BBMP Budget; ಬ್ರ್ಯಾಂಡ್ ಬೆಂಗಳೂರಿಗಾಗಿ 8 ವಿಭಾಗ ರಚನೆ!
ಬೆಂಗಳೂರು; 2024-25ನೇ ಸಾಲಿನ ಬಿಬಿಎಂಪಿ ಬಡ್ಜೆಟ್ (BBMP Budget) ಘೋಷಣೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಬ್ರ್ಯಾಂಡ್ ಬೆಂಗಳೂರಿಗಾಗಿ 8 ವಿಭಾಗಳನ್ನು ಮಾಡಲಾಗಿದೆ. ಇನ್ನು ಜೊತೆಗೆ ಮಹಿಳೆಯರಿಗಾಗಿ SHE ಟಾಯ್ಲೆಟ್‌ಗಳ ನಿರ್ಮಾಣ ಹಾಗೂ ಪೌರಕಾರ್ಮಿಕರ ವಿಶ್ರಾಂತಿ ತಾಣಗಳಿಗಾಗಿ ಹಣ ಮೀಸಲಿಡಲಾಗಿದೆ.
ಬ್ರ್ಯಾಂಡ್ ಬೆಂಗಳೂರಿಗಾಗಿ 8 ವಿಭಾಗ;
ಬ್ರ್ಯಾಂಡ್ ಬೆಂಗಳೂರಿಗಾಗಿ 8 ವಿಭಾಗ; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬೆಂಗಳೂರನ್ನು ಬ್ರ್ಯಾಂಡ್ ಮಾಡಲು ಹೊರಟಿದೆ. ಇದಕ್ಕಾಗಿ ಬೆಂಗಳೂರು ನಗರರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ.. ಅದಕ್ಕೆ ಅನುಕೂಲವಾಗುವಂತೆ ಬಿಬಿಎಂಪಿ ಬಜೆಟ್ ನಲ್ಲಿ ಎಂಟು ವಿಭಾಗಗಳನ್ನು ಘೋಷಣೆ ಮಾಡಲಾಗಿದೆ. ಈ ವಿಭಾಗಗಳ ಮೂಲಕ ಬ್ರ್ಯಾಂಡ್ ಬೆಂಗಳೂರು ಕಲ್ಪನೆ ಸಾಕಾರಗೊಳಿಸಲು ಮುಂದಡಿ ಇಡಲಾಗಿದೆ. ಹಾಗಾದರೆ ಯಾವುವು ಆ 8 ವಿಭಾಗಗಳು ನೋಡೋಣ..
ಹಸಿರು ಬೆಂಗಳೂರು
ಆರೋಗ್ಯಕರ ಬೆಂಗಳೂರು
ವೈಬ್ರೆಂಟ್ ಬೆಂಗಳೂರು
ನೀರಿನ ಭದ್ರತೆಯ ಬೆಂಗಳೂರು
ಸುಗಮ ಸಂಚಾರ
ಸ್ವಚ್ಚ ಬೆಂಗಳೂರು
ಶಿಕ್ಷಣ ಬೆಂಗಳೂರು
ಟೆಕ್ ಬೆಂಗಳೂರು
ಪೌರ ಕಾರ್ಮಿಕರಿಗಾಗಿ ಶರಣೆ ಸತ್ಯಕ್ಕ ಪ್ರಶಸ್ತಿ;
ಪೌರ ಕಾರ್ಮಿಕರಿಗಾಗಿ ಶರಣೆ ಸತ್ಯಕ್ಕ ಪ್ರಶಸ್ತಿ; ಬಿಬಿಎಂಪಿ ಬಜೆಟ್‌ನಲ್ಲಿ ಮಹಿಳೆಯರು ಹಾಗೂ ಪೌರ ಕಾರ್ಮಿಕರಿಗಾಗಿ ಹೆಚ್ಚು ಗಮನ ಹರಿಸಲಾಗಿದೆ. ಬೆಂಗಳೂರಿನಲ್ಲಿ ಟಾಯ್ಲೆಟ್ ವ್ಯವಸ್ಥೆ ಸರಿಯಾಗಿಲ್ಲ.. ಇದರಿಂದಾಗಿ ಮಹಿಳೆಯರು ಪರದಾಡುತ್ತಿರುತ್ತಾರೆ. ಹೀಗಾಗಿ ಬೆಂಗಳೂರಿನ ಎಲ್ಲಾ ಕಡೆ ಪಬ್ಲಿಕ್ ಟಾಯ್ಲೆಟ್‌ಗಳನ್ನು ನಿರ್ಮಾಣ ಮಾಡುವಂತೆ ಆಗಾಗ ಆಗ್ರಹಗಳು ಕೇಳಿಬರುತ್ತಿರುತ್ತವೆ. ಇದೀಗ ಇವರ ಆಗ್ರಹಕ್ಕೆ ಬಿಬಿಎಂಪಿ ಅಧಿಕಾರಿಗಳು ಮಣಿದಿದ್ದಾರೆ.
ಬೆಂಗಳೂರಿನ ನೂರು ಕಡೆಗಳಲ್ಲಿ ಮಹಿಳೆಯರಿಗಾಗಿ ‘ಶಿ ಟಾಯ್ಲೆಟ್’ಗಳ ನಿರ್ಮಾಣಕ್ಕೆ ಹಣ ಮೀಸಲಿಡಲಾಗಿದೆ. ಇನ್ನು ಪೌರಕಾರ್ಮಿಕರ ವಿಶ್ರಾಂತಿ ತಾಣಕ್ಕೆ 10 ಕೋಟಿ ರೂ. ಅನುದಾನ ನೀಡಲಾಗಿದೆ. ಇದರ ಜೊತೆಗೆ ಪೌರಕಾರ್ಮಿಕರಿಗೆ ‘ಶರಣೆ ಸತ್ಯಕ್ಕ’ ಪ್ರಶಸ್ತಿ ನೀಡಲು ನೀಡಲಾಗಿದ್ದು, ಈ ಪ್ರಶಸ್ತಿಗೆ ಆಯ್ಕೆಯಾದವರಿಗೆ ಪ್ರಶಸ್ತಿ ಜೊತೆಗೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಇನ್ನೂ ಏನೆಲ್ಲಾ ಘೋಷಣೆ ಮಾಡಲಾಗಿದೆ..?
11,307 ಪೌರ ಕಾರ್ಮಿಕರ ನೇರ ನೇಮಕಾತಿ
ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಲು ‘ಹಸಿರುರಕ್ಷಕ’ ಆ್ಯಪ್
ರಸ್ತೆ ಬದಿ, ಪಾರ್ಕ್, ಕೆರೆ ಅಂಗಳದಲ್ಲಿ 2 ಲಕ್ಷ ಸಸಿ ನೆಡಲು ನಿರ್ಧಾರ
ದಾಸರಹಳ್ಳಿ, ಯಲಹಂಕ ವಲಯದಲ್ಲಿ ಹೈಟೆಕ್ ಸಸ್ಯಕ್ಷೇತ್ರ
ಬನ್ನೇರುಘಟ್ಟ ಉದ್ಯಾನ ವನಕ್ಕೆ 1 ಕೋಟಿ ರೂಪಾಯಿ ಅನುದಾನ
ಹೊಸದಾಗಿ 50 ಇಂದಿರಾ ಕ್ಯಾಂಟೀನ್ ಸ್ಥಾಪನೆ
ಮೊಬೈಲ್ ಕ್ಯಾಂಟೀನ್ ಸ್ಥಾಪನೆಗೆ 70 ಕೋಟಿ ರೂಪಾಯಿ ಮೀಸಲು
ಬೆಂಗಳೂರು ನಗರದಲ್ಲಿ ವೈಟ್ ಟಾಪಿಂಗ್ ರಸ್ತೆಗೆ 800 ಕೋಟಿ ರೂಪಾಯಿ
ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಸಂಪರ್ಕ ಮೇಲ್ಸೇತುವೆಗೆ 380 ಕೋಟಿ ರೂಪಾಯಿ
ಸಂಯುಕ್ತ ಮೆಟ್ರೋ, ರಸ್ತೆ ಮೇಲ್ಸೇತುವೆಗೆ 100 ಕೋಟಿ ರೂಪಾಯಿ ಅನುದಾನ