Politics

Dr.K.Sudhakar; ಡಾ.ಕೆ.ಸುಧಾಕರ್‌ ಕಾಂಗ್ರೆಸ್‌ ಸೇರ್ತಾರಾ..?; ಕೈ ನಾಯಕರು ಅಭಿಪ್ರಾಯ ಸಂಗ್ರಹಿಸಿದ್ದೇಕೆ..?

ಬೆಂಗಳೂರು; ಡಾ.ಕೆ.ಸುಧಾಕರ್‌.. ಚಿಕ್ಕಬಳ್ಳಾಪುರದಲ್ಲಿ ಮತ್ತೆ ಈ ಹೆಸರು ವ್ಯಾಪಕವಾಗಿ ಕೇಳಿಬರುತ್ತಿದೆ.. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಹೈಕಮಾಂಡ್‌ ನನಗೆ ಟಿಕೆಟ್‌ ಕನ್ಫರ್ಮ್‌ ಮಾಡಿದೆ ಎಂದೇ ಆಪ್ತರ ಬಳಿ ಡಾ.ಕೆ.ಸುಧಾಕರ್‌ ಹೇಳಿಕೊಂಡಿದ್ದರಂತೆ.. ಅಷ್ಟೇ, ಚೇಳೂರು ತಾಲ್ಲೂಕಿನಿಂದ ಅವರು ಪಕ್ಷ ಸಂಘಟನೆ ಶುರು ಮಾಡಿದ್ದರು… ಆದ್ರೆ ಅದ್ಯಾಕೋ, ಸುಧಾಕರ್‌, ಬಿಜೆಪಿ ಬದಲಾಗಿ ಕಾಂಗ್ರೆಸ್‌ ಸೇರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡೋದಕ್ಕೆ ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ ಎನ್ನಲಾಗ್ತಿದೆ..

ಇದನ್ನೂ ಓದಿ; Lokayukta; ಸಿದ್ದರಾಮಯ್ಯ ವಿರುದ್ಧದ ಲಂಚ ಪ್ರಕರಣ; ಸಿಎಂಗೆ ʻಲೋಕಾʼ ಸಂಕಷ್ಟ!

ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕ;

ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕ; ಡಾ.ಕೆ.ಸುಧಾಕರ್‌ ಅವರು ಕಾಂಗ್ರೆಸ್‌ ಮೂಲಕವೇ ರಾಜಕೀಯಕ್ಕೆ ಬಂದವರು.. ಎರಡು ಬಾರಿ ಕಾಂಗ್ರೆಸ್‌ನಿಂದಲೇ ಶಾಸಕರಾಗಿದ್ದರು.. ಆದ್ರೆ ಆಪರೇಷನ್‌ ಕಮಲಕ್ಕೆ ತುತ್ತಾಗಿ ಅವರು ಬಿಜೆಪಿ ಸೇರಿದ್ದರು.. ಅಲ್ಲಿ ಪ್ರಭಾವಿ ಮಂತ್ರಿಯೂ ಆಗಿದ್ದರು.. ಸಿಎಂ ಆಗುವ ಕನಸೂ ಕಂಡಿದ್ದರು. ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್‌ ಸೋಲನುಭವಿಸಿದರು. ಇದಾದ ಮೇಲೆ ಅವರು ಸೈಲೆಂಟ್‌ ಆಗಿದ್ದರು.. ಆದ್ರೆ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅವರು ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಅವರು ಬಿಜೆಪಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿ ಬಂದಿದ್ದರು. ಜೊತೆಗೆ ಜೆಡಿಎಸ್‌ ನಾಯಕರಾದ ದೇವೇಗೌಡರು ಹಾಗೂ ಕುಮಾರಸ್ವಾಮಿಯವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಖಾಡಕ್ಕಿಳಿಯಲು ಅವರು ರೆಡಿಯಾಗಿದ್ದರು. ಈ ನಡುವೆ ಬಿಜೆಪಿಯ ಹಿರಿಯ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ತಮ್ಮ ಮಗನಿಗಾಗಿ ಟಿಕೆಟ್‌ ಕೇಳುತ್ತಿದ್ದಾರೆ. ಇನ್ನೊಂದೆಡೆ, ಯಡಿಯೂರಪ್ಪ ಹಾಗೂ ಅವರ ಪುತ್ರನ ಜೊತೆ ಸುಧಾಕರ್‌ ಅವರಿಗೆ ಸಂಬಂಧ ಅಷ್ಟಕ್ಕಷ್ಟೇ.. ಹೀಗಾಗಿ, ಮಾತೃಪಕ್ಷ ಕಾಂಗ್ರೆಸ್‌ಗೆ ಮರಳಿ ಅಲ್ಲಿಂದಲೇ ಸ್ಪರ‍್ಧೆ ಮಾಡೋದಕ್ಕೆ ಡಾ.ಕೆ.ಸುಧಾಕರ್‌ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; Siddu Vs Modi; ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ; ಸಿದ್ದರಾಮಯ್ಯ

ಎಸ್‌.ಟಿ.ಸೋಮಶೇಖರ್‌ ಮತ್ತಿತರರ ಜೊತೆ ಚರ್ಚೆ;

ಎಸ್‌.ಟಿ.ಸೋಮಶೇಖರ್‌ ಮತ್ತಿತರರ ಜೊತೆ ಚರ್ಚೆ; ಆಪರೇಷನ್‌ ಕಮಲಕ್ಕೆ ತುತ್ತಾದವರಲ್ಲಿ ಹಲವರು ಕಾಂಗ್ರೆಸ್‌ಗೆ ಸೇರುವ ನಿರೀಕ್ಷೆ ಇದೆ.. ಅದ್ರಲ್ಲೂ ಯಶವಂತಪುರದ ಶಾಸಕ ಎಸ್‌.ಟಿ.ಸೋಮಶೇಖರ್‌ ಮಾನಸಿಕವಾಗಿ ಕಾಂಗ್ರೆಸ್‌ನಲ್ಲಿದ್ದಾರೆ. ಹೀಗಿರುವಾಗಲೇ ಡಾ.ಕೆ.ಸುಧಾಕರ್‌ ಅವರು ಎಸ್‌.ಟಿ.ಸೋಮಶೇಖರ್‌ ಅವರ ಜೊತೆ ಕಾಂಗ್ರೆಸ್‌ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೂರು ವಾರಗಳ ಹಿಂದೆ ಸುಧಾಕರ್‌ ಅವರು ಸೋಮಶೇಖರ್‌ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; Bedroom Murder; ಬೆಡ್‌ರೂಮ್‌ಗೆ ಬಂದ ಅಪರಿಚಿತ; ಮೈದುನನ ಕೈಗೆ ಸಿಕ್ಕಾತ ಮಟಾಷ್‌!

ಕಾಂಗ್ರೆಸ್‌ ನಾಯಕರಿಂದ ಅಭಿಪ್ರಾಯ ಸಂಗ್ರಹ;

ಕಾಂಗ್ರೆಸ್‌ ನಾಯಕರಿಂದ ಅಭಿಪ್ರಾಯ ಸಂಗ್ರಹ; ಡಾ.ಕೆ.ಸುಧಾಕರ್‌ ಕಾಂಗ್ರೆಸ್‌ಗೆ ಬಂದರೆ ಕಾಂಗ್ರೆಸ್‌ ಲಾಭವೇನೋ ಇದೆ.. ಆದ್ರೆ ಹಾಲಿ ಇರುವ ಕಾಂಗ್ರೆಸ್‌ ನಾಯಕರು ಮುನಿಸಿಕೊಂಡರೆ ಎಂಬ ಹೈಕಮಾಂಡ್‌ ನಾಯಕರಿಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಶಾಸಕರು ಹಾಗೂ ಮುಖಂಡರಿಂದ ರಾಜ್ಯ ಕಾಂಗ್ರೆಸ್‌ ನಾಯಕರು ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಹುತೇಕರು ಡಾ.ಕೆ.ಸುಧಾಕರ್‌ ಮರಳಿ ಕಾಂಗ್ರೆಸ್‌ ಸೇರ್ಪಡೆಗೆ ಓಕೆ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಮಾತ್ರ ತಟಸ್ಥ ನಿಲುವು ತಾಳಿದ್ದು, ಹಿರಿಯ ನಾಯಕರು ಏನು ಹೇಳಿದರೆ ಅದಕ್ಕೆ ಬದ್ಧ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಡಿಕೆ ಗ್ರೀನ್‌ ಸಿಗ್ನಲ್‌, ನಿಲುವು ತಿಳಿಸದ ಸಿದ್ದರಾಮಯ್ಯ;

ಡಿಕೆ ಗ್ರೀನ್‌ ಸಿಗ್ನಲ್‌, ನಿಲುವು ತಿಳಿಸದ ಸಿದ್ದರಾಮಯ್ಯ; ಡಾ.ಕೆ.ಸುಧಾಕರ್‌ ಕಾಂಗ್ರೆಸ್‌ ಮರು ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ ಸಿದ್ದರಾಮಯ್ಯ ಮಾತ್ರ ಅಳೆದೂತೂಗಿ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಡಾ.ಕೆ.ಸುಧಾಕರ್‌ ಅವರು ಸಿದ್ದರಾಮಯ್ಯ ಅವರ ಗರಡಿಯಲ್ಲೇ ಬೆಳೆದವರು.. ಮೊದಲ ಬಾರಿ ಸುಧಾಕರ್‌ ಶಾಸಕರಾದಾಗ ಅವರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು 800 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ನೀಡಿದ್ದರು. ಹೀಗಿದ್ದರೂ ಅವರು ಬಿಜೆಪಿಗೆ ಹೋಗಿದ್ದರು.. ಜೊತೆಗೆ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ಬಾಣಗಳನ್ನು ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಯೋಚನೆ ಮಾಡುತ್ತಿದ್ದಾರೆ.

ಇದನ್ನೂ ಓದಿ; After Marriage; ದಂಪತಿಗಳು ಹೀಗೆ ಜೀವಿಸಿದರೆ ಮಾತ್ರ ಅನ್ಯೋನ್ಯತೆ ಬೆಳೆಯುತ್ತೆ!

ರಕ್ಷಾ ರಾಮಯ್ಯ, ಬಲಜಿಗರಿಗೆ ಮೋಸ;

ರಕ್ಷಾ ರಾಮಯ್ಯ, ಬಲಜಿಗರಿಗೆ ಮೋಸ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಲಜಿಗರ ಮತಗಳು ಹೆಚ್ಚಿವೆ. ಆದ್ರೆ ಈ ಸಮುದಾಯಕ್ಕೆ ಮೊದಲಿನಿಂದಲೂ ರಾಜಕೀಯ ಪ್ರಾತಿನಿದ್ಯ ಸಿಕ್ಕಿಲ್ಲ. ಜೊತೆಗೆ 2ಎ ಗೆ ಸೇರ್ಪಡೆ ಮಾಡಬೇಕೆಂಬ ಬಲಜಿಗರ ಹೋರಾಟಕ್ಕೂ ಸರ್ಕಾರಗಳು ಸೊಪ್ಪು ಹಾಕುತ್ತಿಲ್ಲ. ಹೀಗಿರುವಾಗಲೇ ಬಲಜಿಗರ ಮುಖಂಡ ರಕ್ಷಾ ರಾಮಯ್ಯ ಅವರು ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್‌ ಬಯಸುತ್ತಿದ್ದಾರೆ. ಅವರು ಸಾಕಷ್ಟು ಸಂಪರ್ಕ ಇಟ್ಟುಕೊಂಡಿರುವುದರಿಂದ ಗೆಲ್ಲುವ ಅಭ್ಯರ್ಥಿ ಅಂತಾನೂ ಬಿಂಬಿತರಾಗಿದ್ದಾರೆ. ಹೀಗಿರುವಾಗ ಡಾ.ಕೆ.ಸುಧಾಕರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್‌ ಕೊಟ್ಟರೆ, ರಕ್ಷಾ ರಾಮಯ್ಯ ಅವರಿಗೆ ಮೋಸ ಮಾಡಿದಂತೆ ಆಗುತ್ತದೆ. ಇದರಿಂದ ಬಲಜಿಗರ ವಿರೋಧಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ; Elvish Yadav; ಪತ್ರಕರ್ತರು, ಮಹಿಳೆಯರ ಬಗ್ಗೆ ಬಿಗ್‌ಬಾಸ್‌ ವಿನ್ನರ್‌ ಅವಹೇಳನ!

 

Share Post