Politics

ಮೇಕೆದಾಟು ಪಾದಯಾತ್ರೆ : ನಾಲ್ಕನೇ ದಿನದ ಪ್ಲಾನ್‌ ಹೀಗಿದೆ

ರಾಮನಗರ : ಮೇಕೆದಾಟು ಯೋಜನೆಯನ್ನು ಆಗ್ರಹಿಸಿ ಕಾಂಗ್ರೆಸ್‌ ಮಾಡುತ್ತಿರುವ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇನ್ನು ಕೆಲವೇ ಹೊತ್ತಿನಲ್ಲಿ ನಾಲ್ಕನೇ ದಿನದ ಪಾದಯಾತ್ರೆ ಶುರುವಾಗಲಿದೆ. ಕಾಂಗ್ರೆಸ್‌ ನಾಯಕರು ಇಂದು ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್‌ ವರೆಗೂ ಪಾದಯಾತ್ರೆ ಮಾಡಲಿದೆ.

ಬೆಳಗ್ಗೆ 9.30ಕ್ಕೆ ನಾಲ್ಕನೇ ದಿನದ ಪಾದಯಾತ್ರೆ ಆರಂಭವಾಗಲಿದ್ದು, ಚಿಕ್ಕೆನಹಳ್ಳಿಯಿಂದ ಹೊರಡುವ ಪಾದಯಾತ್ರೆ ಮದ್ಯಾಹ್ನದ ಹೊತ್ತಿಗೆ ಕೃಷ್ಣಾಪುರ ದೊಡ್ಡಿಗೆ ತಲುಪಲಿದೆ. ಅಲ್ಲಿ ಊಟ, ವಿಶ್ರಾಂತಿ ಪಡೆದ ಬಳಿಕ ರಾಮನಗರ ಟೌನ್‌ ಕಡೆಗೆ ಪಾದಯಾತ್ರೆ ಸಾಗಲಿದೆ. ನಂತರ ರಾಮನಗರದಲ್ಲಿ ಡಿ ಕೆ ಶಿವಕುಮಾರ್‌ ಅವರು ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನಂತರ ರಾಮನಗರದಲ್ಲಿಯೇ ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ. ಎರಡೆರೆಡು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಕೂಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾಂಗ್ರೆಸ್‌ ಪಾದಯಾತ್ರೆ ಮುಂದುವರೆಸಿದೆ.

ಇನ್ನು ಹಾಸನದಿಂದ  7.5 ಸಾವಿರ ಜನರು ಬರುತ್ತಿರುವುದಾಗಿ ಮಾಜಿ ವಿಧಾನ ಪರಿಷತ್‌ ಸದಸ್ಯ ಗೋಪಾಲಸ್ವಾಮಿ ತಿಳಿಸಿದ್ದಾರೆ. ಮೇಕೆದಾಟು ಯೋಜನೆಗೆ ಸಂಪೂರ್ಣ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ.

Share Post