After Marriage; ದಂಪತಿಗಳು ಹೀಗೆ ಜೀವಿಸಿದರೆ ಮಾತ್ರ ಅನ್ಯೋನ್ಯತೆ ಬೆಳೆಯುತ್ತೆ!
ಗಂಡ-ಹೆಂಡತಿ ಸಂಬಂಧ ತುಂಬಾ ಗಟ್ಟಿಯಾಗಿರುವಂತಹದ್ದು.. ಇಲ್ಲಿ ಸ್ವಲ್ಪ ವ್ಯತ್ಯಾಸಗಳಾದರೂ ಇಬ್ಬರೂ ಅನ್ಯೋನ್ಯವಾಗಿ ಬಾಳೋದು ಅತಿ ಮುಖ್ಯವಾಗುತ್ತದೆ.. ಇಲ್ಲದೆ ಹೋದರೆ ಕುಟುಂಬದಲ್ಲಿ ನೆಮ್ಮದಿ ಹಾಳಾಗುತ್ತದೆ.. ಹೀಗಾಗಿ ಗಂಡ-ಹೆಂಡತಿ ನಡುವಿನ ಸಂಬಂಧ ಅತ್ಯಂತ ಮುಖ್ಯವಾಗುತ್ತದೆ.. ನಿಮ್ಮ ಸಂಗಾತಿಯೊಂದಿಗೆ ನೀವು ಸಂತೋಷದಿಂದ ಇರಬೇಕಾದರೆ, ನಿಮ್ಮ ನಡುವಿನ ಸಂಬಂಧ ಬಲಪಡಿಸಬೇಕು. ಅದಕ್ಕಾಗಿ ನೀವು ಕೆಲವವೊಂದು ಸಲಹೆಗಳನ್ನು ಅನುಸರಿಸಬೇಕಾಗುತ್ತದೆ. ಇದರಿಂದ ನಿಮ್ಮ ನಡುವೆ ಯಾವುದೇ ಬಿರುಕು ಕಾಣಿಸೋದಿಲ್ಲ.
ಇದನ್ನೂ ಓದಿ;Miss World 2024; ವಿಶ್ವಸುಂದರಿ ಆಗ್ತಾರಾ ಈ ಕನ್ನಡದ ಬ್ಯೂಟಿ..?
ಮಾನಸಿಕ ಆರೋಗ್ಯ;
ಮಾನಸಿಕ ಆರೋಗ್ಯ; ಮನುಷ್ಯ ಸಂಬಂಧಗಳ ನಡುವೆ ಜಗಳಗಳು ಬರೋದಕ್ಕೆ ಕಾರಣವೇ ಮಾನಸಿಕ ಆರೋಗ್ಯ. ಯಾವುದೋ ವಿಚಾರವಾಗಿ ನೆಮ್ಮದಿ ಕೆಡಿಸಿಕೊಂಡ ವ್ಯಕ್ತಿಗಳು ಮನೆಗೆ ಬಂದು ಅದನ್ನು ಸಂಗಾತಿಯ ಮೇಲೆ ತೋರಿಸುತ್ತಿರುತ್ತಾರೆ. ಬೇರೆ ಯಾರದೋ ಮೇಲೆ ತೋರಿಸಬೇಕಾದ ಕೋಪ, ಗಂಡ-ಹೆಂಡತಿ ಮೇಲೆ ತೋರಿಸಲಾಗುತ್ತದೆ. ಹೀಗಾಗಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತಿಮುಖ್ಯ. ಜೀವನದಲ್ಲಿ ಏನೇ ಬರಲಿ ತಾಳ್ಮೆಯಿಂದ ಎದುರಿಸಬೇಕು. ಆರೋಗ್ಯಕರ ಜೀವನಶೈಲಿ ತಮ್ಮದಾಗಿಸಿಕೊಳ್ಳಬೇಕು. ದಂಪತಿಗಳು ಮನೆಯಲ್ಲಿದ್ದಾಗ, ಒಟ್ಟಿಗೆ ಆಹಾರ ಸೇವಿಸುವುದು, ಏನೇ ವಿಚಾರಗಳಿದ್ದರೂ ಪರಸ್ಪರ ತಾಳ್ಮೆಯಿಂದ ಕೇಳಿಸಿಕೊಳ್ಳುವುದು, ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದು ಮಾಡಿದರೆ ಸಂಬಂಧಗಳು ಗಟ್ಟಿಯಾಗುತ್ತವೆ.
ಇದನ್ನೂ ಓದಿ;Dragon Fruit; ಡ್ರ್ಯಾಗನ್ ಫ್ರೂಟ್ ಫೇಸ್ ಪ್ಯಾಕ್ ಯಾವಾಗ್ಲಾದರೂ ಬಳಸಿದ್ದೀರಾ..?
ಉತ್ತಮ ಸಂವಹನ ಅಗತ್ಯ;
ಉತ್ತಮ ಸಂವಹನ ಅಗತ್ಯ; ದಂಪತಿಗಳ ನಡುವೆ ಸಂವಹನ ಸರಿಯಾಗಿರಬೇಕು.. ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಕೇಳಿಸಿಕೊಳ್ಳಬೇಕು. ಅವರು ಹೇಳಿದ್ದನ್ನು ಕೇಳಿಸಿಕೊಂಡ ಮೇಲೆ ಪ್ರತಿಕ್ರಿಯೆ ನೀಡಬೇಕು.. ಒಬ್ಬರ ಮಾತು ಒಬ್ಬರು ಕೇಳಿಸಿಕೊಳ್ಳಲು ರೆಡಿ ಇಲ್ಲದಿದ್ದರೆ ಮನೆಯಲ್ಲಿ ಜಗಳಗಳು ಬರೋದು ಕಾಮನ್.. ಹೀಗಾಗಿ ಸಂಗಾತಿಗಳು ಯಾವುದೇ ವಿಚಾರವನ್ನು ಪರಸ್ಪರ ತಾಳ್ಮೆಯಿಂದ ಚರ್ಚೆ ಮಾಡಬೇಕು.. ಮನೆಯ ಜವಾಬ್ದರಿಗಳು, ಮನೆಯ ನಿರ್ವಹಣೆ, ಮಕ್ಕಳ ಪೋಷಣೆ ಹೀಗೆ ಎಲ್ಲಾ ವಿಚಾರಗಳ ಬಗ್ಗೆಯೂ ಚರ್ಚೆ ನಡೆದರೆ ಮಾತ್ರ ಸಂಬಂಧ ಚೆನ್ನಾಗಿರುತ್ತದೆ.
ದೈಹಿಕ ಸಂಬಂಧ ಚೆನ್ನಾಗಿರಬೇಕು;
ದೈಹಿಕ ಸಂಬಂಧ ಚೆನ್ನಾಗಿರಬೇಕು; ದಂಪತಿಗಳು ಅನ್ಯೋನ್ಯವಾಗಿರುವುದಕ್ಕೆ ಪ್ರಣವೂ ಕೂಡಾ ಇಂಪಾರ್ಟೆಂಟ್ ಆಗಿರುತ್ತದೆ.. ದೈಹಿಕ ಸಂಬಂಧ ಸುಖಕರವಾಗಿದ್ದರೆ, ಇಬ್ಬರ ನಡುವಿನ ಮಾನಸಿಕ ಸಂಬಂಧ ಹೊಂದಾಣಿಕೆ ಕೂಡಾ ಚೆನ್ನಾಗಿರುತ್ತದೆ. ಹೀಗಾಗಿ ದಾಂಪತ್ಯದಲ್ಲಿ ಪ್ರಣಯ ಕೂಡಾ ಇಂಪಾರ್ಟೆಂಟ್ ಆಗುತ್ತದೆ. ಹೀಗಾಗಿ ಬ್ಯುಸಿ ಲೈಫ್‌ನ ನಡುವೆಯೂ ಸಂಗಾತಿ ಸಮಯ ಕೊಡುವುದನ್ನು ಕಲಿತುಕೊಂಡರೆ ಎಲ್ಲವೂ ಸರಿ ಇರುತ್ತದೆ.
ಇದನ್ನೂ ಓದಿ; Meat Rice; ಈ ಅಕ್ಕಿ ಬೇಯಿಸಿದರೆ ಮಾಂಸವಾಗುತ್ತಂತೆ..!
ಹಂಚಿಕೊಂಡು ಕೆಲಸ ಮಾಡಿ;
ಹಂಚಿಕೊಂಡು ಕೆಲಸ ಮಾಡಿ; ಎಷ್ಟೋ ಮನೆಗಳಲ್ಲಿ ಮನೆಯ ಕೆಲಸಗಳಲ್ಲಿ ಗಂಡ ಸಹಾಯ ಮಾಡೋದಿಲ್ಲ ಎಂಬ ಆರೋಪವನ್ನು ಮಹಿಳೆಯರು ಮಾಡುತ್ತಿರುತ್ತಾರೆ.. ಗಂಡಂದಿರು ನಾವು ಹೊರಗಡೆ ದುಡಿದು ಸುಸ್ತಾಗಿ ಬಂದಿರುತ್ತೇವೆ. ಮನೆಗೆ ಬಂದಾಗ ಒಂದು ಲೋಟ ನೀರೂ ಕೊಡೋದಿಲ್ಲ ಎಂದು ದೂರುತ್ತಿರುತ್ತಾರೆ. ಇಂತಹ ಸಣ್ಣ ವಿಷಯಗಳು ಕೂಡಾ ಜಗಳಕ್ಕೆ ನಾಂದಿ ಹಾಡುತ್ತವೆ. ಸಂಬಂಧಗಳು ಹಾಳಾಗೋದಕ್ಕೆ ಕಾರಣವಾಗುತ್ತವೆ. ಹೀಗಾಗಿ ಕೆಲಸಗಳ ಹಂಚಿಕೆ, ಈ ಬಗ್ಗೆ ಇಬ್ಬರೂ ಕ್ಲಾರಿಟಿ ತಂದುಕೊಂಡರೆ ಉತ್ತಮ. ಜೊತೆಗೆ ಒಬ್ಬರ ಕೆಲಸದ ಬಗ್ಗೆ ಇನ್ನೊಬ್ಬರಿಗೆ ಗೌರವ ಇರಬೇಕು.. ಯಾವುದಕ್ಕೂ ಕೀಳಾಗಿ ಕಾಣಬಾರದು.
ಇದನ್ನೂ ಓದಿ;Bhadrachalam; ಭದ್ರಾಚಲಂ ಶ್ರೀರಾಮನ 6 ಕೆಜಿ ಬೆಳ್ಳಿ ಇಟ್ಟಿಗೆ ನಾಪತ್ತೆ..!
ತಪ್ಪುಗಳನ್ನು ಒಪ್ಪಿಕೊಳ್ಳುವುದು;
ತಪ್ಪುಗಳನ್ನು ಒಪ್ಪಿಕೊಳ್ಳುವುದು; ಮನುಷ್ಯ ಎಂದ ಮೇಲೆ ತಪ್ಪುಗಳನ್ನು ಮಾಡುವುದು ಸಹಜ. ತಿಳಿಯದೆಯೋ ಅಥವಾ ತಿಳಿದೋ ಕುಟುಂಬದಲ್ಲೂ ತಪ್ಪುಗಳು ನಡೆಯುತ್ತಿರುತ್ತವೆ. ಆದ್ರೆ ಆ ತಪ್ಪು ನಾನೇ ಮಾಡೇ ಇಲ್ಲ ಎಂದು ಕೆಲವರು ವಾದಿಸುತ್ತಿರುತ್ತಾರೆ. ಇದು ತಪ್ಪು.. ತಪ್ಪುಗಳನ್ನು ಒಪ್ಪಿಕೊಂಡು ಮುಂದೆ ಸಾಗಬೇಕು.. ಪರಸ್ಪರ ತಪ್ಪುಗಳನ್ನು ಒಪ್ಪಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ತಪ್ಪು ಮಾಡಿದಾಗ ಬೈಯ್ಯದೆ ಕ್ಷಮಿಸುವ ಗುಣ ಇಬ್ಬರಲ್ಲೂ ಇರಬೇಕು. ಇದರಿಂದಾಗಿಯೂ ಸಂಬಂಧಗಳು ಗಟ್ಟಿಯಾಗುತ್ತವೆ.
ಇದನ್ನೂ ಓದಿ; Ayurveda Tips; ಈ 5 ಆಯುರ್ವೇದ ವಸ್ತುಗಳಿಂದ ನಿಮ್ಮ ಚರ್ಮ ಕಾಂತಿಯುತ!