CinemaSports

ಮತ್ತೊಬ್ಬ ನಟಿ ಜೊತೆ ಫ್ಲರ್ಟ್‌ ಮಾಡ್ತಿದ್ದಾರಾ ಶೋಯೆಬ್‌ ಮಲಿಕ್‌..?

ಶೋಯೆಬ್‌ ಮಲಿಕ್‌.. ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಆಟಗಾರ.. ಶೋಯೆಬ್‌ ಮಲಿಕ್‌ ಭಾರತದ ಟೆನ್ನಿಸ್‌ ತಾರೆ ಸಾಯಿಯಾ ಮಿರ್ಜಾ ಅವರನ್ನು ಮದುವೆಯಾಗಿತ್ತು.. ಆದ್ರೆ ಇತ್ತೀಚೆಗೆ ವಿಚ್ಛೇದನ ನೀಡಿದ್ದ ಅವರು, ನಟಿ ಸನಾ ಜಾವೇದ್‌ ಅವರನ್ನು ಮದುವೆಯಾಗಿದ್ದರು.. ವರ್ಷದ ಆರಂಭದಲ್ಲೇ ಈ ಮದುವೆಯಾಗಿರೋದು.. ಆದ್ರೆ ಇದಾದ ಎರಡು ಮೂರು ತಿಂಗಳಲ್ಲೇ ಶೋಯೆಬ್‌ ಮಲಿಕ್‌, ಮತ್ತೊಬ್ಬ ನಟಿಯ ಜೊತೆ ಫ್ಲರ್ಟಿಂಗ್‌ ಶುರು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ..

ಇದನ್ನೂ ಓದಿ; ಬೆಂಗಳೂರಿನಲ್ಲಿ ಕಾಲರಾ ಭೀತಿ; ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬರಿಗೆ ದೃಢ

ನಟಿ ನವಾಲ್‌ ಸಯೀದ್‌ ಈ ಬಗ್ಗೆ ಹೇಳಿದೇನು..?

ನಟಿ ನವಾಲ್‌ ಸಯೀದ್‌ ಅವರು ಈ ಬಗ್ಗೆ ಮಾತನಾಡಿದ್ದಾರೆ.. ಪಾಕಿಸ್ತಾನದ ಚಾಟ್ ಶೋ ‘ಲೈಫ್ ಗ್ರೀನ್ ಹೇ’ನಲ್ಲಿ ಮದುವೆಯಾದ ಕ್ರಿಕೆಟರ್‌ಗಳು ನನಗೆ ಮಸೇಜ್‌ ಮಾಡುತ್ತಿರುತ್ತಾರೆ ಎಮದು ನಟಿ ನವಾಲ್‌ ಸಯೀದ್‌ ಹೇಳಿಕೊಂಡಿದ್ದಾರೆ.. ಈ ಹಿನ್ನೆಲೆಯಲ್ಲಿ ಅದು ಶೋಯೆನ್‌ ಮಲಿಕ್‌  ಎಂದು ಚರ್ಚೆ ನಡೆಯುತ್ತಿದೆ..  ನನಗೆ ಈಗಾಗಲೇ ಮದುವೆ ಆದವರು ಹಾಗೂ ಪ್ರೀತಿಯಲ್ಲಿ ಇರೋ ಕ್ರಿಕೆಟರ್​ಗಳಿಂದ ಮೆಸೇಜ್‌ ಬರುತ್ತಿರುತ್ತವೆ ಎಂದು ನಟಿ ಹೇಳಿದ್ದಾರೆ.. ಈ ವೇಳೆ ನಸೀಮ್ ಶಾ ಇದ್ದಾರಾ ಇದರಲ್ಲಿ ಎಂಬ ಪ್ರಶ್ನೆಗೆ ಆಕೆ ನಕ್ಕು ಸುಮ್ಮನಾಗಿದ್ದಾಳೆ.. ಶೋಯೆಬ್‌ ಮಲಿಕ್‌ ಹೆಸರು ಹೇಳಿದಾಗಲೂ ನಕ್ಕು ಸುಮ್ಮನಾಗಿದ್ದಾಳೆ.. ಹೀಗಾಗಿ ಅಭಿಮಾನಿಗಳು ಆ ನಗುವಿನ ಅರ್ಥ ಹುಡುಕುತ್ತಿದ್ದಾರೆ.

ಇದನ್ನೂ ಓದಿ; ಶಿವಮೊಗ್ಗದಲ್ಲಿ 2009ರ ಸೋಲಿನ ಸೇಡು ತೀರಿಸಿಕೊಳ್ತಾರಾ ಬಂಗಾರಪ್ಪ ಅಭಿಮಾನಿಗಳು..?

ಪತ್ನಿ ಹುಟ್ಟುಹಬ್ಬ ಆಚರಿಸಿದ್ದ ಶೋಯೆಬ್‌ ಮಲಿಕ್‌;

ಶೋಯೆಬ್‌ ಮಲಿಕ್‌ ಅವರ ಪತ್ನಿ  ಸನಾ ಜಾವೇದ್ ಅವರ 31ನೇ ಬರ್ತ್​​ಡೇಯನ್ನು ಇತ್ತೀಚೆಗೆ ಆಚರಿಸಿಕೊಂಡಿದ್ದರು.. ಪತಿ ಶೋಯೆಬ್‌ ಮಲಿಕ್‌ ಅವರೇ ಮುಂದೆ ನಿಂತು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಅಪ್‌ಲೋಡ್‌ ಮಾಡಲಾಗಿದ್ದು, ಇದಕ್ಕೆ ಸಾನಿಯಾ ಮಿರ್ಜಾ ಅಭಿಮಾನಿಗಳು ನೆಗೆಟಿವ್ ಕಮೆಂಟ್ ಮಾಡಿದ್ದರು. ಸಾನಿಯಾ ಹಾಗೂ ಶೋಯಿಬ್ 2010ರಲ್ಲಿ ಹೈದರಾಬಾದ್​ನಲ್ಲಿ ಮದುವೆ ಆಗಿದ್ದರು. ಇತ್ತೀಚೆಗೆ ಇವರಿಬ್ಬರೂ ಬೇರೆಯಾಗಿದ್ದಾರೆ..

ಇದನ್ನೂ ಓದಿ; ಚಾಮರಾಜನಗರದಲ್ಲಿ 98 ಕೋಟಿ ಮೌಲ್ಯದ ಮದ್ಯ ಪತ್ತೆ; ಯಾರಿಗೆ ಸೇರಿದ್ದು ಗೊತ್ತಾ..?

 

Share Post