HealthLifestyle

Turmeric; ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ಬೇಕೇಬೇಕು ಅರಿಶಿನ!

ಬೇಸಿಗೆಯಲ್ಲಿ ಚರ್ಮದ ಆರೈಕೆ ಬಹಳ ಮುಖ್ಯ. ಬೇಸಿಗೆಯಲ್ಲಿ ವಿಪರೀತ ಸೆಖೆ ಇರುತ್ತದೆ. ಸೂರ್ಯನ ಬೆಳಕು ಮತ್ತು ಬಿಸಿ ಗಾಳಿಯಿಂದಾಗಿ, ಚರ್ಮದ ಮೇಲೆ ಸತ್ತ ಜೀವಕೋಶಗಳು ಸಂಗ್ರಹವಾಗುತ್ತವೆ. ಇದರಿಂದಾಗಿ ಹಲವಾರು ಚರ್ಮದ ಸಮಸ್ಯೆಗಳು ಶುರುವಾಗುತ್ತವೆ. ಸೂರ್ಯನ ಶಾಖ ಮುಖಕ್ಕೆ ಬಿದ್ದಾಗ ಮುಖದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಸೂರ್ಯನಿಂದ ಸೌಂದರ್ಯವನ್ನು ರಕ್ಷಿಸಿಕೊಳ್ಳುವುದು ತುಂಬಾನೇ ಕಷ್ಟ. ನಿಮ್ಮ ಸೌಂದರ್ಯವನ್ನು ಸೂರ್ಯನಿಂದ ರಕ್ಷಿಸಲು ಅರಿಶಿನ ಅತ್ಯಂತ ಉಪಯೋಗಕಾರಿ. ಆರೋಗ್ಯದ ದೃಷ್ಟಿಯಿಂದಲೂ ಅರಿಶಿನ ತುಂಬಾ ಉಪಯುಕ್ತ. ಇದರ ಮಹತ್ವ ಅರಿತು ಬೇಸಿಗೆಯಲ್ಲಿ ನಿತ್ಯ ಬಳಸಿದರೆ ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ; Tips for Bad Breath; ಬಾಯಿ ದುರ್ಗಂಧ ಬರ್ತಿದೆಯೇ..?; ಈ ಟಿಪ್ಸ್‌ ಫಾಲೋ ಮಾಡಿ!

ತ್ವಚೆಯ ಸಮಸ್ಯೆಗೆ ಅರಿಶಿನ ರಾಮಬಾಣ;

ತ್ವಚೆಯ ಸಮಸ್ಯೆಗೆ ಅರಿಶಿನ ರಾಮಬಾಣ; ಅರಿಶಿನದಲ್ಲಿ ಹಲವಾರು ಅಯುರ್ವೇದ ಗುಣಗಳಿವೆ.. ಅರಿಶಿನ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.. ಹೀಗಾಗಿ ಮೊದಲಿನಿಂದ ಅರಿಶಿನವನ್ನು ಮನೆಮದ್ದಾಗ ಬಳಸುತ್ತೇವೆ.. ನಮ್ಮ ನಿತ್ಯದ ಬದುಕಿನಲ್ಲಿ ಯವುದೋ ಒಂದು ರೂಪದಲ್ಲಿ ಅರಿಶಿಣ ಬಳಕೆ ಮಾಡುತ್ತಲೇ ಇರುತ್ತೇವೆ. ಆಯುರ್ವೇದದಲ್ಲೂ ಅರಿಶಿನ ಬಳಕೆ ಹೆಚ್ಚು. ಇನ್ನು ವಿವಾಹ ಸಮಾರಂಭಗಳಲ್ಲಿ ಅರಿಶಿನಕ್ಕೆ ಮಹತ್ವದ ಸ್ಥಾನವಿದೆ. ಇಂದಿಗೂ ವಧು-ವರರಿಗೆ ಅರಿಶಿನ ಹಚ್ಚಿ ಸ್ನಾನ ಮಾಡಿಸುತ್ತಾರೆ. ಈ ಹಿಂದೆ ಮಹಿಳೆಯರು ಮನೆಯ ಸುತ್ತಮುತ್ತ ಇರುವ ಗಿಡಮೂಲಿಕೆಗಳನ್ನು ಸಂಗ್ರಹಿಸಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಆ ಕಾಲದಲ್ಲಿ ಅರಿಶಿನವನ್ನು ಹೆಚ್ಚಾಗಿ ಬಳಸುತ್ತಿದ್ದರು. ಬೇಸಿಗೆಯಲ್ಲಿ ಮುಖದ ಮೇಲೆ ಧೂಳು ಮತ್ತು ಕೊಳೆ ಹೆಚ್ಚು ಸಂಗ್ರಹವಾಗುತ್ತದೆ. ಆದ್ದರಿಂದ ಇದನ್ನು ಸ್ವಚ್ಛಗೊಳಿಸಲು ಅರಿಶಿನವನ್ನು ಬಳಸುವುದು ಒಳ್ಳೆಯದು. ತ್ವಚೆಯ ಸಮಸ್ಯೆಗಳನ್ನು ತಪ್ಪಿಸಲು ಬೇಸಿಗೆಯಲ್ಲಿ ಮುಖಕ್ಕೆ ಅರಿಶಿನವನ್ನು ಹಚ್ಚಿಕೊಳ್ಳಬಹುದು.

ಇದನ್ನೂ ಓದಿ; Cancer; ಕ್ಯಾನ್ಸರ್‌ಗೆ ಔಷಧಿ ಕಂಡುಹಿಡಿದ ಟಾಟಾ ಸಂಸ್ಥೆ; ಒಂದು ಮಾತ್ರೆ 100 ರೂಪಾಯಿ!

ವಾರಕ್ಕೆ 4 ಬಾರಿ ಹಚ್ಚಿದರೆ ಕಲೆಗಳು ಮಾಯ;

ವಾರಕ್ಕೆ 4 ಬಾರಿ ಹಚ್ಚಿದರೆ ಕಲೆಗಳು ಮಾಯ; ಅರಿಶಿನ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ವಾರಕ್ಕೆ ನಾಲ್ಕು ಬಾರಿ ಅರಿಶಿನವನ್ನು ಮುಖಕ್ಕೆ ಹಚ್ಚಿದರೆ ಕಲೆಗಳು ಮಾಯವಾಗುತ್ತವೆ. ಹಾಲು ಅಥವಾ ಮೊಸರಿನಲ್ಲಿ ಅರಿಶಿನದ ತುಂಡನ್ನು ನೆನೆಸಿ ಫೇಸ್ ಪ್ಯಾಕ್ ಮಾಡಿಕೊಂಡರೆ ಮುಖದ ಮೇಲಿನ ಮೊಡವೆ, ತುರಿಕೆ ನಿವಾರಣೆಯಾಗುತ್ತದೆ. ಮುಖದ ಚರ್ಮ ಮುಖ ಕಾಂತಿಯುತವಾಗುತ್ತದೆ. ಹಾಗೆಯೇ ರಾತ್ರಿ ಮಲಗುವ ಮುನ್ನ ಅರಿಶಿನವನ್ನು ಹಚ್ಚಿಕೊಂಡರೆ ತ್ವಚೆಯು ದಿನವಿಡೀ ಹೊಳೆಯುತ್ತದೆ. ಅರಿಶಿನ ಬಳಕೆಯಿಂದ ಚರ್ಮವು ಹಗುರವಾಗುತ್ತದೆ. ಮೊಡವೆಗಳು, ಕಲೆಗಳನ್ನು ಹೋಗಲಾಡಿಸುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ತರುತ್ತದೆ.

ಇದನ್ನೂ ಓದಿ; Palav Leaf; ಪಲಾವ್‌ ಎಲೆಗಳಿಂದ ಮಧುಮೇಹ ನಿಯಂತ್ರಿಸಬಹುದಂತೆ!

ರಾತ್ರಿಯಿಡೀ ತ್ವಚೆಯ ರಿಪೇರಿ ಮಾಡುವ ಅರಿಶಿನ;

ರಾತ್ರಿಯಿಡೀ ತ್ವಚೆಯ ರಿಪೇರಿ ಮಾಡುವ ಅರಿಶಿನ; ರಾತ್ರಿ ಮಲಗುವ ಮುನ್ನ ಅರಿಶಿನವನ್ನು ಮುಖಕ್ಕೆ ಹಚ್ಚಬೇಕು. ಇದರಿಂದ ರಾತ್ರಿಯಿಡೀ ತ್ವಚೆ ರಿಪೇರಿಯಾಗುತ್ತದೆ. ಅರಿಶಿನವು ಮೊಡವೆಗಳನ್ನು ನಿವಾರಿಸುತ್ತದೆ. ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಫಂಗಲ್ ಗುಣಗಳನ್ನು ಇದು ಹೊಂದಿದೆ. ಹೀಗಾಗಿ ಚರ್ಮಕ್ಕೆ ಅರಿಶಿನ ಹಚ್ಚಿಕೊಂಡರೆ ಚರ್ಮ ಕಾಂತಿಯುತ ಹಾಗೂ ಅರೋಗ್ಯಕರವಾಗುತ್ತದೆ.

ಚರ್ಮ ಕಪ್ಪಾಗುವುದನ್ನು ತಡೆಯುತ್ತದೆ;

ಚರ್ಮ ಕಪ್ಪಾಗುವುದನ್ನು ತಡೆಯುತ್ತದೆ; ಬೇಸಿಗೆಯಲ್ಲಿ ಚರ್ಮ ಕಪ್ಪಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೈಬಣ್ಣವನ್ನು ಸುಧಾರಿಸಲು ಅರಿಶಿನವನ್ನು ಬಳಸಬಹುದು. ಅರಿಶಿನವನ್ನು ರೋಸ್ ವಾಟರ್ ಮತ್ತು ಕಡಲೆಹಿಟ್ಟಿನೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚುವುದರಿಂದ ತ್ವಚೆಯು ಹೊಳೆಯುತ್ತದೆ. ಮುಖದಲ್ಲಿರುವ ಎಣ್ಣೆಯನ್ನು ತೆಗೆಯಲಾಗುತ್ತದೆ. ಮನೆಯ ಹತ್ತಿರ ಸ್ವಲ್ಪ ಜಾಗವಿದ್ದರೆ ಯಾರು ಬೇಕಾದರೂ ಅರಿಶಿನ ಬೆಳೆದು ಬಳಸಬಹುದು. ಒಣಗಿದ ಅರಿಶಿನ ಪುಡಿ ಅಥವಾ ಒಣಗಿದ ಅರಿಶಿನ ಅಂಗಡಿಗಳಲ್ಲಿ ಲಭ್ಯವಿದ್ದರೂ, ತಾಜಾ ಅರಿಶಿನವನ್ನು ಬಳಸುವುದು ಉತ್ತಮ.

ಇದನ್ನೂ ಓದಿ; Low Iron Levels; ಐರನ್‌ ಕಡಿಮೆ ಇದ್ದರೆ ದೇಹದಲ್ಲಾಗುವ ಬದಲಾವಣೆ ಏನು..?

Share Post