Politics

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ; ಫೆಬ್ರವರಿ 10 ರಿಂದ 7 ಹಂತಗಳಲ್ಲಿ ಮತದಾನ

ನವದೆಹಲಿ: ಐದು ರಾಜ್ಯಗಳ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಘೋಷಣೆ ಮಾಡಿದ್ದಾರೆ. ಫೆಬ್ರವರಿ 10 ರಂದು ಮೊದಲ ಹಂದತದ ಮತದಾನ ನಡೆಯಲಿದ್ದು, ಮಾರ್ಚ್‌ ಏಳರಂದು ಕೊನೆಯ ಹಾಗೂ ಏಳನೇ ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಏಳೂ ಹಂತಗಳಲ್ಲಿ ಮತದಾನ ನಡೆಯಲಿದೆ. ಮಣಿಪುರದಲ್ಲಿ ಐದು ಮತ್ತು ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ಇನ್ನು ಪಂಜಾಬ್‌, ಉತ್ತರಾಖಂಡ್‌, ಗೋವಾ ಚುನಾವಣೆಗಳು ಒಂದೇ ಹಂತದಲ್ಲಿ ಅಂದರೆ ಎರಡನೇ ಹಂತದಲ್ಲಿ ನಡೆಯಲಿವೆ. ಮಾರ್ಚ್‌ 10 ರಂದು ಎಲ್ಲಾ ರಾಜ್ಯಗಳ ಮತ ಎಣಿಕೆ ನಡೆಯಲಿದೆ.

 

ಮೊದಲ ಹಂತದ ಮತದಾನ

ಮತದಾನ ನಡೆಯುವ ರಾಜ್ಯ – ಉತ್ತರ ಪ್ರದೇಶ

ನೋಟಿಫಿಕೇಷನ್‌ – ಜನವರಿ 14

ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ – ಜನವರಿ 21

ನಾಮಪತ್ರ ಪರಿಶೀಲನೆ – ಜನವರಿ 24

ನಾಮಪತ್ರ ವಾಪಸ್‌ – ಜನವರಿ 27

ಮತದಾನ – ಫೆಬ್ರವರಿ 10

 

ಎರಡನೇ ಹಂತದ ಮತದಾನ

ಮತದಾನ ನಡೆಯುವ ರಾಜ್ಯ – ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ್‌, ಗೋವಾ

ನೋಟಿಫಿಕೇಷನ್‌ – ಜನವರಿ 21

ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ – ಜನವರಿ 28

ನಾಮಪತ್ರ ಪರಿಶೀಲನೆ – ಜನವರಿ 29

ನಾಮಪತ್ರ ವಾಪಸ್‌ – ಜನವರಿ 31

ಮತದಾನ – ಫೆಬ್ರವರಿ 14

 

ಮೂರನೇ ಹಂತದ ಮತದಾನ

ಮತದಾನ ನಡೆಯುವ ರಾಜ್ಯ – ಉತ್ತರ ಪ್ರದೇಶ

ನೋಟಿಫಿಕೇಷನ್‌ – ಜನವರಿ 25

ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ –  ಫೆಬ್ರವರಿ 1

ನಾಮಪತ್ರ ಪರಿಶೀಲನೆ – ಫೆಬ್ರವರಿ 2

ನಾಮಪತ್ರ ವಾಪಸ್‌ – ಫೆಬ್ರವರಿ 4

ಮತದಾನ – ಫೆಬ್ರವರಿ 20

 

ನಾಲ್ಕನೇ ಹಂತದ ಮತದಾನ

ಮತದಾನ ನಡೆಯುವ ರಾಜ್ಯ – ಉತ್ತರ ಪ್ರದೇಶ

ನೋಟಿಫಿಕೇಷನ್‌ – ಜನವರಿ 27

ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ –  ಫೆಬ್ರವರಿ 3

ನಾಮಪತ್ರ ಪರಿಶೀಲನೆ – ಫೆಬ್ರವರಿ 4

ನಾಮಪತ್ರ ವಾಪಸ್‌ – ಫೆಬ್ರವರಿ 7

ಮತದಾನ – ಫೆಬ್ರವರಿ 23

 

ಐದನೇ ಹಂತದ ಮತದಾನ

ಮತದಾನ ನಡೆಯುವ ರಾಜ್ಯ – ಉತ್ತರ ಪ್ರದೇಶ, ಮಣಿಪುರ

ನೋಟಿಫಿಕೇಷನ್‌ – ಫೆಬ್ರವರಿ 1

ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ –  ಫೆಬ್ರವರಿ 8

ನಾಮಪತ್ರ ಪರಿಶೀಲನೆ – ಫೆಬ್ರವರಿ 9

ನಾಮಪತ್ರ ವಾಪಸ್‌ – ಫೆಬ್ರವರಿ 11

ಮತದಾನ – ಫೆಬ್ರವರಿ 27

 

ಆರನೇ ಹಂತದ ಮತದಾನ

ಮತದಾನ ನಡೆಯುವ ರಾಜ್ಯ – ಉತ್ತರ ಪ್ರದೇಶ, ಮಣಿಪುರ

ನೋಟಿಫಿಕೇಷನ್‌ – ಫೆಬ್ರವರಿ 4

ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ –  ಫೆಬ್ರವರಿ 11

ನಾಮಪತ್ರ ಪರಿಶೀಲನೆ – ಫೆಬ್ರವರಿ 14

ನಾಮಪತ್ರ ವಾಪಸ್‌ – ಫೆಬ್ರವರಿ 16

ಮತದಾನ – ಮಾರ್ಚ್‌ 3

 

ಏಳನೇ ಹಂತದ ಮತದಾನ

ಮತದಾನ ನಡೆಯುವ ರಾಜ್ಯ – ಉತ್ತರ ಪ್ರದೇಶ

ನೋಟಿಫಿಕೇಷನ್‌ – ಫೆಬ್ರವರಿ 10

ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ –  ಫೆಬ್ರವರಿ 17

ನಾಮಪತ್ರ ಪರಿಶೀಲನೆ – ಫೆಬ್ರವರಿ 18

ನಾಮಪತ್ರ ವಾಪಸ್‌ – ಫೆಬ್ರವರಿ 21

ಮತದಾನ – ಮಾರ್ಚ್‌ 7

 

ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದ ಸಿದ್ಧತೆಗಳು ಹಾಗೂ ನಿಮಯಗಳು

  1. ಕೊವಿಡ್‌ ಮುಂಜಾಗ್ರತೆಯೊಂದಿಗೆ ಚುನಾವಣೆ ನಡೆಸುವುದಕ್ಕೆ ಆದ್ಯತೆ
  2. ಐದು ರಾಜ್ಯಗಳಲ್ಲಿ 18.34 ಕೋಟಿ ಮತದಾರರಿದ್ದಾರೆ
  3. 24.9 ಲಕ್ಷ ಜನ ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿದ್ದಾರೆ
  4.  8.55 ಕೋಟಿ ಮಹಿಳಾ ಮತದಾರರಿದ್ದಾರೆ
  5. 690 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ
  6. ಹೆಚ್ಚಿನ ಜನರು ಮತ ಕೇಂದ್ರಕ್ಕೆ ಬರುವಂತೆ ನೋಡಿಕೊಳ್ಳಲಾಗುತ್ತದೆ
  7. ಯಾವುದೇ ಭೀತಿಯಿಲ್ಲದೆ ಮತ ಚಲಾವಣೆಗೆ ಅವಕಾಶ ನೀಡಲಾಗುತ್ತದೆ
  8. ಉತ್ತರ ಪ್ರದೇಶ್‌, ಪಂಜಾಬ್‌, ಗೋವಾ, ಉತ್ತರಾಖಂಡ್‌ ಹಾಗೂ ಮಣಿಪುರದಲ್ಲಿ ಚುನಾವಣೆ
  9.  ಎಲ್ಲಾ ಮತಕೇಂದ್ರಗಳಲ್ಲಿ ಕೊವಿಡ್‌ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ
  10. ಚುನಾವಣೆ ಸಮಯದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಕ್ರಮ
  11. ಇವಿಎಂ ಹಾಗೂ ವಿವಿಪ್ಯಾಟ್‌ ಮೂಲಕ ಚುನಾವಣೆ ನಡೆಸಲಾಗುತ್ತದೆ
  12. ಚುನಾವಣಾ ಅಕ್ರಮ ತಡೆಯಲು ಮೊಬೈಲ್‌ ಅಪ್ಲಿಕೇಷನ್‌ ಸಿದ್ಧ
  13. ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಅಕ್ರಮದ ಫೋಟೋ ವಿಡಿಯೋ ಅಪ್‌ಲೋಡ್‌ ಮಾಡಿದರೆ ತಕ್ಷಣ ಸ್ಥಳಕ್ಕೆ ಅಧಿಕಾರಿಗಳ ಭೇಟಿ
  14. ಎಲ್ಲಾ ಜನರೂ ಈ ಮೊಬೈಲ್‌ ಅಪ್ಲಿಕೇಷನ್‌ ಡೌನ್‌ ಲೋಡ್‌ ಮಾಡಿಕೊಂಡು ದೂರು ನೀಡಬಹುದು
  15. ಪೋಲಿಂಗ್‌ ಬೂತ್‌ಗಳನ್ನು ಶೇ. 16 ರಷ್ಟು ಏರಿಕೆ ಮಾಡಲಾಗಿದೆ
  16. ಅಭ್ಯರ್ಥಿ ಚುನಾವಣಾ ವೆಚ್ಚದ ಮಿತಿ 40 ಲಕ್ಷ ರೂಪಾಯಿಗೆ ಸೀಮಿತಗೊಳಿಸಲಾಗಿದೆ
  17. ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ
  18. ಮತಕೇಂದ್ರದ ಎಲ್ಲಾ ಸಿಬ್ಬಂದಿ ಎರಡೂ ಡೋಸ್‌ ವ್ಯಾಕ್ಸಿನ್‌ ಪಡೆದಿರುತ್ತಾರೆ
  19. ಪ್ರತಿ ಮತಕೇಂದ್ರದಲ್ಲಿ ಗರಿಷ್ಠ 1250 ಮತದಾರರಿಗಷ್ಟೇ ಅವಕಾಶ
  20. ಪೋಲಿಂಗ್‌ ಅಧಿಕಾರಿಗಳಿಗೆ ಬೂಸ್ಟರ್‌ ಡೋಸ್‌  ನೀಡಲಾಗುತ್ತದೆ
  21. ಗೋವಾದಲ್ಲಿ ಅಭ್ಯರ್ಥಿಗಳ ವೆಚ್ಚದ ಮಿತಿ 28 ಲಕ್ಷ ರೂಪಾಯಿ
  22. ಯಾವುದೇ ಪಾದಯಾತ್ರೆ, ರೋಡ್‌ ಶೋ, ಮೆರವಣಿಗಳು ಜನವರಿ 15ರವರೆಗೆ ಮಾಡುವಂತಿಲ್ಲ
  23. ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಯಾವುದೇ ರ್ಯಾಲಿ ನಡೆಸುವಂತಿಲ್ಲ
  24. ಆನ್‌ಲೈನ್‌ ಕ್ಯಾಂಪೇನ್‌ಗಳನ್ನು ಹೆಚ್ಚಾಗಿ ಮಾಡಲು ಸೂಚನೆ
  25. ಮತ ಎಣಿಕೆ ನಂತರ ಯಾರೂ ಕೂಡಾ ವಿಜಯೋತ್ಸವಗಳನ್ನು ಮಾಡುವಂತಿಲ್ಲ
  26. ಮನೆ ಮನೆ ಪ್ರಚಾರದ ವೇಳೆ ಐದು ಜನಕ್ಕಿಂತ ಹೆಚ್ಚು ಜನ ಹೋಗುವಂತಿಲ್ಲ
  27. ಐದೂ ರಾಜ್ಯಗಳಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ
  28. 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಾಂಗರು ಅಂಚೆ ಮೂಲಕ ಮತದಾನಕ್ಕೆ ಅವಕಾಶ
  29. ಕೊವಿಡ್‌ ಹಿನ್ನೆಲೆಯಲ್ಲಿ ಮತದಾನದ ಅವದಿ ಒಂದು ಗಂಟೆ ವಿಸ್ತರಣೆ

 

 

LIVE: EC To Announce Election Dates | Announcement On Covid Curbs Also | LIVE | NewsX – YouTube

 

 

 

 

Share Post