತದಾನ ಮಾಡಿದ ಆರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದರಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದ ಕಾಂಗ್ರೆಸ್‌ ಸರ್ಕಾರ ಸದ್ಯಕ್ಕೆ ಉಳಿದಿದೆ.

ಇದನ್ನೂ ಓದಿ; YASH; ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡ ನಟ ಯಶ್‌; ಅಭಿಮಾನಿಗಳು ಫುಲ್‌ ಖುಷ್‌

ಮಹತ್ವದ ಆದೇಶ ಹೊರಡಿಸಿದ ಸ್ಪೀಕರ್‌ ಕುಲದೀಪ್‌ ಸಿಂಗ್‌;

ಮಹತ್ವದ ಆದೇಶ ಹೊರಡಿಸಿದ ಸ್ಪೀಕರ್‌ ಕುಲದೀಪ್‌ ಸಿಂಗ್‌; ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿಯಿಂದ ಎಲ್ಲಾ ಪಕ್ಷಗಳೂ ತಮ್ಮ ಶಾಸಕರಿಗೆ ವಿಪ್‌ ಜಾರಿಗೊಳಿಸಿದ್ದವು.. ಈ ಹಿನ್ನೆಲೆಯಲ್ಲಿ ಮತ ಹಾಕಿದ ಮೇಲೆ ಯಾರಿಗೆ ಹಾಕಿದಾರೆ ಎಂಬುದನ್ನು ಪಕ್ಷದ ಚುನಾವಣಾ ಏಜೆಂಟ್‌ಗೆ ತೋರಿಸಬೇಕು.. ವಿಪ್‌ ನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಕೆಂದು ಸೂಚಿಸಲಾಗಿರುತ್ತದೆ. ಹೀಗಿದ್ದರೂ ಕೂಡಾ ಕಾಂಗ್ರೆಸ್‌ನ ಆರು ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲು ಸಾಮರ್ಥ್ಯ ಇದ್ದರೂ ಕೂಡಾ ಕಾಂಗ್ರೆಸ್‌ ಅಭ್ಯರ್ಥಿ ಸೋಲಲು ಕಾರಣವಾಯಿತು. ಇದಾದ ಮೇಲೆ ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಇದರ ನಡುವೆ ಸ್ಪೀಕರ್‌ ಕುಲದೀಪ್‌ ಸಿಂಗ್‌ ಪಠಾನಿಯಾ ಅವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಆರೂ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ; ಪಾಕಿಸ್ತಾನ ಬಿಜೆಪಿಗೆ ಮಾತ್ರ ಶತ್ರು ರಾಷ್ಟ್ರ, ಕಾಂಗ್ರೆಸ್‌ಗಲ್ಲ; ಬಿ.ಕೆ.ಹರಿಪ್ರಸಾದ್‌

ಸ್ಫೀಕರ್‌ ಆದೇಶ ಮಾನ್ಯ ಆಗುತ್ತಾ..?;

ಸ್ಫೀಕರ್‌ ಆದೇಶ ಮಾನ್ಯ ಆಗುತ್ತಾ..?; ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಪಯೋಗಿಸಿ ಸ್ಪೀಕರ್‌ ಏನೋ ಆರು ಶಾಸಕರನ್ನು ಅನರ್ಹ ಮಾಡಿದ್ದಾರೆ. ಇದರಿಂದಾಗಿ ಬೀಳುವ ಹಂತದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಉಳಿದಿದೆ.. ಆದ್ರೆ, ಶಾಸಕರು ಈ ಆದೇಶ ಪ್ರಶ್ನೆ ಮಾಡಿ ಕೋರ್ಟ್‌ ಮೊರೆಹೋಗಲು ಅವಕಾಶವಿದೆ.. ಈ ಹಿಂದಿನ ಕೆಲವು ಆದೇಶಗಳಲ್ಲಿ ಕೆಲ ಕೋರ್ಟ್‌ಗಳು ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರು ವಿಪ್‌ ಜಾರಿ ಮಾಡಿದ್ದರೂ ಕೂಡಾ ಯಾರಿಗೆ ಬೇಕಾದರೂ ಮತ ಚಲಾವಣೆ ಮಾಡಬಹುದು ಎಂದು ಆದೇಶ ಮಾಡಿವೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ ಏನಾದರೂ ಶಾಸಕರ ಪರವಾಗಿ ತೀರ್ಪು ಕೊಟ್ಟರೆ ಮತ್ತೆ ಕಾಂಗ್ರೆಸ್‌ ಸರ್ಕಾರಕ್ಕೆ ತೊಂದರೆಯಾಗಲಿವೆ. ನಂಬರ್‌ ಗೇಮ್‌ನಲ್ಲಿ ಕಾಂಗ್ರೆಸ್‌ಗೆ ಮತ್ತ ಸಂಕಷ್ಟ ಎದುರಾಗಲಿದೆ.

ಡಿ.ಕೆ.ಶಿವಕುಮಾರ್‌ ತಂತ್ರಗಾರಿಕೆ ಫಲಿಸುತ್ತಾ..?;

ಡಿ.ಕೆ.ಶಿವಕುಮಾರ್‌ ತಂತ್ರಗಾರಿಕೆ ಫಲಿಸುತ್ತಾ..?; ಆರು ಕಾಂಗ್ರೆಸ್‌ ಶಾಸಕರ ಅಡ್ಡಮತದಾನದ ನಂತರ ಹಿಮಾಚಲದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿತ್ತು. ಸಚಿವರೊಬ್ಬರು ರಾಜೀನಾಮೆ ನೀಡಿದ್ದರು. ಅಡ್ಡ ಮತದಾನ ಮಾಡಿದ ಶಾಸಕರಲ್ಲದೆ, ಹಲವು ಕಾಂಗ್ರೆಸ್‌ ಶಾಸಕರು ಬಿಜೆಪಿ ಹಾರುತ್ತಾರೆ ಎಂದು ಹೇಳಲಾಗಿತ್ತು. ಈ ಕಾರಣಕ್ಕಾಗಿಯೇ ಸಿಎಂ ಸುಖವಿಂದರ್ ಸಿಂಗ್ ಸುಖು ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಅಧಿಕಾರ ಕಳೆದುಕೊಳ್ಳುವ ಸುಳಿವು ಸಿಗುತ್ತಿದ್ದಂತೆ ಕಾಂಗ್ರೆಸ್‌ ಹೈಕಮಾಂಡ್‌ ಅಖಾಡಕ್ಕಿಳಿದಿದೆ. ಕೂಡಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಡಿ.ಕೆ.ಶಿವಕುಮಾರ್‌ ಅವರನ್ನು ಶಿಮ್ಲಾಗೆ ಕಳುಹಿಸಿದ್ದಾರೆ. ನಿನ್ನೆಯಿಂದ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ಶಾಸಕರನ್ನು ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ; Turmeric; ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ಬೇಕೇಬೇಕು ಅರಿಶಿನ!

ಸದ್ಯಕ್ಕೆ ಮೇಲುಗೈ ಸಾಧಿಸಿದ ಕಾಂಗ್ರೆಸ್‌ ನಾಯಕರು;

ಸದ್ಯಕ್ಕೆ ಮೇಲುಗೈ ಸಾಧಿಸಿದ ಕಾಂಗ್ರೆಸ್‌ ನಾಯಕರು; ಡಿ.ಕೆ.ಶಿವಕುಮಾರ್‌ ಅವರು ಶಿಮ್ಲಾಗೆ ಹೋಗಿ ರಾತ್ರಿಯಿಡೀ ಮೀಟಿಂಗ್‌ಗಳನ್ನು ಮಾಡಿದ್ದಾರೆ. ಪಕ್ಷಾಂತರಕ್ಕೆ ರೆಡಿ ಇದ್ದ ಶಾಸಕರ ಮನವೊಲಿಸುವಲ್ಲೂ ಯಶಸ್ವಿಯಾಗಿದ್ದಾರೆ. ಜೊತೆಗೆ 6 ಶಾಸಕರನ್ನು ಅನರ್ಹಗೊಳಿಸಿಲಾಗಿದೆ. ಹೀಗಾಗಿ ಸದ್ಯಕ್ಕೆ ಕಾಂಗ್ರೆಸ್‌ ಸರ್ಕಾರ ಸೇಫ್‌ ಆಗಿದೆ. ಸರ್ಕಾರ ಉರುಳಿಸುವ ಬಿಜೆಪಿ ಪ್ರಯತ್ನಕ್ಕೆ ಬ್ರೇಕ್‌ ಬಿದ್ದಿದೆ. ಆದರೂ ಕೂಡಾ ಇನ್ನೂ ಕಾಂಗ್ರೆಸ್‌ ನಲ್ಲಿ ಅಸಮಾಧಾನಗಳಿದ್ದು, ಅದನ್ನು ನಿವಾರಿಸುವ ಕೆಲಸದಲ್ಲಿ ಡಿ.ಕೆ.ಶಿವಕುಮಾರ್‌ ನಿರತರಾಗಿದ್ದಾರೆ.

ಇದನ್ನೂ ಓದಿ; Tips for Bad Breath; ಬಾಯಿ ದುರ್ಗಂಧ ಬರ್ತಿದೆಯೇ..?; ಈ ಟಿಪ್ಸ್‌ ಫಾಲೋ ಮಾಡಿ!

 

Share Post