ಎಂ.ಬಿ. ಪಾಟೀಲ್ ಹೇಳಿಕೆಗೆ ಗೋವಿಂದ್ ಕಾರಜೋಳ ಗರಂ
ಬೆಂಗಳೂರು:ಕಾರಜೋಳ ಒಬ್ಬ ಮೂರ್ಖಮಂತ್ರಿ ಎಂಬ ಹೇಳಿಕೆ ನೀಡಿರುವ ಮಾಜಿ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಸಚಿವ ಗೋವಿಂದ್ ಕಾರಜೋಳ ಗರಂ ಆಗಿದ್ದಾರೆ. ಅವರು ನನ್ನ ಬಗ್ಗೆ ಯಾಕೆ ಅವಾಚ್ಯಶಬ್ದಗಳಿಂದ ಮಾತನಾಡಿದರು ಅಂತಾ ಗೊತ್ತಿಲ್ಲ. ನಾನು ಯಾವುದೂ ಅಸತ್ಯ ಮಾತನಾಡಿಲ್ಲ. ಅವರು ನನಗಿಂತ ಚಿಕ್ಕವರು. ಆದರೆ ಅವರು ಈ ರೀತಿ ನನ್ನ ವಿರುದ್ಧ ಮಾತನಾಡಬಾರದು ಎಂದು ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಮಾಡಲಿ. ಆದರೆ ರೌಡಿ ರೀತಿ ಮಾತನಾಡಬಾರದು. ಪಾದಯಾತ್ರೆ ಮಾಡಲಿ, ಆದರೆ ಕೊರೋನಾ ಹೆಚ್ಚಾಗುತ್ತಿದೆ ಮಾರ್ಗಸೂಚಿ ಮೀರಿ ಪಾದಯಾತ್ರೆ ಮಾಡಬಾರದು ಎಂದು ಕಿಡಿಕಾರಿದರು.
ಇನ್ನು ಸಿದ್ದರಾಮಯ್ಯ ಬಿಜೆಪಿ ಏನು ಮಾಡಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಅವಧಿಯಲ್ಲಿ ಎನ್ ಜಿಟಿ ಕ್ಲಿಯರೆನ್ಸ್ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೆ 2013 ರಿಂದ 18 ರವರೆಗೆ ಸಿದ್ದರಾಮಯ್ಯ ಸರ್ಕಾರ ಕುಂಬಕರ್ಣ ತರ ನಿದ್ದೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.