BengaluruHealth

ಬೆಂಗಳೂರಿನಲ್ಲಿ ಕಾಲರಾ ಭೀತಿ; ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬರಿಗೆ ದೃಢ

ಬೆಂಗಳೂರು; ಒಂದು ಕಡೆ ಬಿಸಿಲಿನ ಧಗೆ.. ಮತ್ತೊಂದು ಕಡೆ ಕುಡಿಯೂದಕ್ಕೂ ನೀರಿಲ್ಲ.. ಬೆಂಗಳೂರು ಜನರ ಸಂಕಷ್ಟ ಅಷ್ಟಿಷ್ಟಲ್ಲ.. ಇದರ ನಡುವೆ ಬೆಂಗಳೂರಿನ ನಗರ ಹಲವು ಭಾಗಗಳಲ್ಲಿ ಕಾಲರಾ  ಪ್ರಕರಣಗಳು ಹೆಚ್ಚಾಗುತ್ತಿವೆ.. ಜನರು ವಾಂತಿ, ಬೇಧಿಯಿಂದ ನರಳುತ್ತಿದ್ದಾರೆ.. 

ಇದನ್ನೂ ಓದಿ; ತೀವ್ರ ಜ್ವರದಿಂದ ಬಳಲುತ್ತಿರುವ ಪವನ್‌ ಕಲ್ಯಾಣ್‌; ಪ್ರಚಾರ ಮುಂದೂಡಿಕೆ

ಬೆಂಗಳೂರಿನ ಜನಕ್ಕೆ ಕಾಲರಾ ಭೀತಿ;

ಬೆಂಗಳೂರು ಮಲ್ಲೇಶ್ವರಂ ಪ್ರದೇಶದಲ್ಲಿ ಕಾಲರಾ ಭೀತಿ ಎದುರಾಗಿದೆ.. ಈಗಾಗಲೇ ಈ ಪ್ರದೇಶದಲ್ಲಿ ಒಂದು ಕಾಲರಾ ಪ್ರಕರಣ ದೃಢಪಟ್ಟಿದೆ.. ಇನ್ನೂ ಎರಡು ಶಂಕಿತ ಪ್ರಕರಣಗಳಿವೆ.. ಆ ಇಬ್ಬರೂ ರೋಗಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.. ಬಿರುಬೇಸಿಗೆಯಲ್ಲಿ ಕಾಲರಾ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.. ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಾ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ..

ಇದನ್ನೂ ಓದಿ; ಶಿವಮೊಗ್ಗದಲ್ಲಿ 2009ರ ಸೋಲಿನ ಸೇಡು ತೀರಿಸಿಕೊಳ್ತಾರಾ ಬಂಗಾರಪ್ಪ ಅಭಿಮಾನಿಗಳು..?

15 ದಿನಗಳಲ್ಲೇ ಏಳು ಕಾಲರಾ ಪ್ರಕರಣ ದೃಢ;

ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳಿಗೆ ಒಂದು ಅಥವಾ ಎರಡು ಕಾಲರಾ ಪ್ರಕರಣಗಳು ಕಂಡುಬರುತ್ತವೆ.. ಆದ್ರೆ ಬೇಸಿಗೆ ಹಾಗೂ ನೀರಿನ ಸಮಸ್ಯೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿವೆ.. ಮಾರ್ಚ್‌ ತಿಂಗಳಲ್ಲಿ ಕೇವಲ 15 ದಿನಗಳಲ್ಲೇ 7 ಕಾಲರಾ ಪ್ರಕರಣಗಳು ದೃಢಪಟ್ಟಿವೆ.. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾಲರಾ ಹರಡುವ ಭೀತಿ ಎದುರಾಗಿದೆ..

ದಿನಕ್ಕೆ ಕನಿಷ್ಠ 20 ಮಂದಿ ಆಸ್ಪತ್ರೆಗೆ ದಾಖಲು;

ವಾಂತಿ ಬೇಧಿತಿಂದ ನರಳುವವರೆ ಸಂಖ್ಯೆ ಹೆಚ್ಚಾಗುತ್ತಿದೆ.. ಕೆಲ ದಿನಗಳಿಂದ ದಿನಕ್ಕೆ 20ಕ್ಕೂ ಹೆಚ್ಚು ಇಂತಹ ಪ್ರಕರಣಗಳ ಹೆಚ್ಚಾಗುತ್ತಿವೆ.. ಆದ್ರೆ ಇವೆಲ್ಲವೂ ಕಾಲರಾ ಆಗುವುದಿಲ್ಲ.. ಬೇಸಿಗೆ ಹೆಚ್ಚಾಗಿರುವುದರಿಂದ ನೀರನ ದಾಹ ಹೆಚ್ಚಾಗುತ್ತದೆ.. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗಲೂ ಇಂತಹ ಸಮಸ್ಯೆ ಹೆಚ್ಚಾಗುತ್ತದೆ.. ಇನ್ನು ಬೇಸಿಗೆಯಲ್ಲಿ ನೈರ್ಮಲ್ಯ ಕಡಿಮೆ ಇರುತ್ತದೆ.. ನೀರಿನ ಸಮಸ್ಯೆ ಇರುವುದರಿಂದ ಜನ ಸಿಕ್ಕಿದ ನೀರು ಕುಡಿಯುತ್ತಿದ್ದಾರೆ.. ಕಲುಷಿತ ನೀರು ಕೂಡಾ ಸೇವನೆ ಮಾಡುತ್ತಿದ್ದಾರೆ.. ಇದರಿಂದಾಗಿ ಇಂತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ..

ಇದನ್ನೂ ಓದಿ; ಚಾಮರಾಜನಗರದಲ್ಲಿ 98 ಕೋಟಿ ಮೌಲ್ಯದ ಮದ್ಯ ಪತ್ತೆ; ಯಾರಿಗೆ ಸೇರಿದ್ದು ಗೊತ್ತಾ..?

ನೀರಿನ ಬಿಕ್ಕಟ್ಟೇ ಇದಕ್ಕೆ ಪ್ರಮುಖ ಕಾರಣ;

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹೆಚ್ಚಾಗಿದೆ.. ಹೀಗಾಗಿ ಸಣ್ಣ ಸಣ್ಣ ಹೋಟೆಲ್‌ ಹಾಗೂ ರಸ್ತೆಬದಿಯ ಹೋಟೆಲ್‌ಗಳವರು ಯಾವ ನೀರು ಬಳಸುತ್ತಾರೋ ಗೊತ್ತಿಲ್ಲ.. ಜೊತೆಗೆ ಅಡುಗೆಗೆ ಹಾಗೂ ಪಾತ್ರೆ ತೊಳೆಯಲು ಕಲುಷಿತ ನೀರನ್ನೇ ಬಳಸುವ ಸಾಧ್ಯತೆ ಇದೆ.. ಹೀಗಾಗಿ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿಂಡಿಗಳನ್ನು ತಿನ್ನುವುದರಿಂದ ಇಂತಹ ಸಮಸ್ಯೆಗಳು ಎದುರಾಗಬಹುದು ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಬೋರ್‌ವೆಲ್‌ ದುರಂತ; 16 ಅಡಿ ಆಳದಲ್ಲಿ ಕಾಲು ಅಲ್ಲಾಡಿಸುತ್ತಿದೆ ಮಗು!

ಹಾಗಾದರೆ ಕಾಲರಾ ಲಕ್ಷಣಗಳೇನು..?

ವಿಷಕಾರಿ ಬ್ಯಾಕ್ಟೀರಿಯ ವಿಬ್ರಿಯೊ ಕಾಲರಾದಿಂದ ಹರಡುವ ಸೋಂಕೇ ಕಾಲರಾ ಆಗಿದೆ. ಇದರಿಂದ ಕರುಳು ಸೋಂಕು ಉಂಟಾಗಿ, ವಾಂತಿ ಬೇಧಿ ಕಾಣಿಸಿಕೊಳ್ಳುತ್ತದೆ.. ಕಲುಷಿತ ನೀರು ಕುಡಿಯುವುದರಿಂದಲೇ ಹೆಚ್ಚಾಗಿ ಈ ಕಾಲಾರಾ ರೋಗ ಬರುತ್ತದೆ.. ಹೀಗಾಗಿ ಶುದ್ಧ ಕುಡಿಯುವ ನೀರನ್ನೇ ಬಳಸಬೇಕು.. ನೀರನ್ನು ಕುದಿಸಿ ಆರಿಸಿ ಕುಡಿದರೆ ಒಳ್ಳೆಯದು ಎಂದು ತಜ್ಞರು ಹೇಳುತ್ತಿದ್ದಾರೆ..

ಇದನ್ನೂ ಓದಿ; ಯುಗಾದಿ ನಂತರ ಈ ಐದು ರಾಶಿಗಳವರಿಗೆ ಮುಟ್ಟಿದ್ದೆಲ್ಲಾ ಚಿನ್ನ..

 

Share Post