ಜನರ ಸೇವೆಯೇ ನನ್ನ ಗುರಿ, ನಾನು ಅಧಿಕಾರ ಬಯಸಿಲ್ಲ : ನರೇಂದ್ರ ಮೋದಿ
ನವದೆಹಲಿ: ನಾನು ಅಧಿಕಾರವನ್ನು ಬಯಸಿಲ್ಲ, ಜನ ಸೇವೆಯೇ ಗುರಿಯಾಗಿದೆ. ಇಂದೂ, ಮುಂದೆಯೂ ಅಧಿಕಾರ ಬಯಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ನಿನ್ನೆ 85ನೇ ಮಾಸಿಕ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ವೇಳೆ ಆಯುಷ್ಮಾನ್ ಭಾರತದ ಫಲಾನುಭವಿಯೊಬ್ಬರು ಮೋದಿ ಅವರು ಸದಾ ಅಧಿಕಾರದಲ್ಲೇ ಮುಂದುವರಿಯಬೇಕು ಎಂದು ಆಶಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು ನಾನು ಅಧಿಕಾದಲ್ಲಿ ಇರಲು ಬಯಸುವುದಿಲ್ಲ. ನಾನು ಕೇವಲ; ಸೇವೆಯಲ್ಲಿ ಇರಲು ಬಯಸುತ್ತೇನೆ. ನನ್ನ ಪಾಲಿಗೆ ಈ ಹುದ್ದೆ , ಈ ಪ್ರಧಾನಿಗಿರಿ, ಈ ಎಲ್ಲಾ ವಿಷಯಗಳು ಅಧಿಕಾರಕ್ಕಾಗಿಯಲ್ಲ, ಎಲ್ಲಾ ಸೇವೆಗಾಗಿ ಆಗಿದೆ. ಸರ್ಕಾರದ ಹಲವು ಕಾರ್ಯಗಳು, ಯೋಜನೆಗಳು, ಮಾನವೀಯ ಸ್ಪಂದನೆಗಳಿಗೆ ಕುರಿತು ಮಾಡುವ ಕೆಲಸಗಳು ಸದಾ ನನಗೆ ವಿಶೇಷ ಸಂಭ್ರಮ ನೀಡುತ್ತದೆ ಎಂದು ಹೇಳಿದ್ದಾರೆ.