CrimePolitics

ಮಾಜಿ ಸಿಎಂ ಪೋಸ್ಟರ್‌ ಮೇಲೆ ಮೂತ್ರ ವಿಸರ್ಜನೆ; ವಿಡಿಯೋ ಮಾಡಿ ವೈರಲ್‌!

ಲಖನೌ; ದೇಶಾದ್ಯಂತ ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ.. ನಾಯಕರ ವಾಕ್ಸಮರಗಳು ಕೂಡಾ ಜೋರಾಗಿ ನಡೆಯುತ್ತಿವೆ.. ಇದರ ನಡುವೆ ಕೆಲವರ ದುರ್ನಡತೆಗಳು ಕೂಡಾ ಕಂಡುಬರುತ್ತಿವೆ.. ಅದರಲ್ಲೂ ಸೋಷಿಯಲ್‌ ಮೀಡಿಯಾದಲ್ಲಿ ಬೇಗ ಫೇಮಸ್‌ ಆಗಬೇಕು ಎಂದು ಇಲ್ಲಸಲ್ಲದ್ದೆಲ್ಲಾ ಮಾಡಿ ಎಡವಟ್ಟು ಮಾಡಿಕೊಳ್ಳುವವರು ಹೆಚ್ಚಾಗಿದ್ದಾರೆ.. ಉತ್ತರ ಪ್ರದೇಶದಲ್ಲಿ ಇಂತಹದ್ದೇ ಒಬ್ಬ ವ್ಯಕ್ತಿ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಅವರ ಪೋಸ್ಟರ್‌ ಮೇಲೆ ಮೂತ್ರ ವಿಸರ್ಜನೆ ಮಾಡಿ ಅದನ್ನು ವಿಡಿಯೋ ಮಾಡಿ ಹರಿಬಿಟ್ಟು ಎಡವಟ್ಟು ಮಾಡಿಕೊಂಡಿದ್ದಾನೆ..

ಇದನ್ನೂ ಓದಿ; ಆರ್‌ಸಿಬಿಗೆ ಅಳಿವು-ಉಳಿವಿನ ಪ್ರಶ್ನೆ; ಸನ್‌ರೈಸರ್ಸ್‌ ವಿರುದ್ಧ ಗೆಲ್ಲುತ್ತಾ ಬೆಂಗಳೂರು ತಂಡ..?

ಫೇಸ್‌ಬುಕ್‌ ಲೈವ್‌ನಲ್ಲಿ ನಡೀತು ಅಸಭ್ಯ ವರ್ತನೆ;

ಉತ್ತರ ಪ್ರದೇಶದ ಚೋಲಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.. ಮಾಜಿ ಸಿಎಂ ಹಾಗೂ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್‌ ಯಾದವ್‌ ಅವರ ಪೋಸ್ಟರ್‌ಗೆ ವ್ಯಕ್ತಿಯೊಬ್ಬ ಪೂತ್ರ ವಿಸರ್ಜನೆ ಮಾಡಿದ್ದಾನೆ.. ಅದೂ ಕೂಡಾ ಫೇಸ್‌ಬುಕ್‌ ಲೈವ್‌ ನಲ್ಲಿ ಈ ಕೃತ್ಯ ಎಸಗಿದ್ದಾನೆ.. ಇದರ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.. ಈ ಬೆನ್ನಲ್ಲೇ ಸಮಾಜವಾದಿ ಪಾರ್ಟಿಯಿಂದ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ..

ಇದನ್ನೂ ಓದಿ; ಫೀಲ್ಡಿಂಗ್‌ ವೇಳೆ ಜಾರಿತು ಪ್ಯಾಂಟ್‌; ಮುಜುಗರಕ್ಕೊಳಗಾದ ರೋಹಿತ್‌ ಶರ್ಮಾ!

ಅವಹೇಳನಕಾರಿ ಪದ ಬಳಕೆ ಮಾಡಿರುವ ಆರೋಪಿ;

ಬಂಧಿತ ಆರೋಪಿಯನ್ನು ಬಡೇಲಾಕ್‌ ಚೌಹಾನ್‌ ಎಂದು ಗುರುತಿಸಲಾಗಿದೆ.. ಈತ ಫೇಸ್‌ಬುಕ್‌ ಲೈವ್‌ ಬಂದು ಅಖಿಲೇಶ್‌ ಯಾದವ್‌ ಪೋಸ್ಟರ್‌ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.. ಇದೇ ವೇಳೆ ಆತ ಅಖಿಲೇಶ್‌ ಯಾದವ್‌ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಜಲಮಂಡಳಿ ತೋಡಿದ ಗುಂಡಿಗೆ ಯುವಕ ಬಲಿ; ಇಬ್ಬರು ಗಂಭೀರ

 

Share Post