ಜಲಮಂಡಳಿ ತೋಡಿದ ಗುಂಡಿಗೆ ಯುವಕ ಬಲಿ; ಇಬ್ಬರು ಗಂಭೀರ
ಬೆಂಗಳೂರು; ಬೆಂಗಳೂರಲ್ಲಿ ಜಲಮಂಡಳಿ, ವಿದ್ಯುತ್ ಇಲಾಖೆ ಸೇರಿ ಹಲವು ಇಲಾಖೆಗಳು ಕಾಮಗಾರಿ ಹೆಸರಲ್ಲಿ ರಸ್ತೆಯಲ್ಲಿ ಗುಂಡಿಗಳನ್ನು ತೋಡುತ್ತಾರೆ.. ಅಲ್ಲಿ ಏನಾದರೂ ಅಡ್ಡ ಕೂಡಾ ಇಡೋದಿಲ್ಲ.. ಅದೊಂದು ವಾಹನ ಸವಾರರ ಪಾಲಿಗೆ ಯಮನಗುಂಡಿಗಳಾಗುತ್ತವೆ.. ಈ ಹಿಂದೆ ಇಂತಹ ಗುಂಡಿಗಳಿಗೆ ಬಿದ್ದು ಹಲವಾರು ಮಂದಿ ಸಾವನ್ನಪ್ಪಿದ್ದಾರೆ.. ಆದ್ರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.. ಜನಸಾಮಾನ್ಯರ ಬಗೆಗಿನ ಇಂತಹ ನಿರ್ಲಕ್ಷ್ಯದಿಂದಾಗಿ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ..
ಇದನ್ನೂ ಓದಿ; ಭೀಕರ ಅಪಘಾತದಿಂದ ಬೆಂಕಿ; ಕಾರಿನಲ್ಲೇ ಮಕ್ಕಳು ಸೇರಿ 7 ಮಂದಿ ಸಜೀವದಹನ!
ಒಂದೇ ಬೈಕ್‌ನಲ್ಲಿ ಬರುತ್ತಿದ್ದ ಮೂವರು;
ಬೆಂಗಳೂರಿನ ಕೆಂಗೇರಿ ಬಳಿಯ ಕೊಮ್ಮಘಟ್ಟ ಸರ್ಕಲ್‌ನಲ್ಲಿ ಈ ದುರಂತ ನಡೆದುಹೋಗಿದೆ.. ಬೈಕ್ ಸವಾರರದ್ದು ಕೂಡಾ ತಪ್ಪಿದ್ದರೂ, ಈ ದುರಂತಕ್ಕೆ ಜಲಮಂಡಳಿ ತೋಡಿದ ಗುಂಡಿಯೇ ಮೂಲ ಕಾರಣ ಎಂದೇ ಹೇಳಬಹುದು.. ನೀರು ಪೂರೈಕೆ ಕಾಮಗಾರಿಗಾಗಿ ಜಲಮಂಡಳಿ ಗುಂಡಿ ತೋಡಿತ್ತು.. ಅದನ್ನು ನೋಡದ ಬೈಕ್ ಸವಾರ ಅಲ್ಲಿಗೆ ಬಂದಿದ್ದು, ಬೈಕ್ ಗುಂಡಿಗೆ ಬಿದ್ದಿದೆ.. ಬೈಕ್‌ನಲ್ಲಿ ಮೂರು ಯುವಕರಿದ್ದು, ಇದರಲ್ಲಿ ಒಬ್ಬ ಯುವಕ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ; ಮಹಿಳೆಯರಿಗೆ ಅಪಮಾನ ಆಗುವ ರೀತಿಯಲ್ಲಿ ಮಾತನಾಡಿಲ್ಲ; ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ
ಇಬ್ಬರು ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು;
ಘಟನೆಯಲ್ಲಿ ಒಬ್ಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಮತ್ತಿಬ್ಬರು ಯುವಕರ ಸ್ಥಿತಿ ಗಂಭೀರವಾಗಿದೆ.. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಬ್ಯಾರಿಕೇಡ್ ಹಾಕದಿದ್ದುದೇ ಇದಕ್ಕೆ ಕಾರಣ;
ಕಾಮಗಾರಿಗಾಗಿ ಗುಂಡಿ ತೋಡಿದ್ದರೂ ಕೂಡಾ ಅಲ್ಲಿ ಬ್ಯಾರಿಕೇಡ್ ಅಡ್ಡ ಇಟ್ಟಿರಲಿಲ್ಲ.. ಹೀಗಾಗಿ ನೋಡದೇ ಬೈಕ್ ಸವಾರ ಬೈಕ್‌ನನ್ನು ಗುಂಡಿಗೆ ನುಗ್ಗಿಸಿದ್ದಾನೆ.. ಇದರಿಂದಾಗಿ ಜಲಮಂಡಳಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟರಾ ದೇವೇಗೌಡರು..?