Politics

Shobha Vs Ravi; ಶೋಭಾ ಹಠಾವೋ, ಬಿಜೆಪಿ ಬಚಾವೋ..!; ಏನಿದು ಅಭಿಯಾನ..?

ಚಿಕ್ಕಮಗಳೂರು; ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.. ಇಲ್ಲಿ ಸತತ ಎರಡು ಬಾರಿ ಶೋಭಾ ಕರಂದ್ಲಾಜೆಯವರು ಸಂಸದೆಯಾಗಿ ಆಯ್ಕೆಯಾಗಿದ್ದಾರೆ.. ಕೇಂದ್ರ ಮಂತ್ರಿಯೂ ಆಗಿದ್ದಾರೆ.. ಆದರೂ ಕೂಡಾ ಅವರಿಗೆ ಈ ಬಾರಿ ಟಿಕೆಟ್‌ ಬೇಡ ಅನ್ನೂ ಕೂಗು ಎದ್ದಿದೆ.. ಅದಲ್ಲೂ ಕೆಲ ಬಿಜೆಪಿ ಕಾರ್ಯಕರ್ತರೇ ಶೋಭಾ ಕರಂದ್ಲಾಜೆಗೆ ಟಿಕೆಟ್‌ ಕೊಡಬಾರದು ಎಂದು ಪಟ್ಟು ಹಿಡಿದಿದ್ದಾರೆ.. ಇದಕ್ಕೆ ಕಾರಣ ಅವರು ಕ್ಷೇತ್ರಕ್ಕೆ ಭೇಟಿ ಕೊಡೋದಿಲ್ಲ.. ಜನರ ಸಂಕಷ್ಟ ಅರಿಯೋದಿಲ್ಲ ಅನ್ನೋದು…

ಇದನ್ನೂ ಓದಿ; Dr.K.Sudhakar; ಡಾ.ಕೆ.ಸುಧಾಕರ್‌ ಕಾಂಗ್ರೆಸ್‌ ಸೇರ್ತಾರಾ..?; ಕೈ ನಾಯಕರು ಅಭಿಪ್ರಾಯ ಸಂಗ್ರಹಿಸಿದ್ದೇಕೆ..?

ಶೋಭಾ ಕರಂದ್ಲಾಜೆ ವರ್ಸಸ್‌ ಸಿ.ಟಿ.ರವಿ;

ಶೋಭಾ ಕರಂದ್ಲಾಜೆ ವರ್ಸಸ್‌ ಸಿ.ಟಿ.ರವಿ; ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ ಚುನಾವಣೆ ಸಂದರ್ಭದಲ್ಲಿಯೇ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ಬೇಡ ಎಂದು ಕೂಗು ಕೇಳಿ ಬಂದಿತ್ತು.. ಆದರೂ ಕೂಡಾ ಬಿಜೆಪಿ ಹೈಕಮಾಂಡ್‌ ಶೋಭಾ ಅವರಿಗೆ ಟಿಕೆಟ್‌ ನೀಡಿತ್ತು. ಅವರೂ ಗೆದ್ದು ಬಂದು ಮಂತ್ರಿಯೂ ಆಗಿದ್ದಾರೆ. ಆದ್ರೆ, ಶೋಭಾ ಕರಂದ್ಲಾಜೆಯವರು ಗೆದ್ದ ಮೇಲೆ ಕ್ಷೇತ್ರಕ್ಕೆ ಬರೋದೇ ಇಲ್ಲ. ಯಾವಗಲೋ ಒಮ್ಮೆ ಬಂದು ಹೋಗುತ್ತಾರೆ ಎಂಬ ಆರೋಪವಿದೆ. ಈ ಕಾರಣಕ್ಕಾಗಿಯೇ ಬಿಜೆಪಿಯಲ್ಲಿನ ಒಂದು ಗುಂಪು ಶೋಭಾ ಕರಂದ್ಲಾಜೆಗೆ ಈ ಬಾರಿ ಟಿಕೆಟ್‌ ಬೇಡ ಎಂದು ಆಗ್ರಹಿಸುತ್ತಿದೆ. ಮಾಜಿ ಸಚಿವ ಸಿ.ಟಿ.ರವಿಯವರು ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಇದೀಗ ಅವರು ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಅವರ ಬೆಂಬಲಿಗರು ಶೋಭಾಗೆ ಟಿಕೆಟ್‌ ಬೇಡ, ಸಿ.ಟಿ.ರವಿಗೆ ಟಿಕೆಟ್‌ ಕೊಡಿ ಎಂದು ಆಗ್ರಹ ಮಾಡುತ್ತಿದ್ದಾರೆ.

ಇದನ್ನೂ ಓದಿ; Lokayukta; ಸಿದ್ದರಾಮಯ್ಯ ವಿರುದ್ಧದ ಲಂಚ ಪ್ರಕರಣ; ಸಿಎಂಗೆ ʻಲೋಕಾʼ ಸಂಕಷ್ಟ!

ಶೋಭಾ ಹಠಾವೋ, ಬಿಜೆಪಿ ಬಚಾವೋ..;

ಶೋಭಾ ಹಠಾವೋ, ಬಿಜೆಪಿ ಬಚಾವೋ..; ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಒಂದು ಗುಂಪು ಶೋಭಾ ಹಠಾವೋ ಬಿಜೆಪಿ ಬಚಾವೋ ಅಭಿಯಾನ ಶುರು ಮಾಡಿದೆ… ಈ ಹಿಂದೆ ಗೋ ಬ್ಯಾಕ್‌ ಶೋಭಾ ಎಂಬ ಅಭಿಯಾನದ ಮಾಡಿದವರೇ ಈಗ ಮತ್ತೊಂದು ಅಭಿಯಾನ ಶುರು ಮಾಡಿದ್ದಾರೆ. ಏನಾದರೂ ಮಾಡಿ ಈ ಬಾರಿ ಶೋಭಾ ಕರಂದ್ಲಾಜೆಗೆ ಟಿಕೆಟ್‌ ತಪ್ಪಿಸಬೇಕೆಂದು ಒಂದು ಗುಂಪು ಬಿಜೆಪಿ ಹೈಕಮಾಂಡ್‌ ಬಳಿ ಒತ್ತಡ ಹೇರಲು ಶುರು ಮಾಡಿದೆ. ಈ ಬಗ್ಗೆ ಪ್ರಧಾನಿ ನರೇಂದ್ರಮೋದಿ, ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರಗಳನ್ನು ಕೂಡಾ ಬರೆಯಲಾಗಿದೆ.

ಇದನ್ನೂ ಓದಿ; After Marriage; ದಂಪತಿಗಳು ಹೀಗೆ ಜೀವಿಸಿದರೆ ಮಾತ್ರ ಅನ್ಯೋನ್ಯತೆ ಬೆಳೆಯುತ್ತೆ!

ಶೋಭಾಗೆ ಟಿಕೆಟ್‌ ಬೇಡ ಎನ್ನಲು ಕಾರಣವೇನು..?;

ಶೋಭಾಗೆ ಟಿಕೆಟ್‌ ಬೇಡ ಎನ್ನಲು ಕಾರಣವೇನು..?; ಶೋಭಾ ಕರಂದ್ಲಾಜೆಗೆ ಟಿಕೆಟ್‌ ಯಾಕೆ ಬೇಡ ಅನ್ನೋದಕ್ಕೆ ಕಾರಣಗಳನ್ನೂ ಕೊಡುತ್ತಿದ್ದಾರೆ. ಅವರು ಕ್ಷೇತ್ರಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ ಎಂಬುದರ ಲೆಕ್ಕ ಕೂಡಾ ಕೊಡುತ್ತಿದ್ದಾರೆ. ಶೋಭಾ ಕರಂದ್ಲಾಜೆಯವರು 3583 ದಿನಗಳಲ್ಲಿ ಕೇವಲ 100 ಬಾರಿ ಮಾತ್ರ ಕ್ಷೇತ್ರಕ್ಕೆ ಬಂದಿದ್ದಾರಂತೆ.. ಅದೂ ಕೂಡಾ ಯಾವುದೋ ಕಾರ್ಯಕ್ರಮದ ನೆಪದಲ್ಲಿ ಬಂದುಹೋಗಿದ್ದಾರೆ. ಆದ್ರೆ ಈ ವೇಳೆಯೂ ಕ್ಷೇತ್ರದ ಜನರ ಸಮಸ್ಯೆ ಕೇಳಿಲ್ಲ.. ಕಾರ್ಯಕರ್ತರಿಗೂ ಅವರು ಸಿಗೋದಿಲ್ಲ.. ಹೀಗಿರುವಾಗ ಅವರು ನಮಗೆ ಬೇಡ ಎಂದು ಒಂದು ಗುಂಪು ಹೇಳುತ್ತಿದೆ.

ಇದನ್ನೂ ಓದಿ; Bedroom Murder; ಬೆಡ್‌ರೂಮ್‌ಗೆ ಬಂದ ಅಪರಿಚಿತ; ಮೈದುನನ ಕೈಗೆ ಸಿಕ್ಕಾತ ಮಟಾಷ್‌!

 

Share Post