ತೀವ್ರ ಜ್ವರದಿಂದ ಬಳಲುತ್ತಿರುವ ಪವನ್ ಕಲ್ಯಾಣ್; ಪ್ರಚಾರ ಮುಂದೂಡಿಕೆ
ಅಮರಾವತಿ; ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಒಂದೇ ಬಾರಿ ಚುನಾವಣೆ ನಡೆಯುತ್ತಿದೆ.. ಹೀಗಾಗಿ ಪ್ರಚಾರದ ಭರಾಟೆ ಜೋರಾಗಿದೆ.. ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಹಾಗೂ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಹೊಂದಾಣಿಕೆ ಮಾಡಿಕೊಂಡಿವೆ.. ವೈೆಎಸ್‌ಆರ್‌ಸಿಪಿಯನ್ನು ಅಧಿಕಾರದಿಂದ ಕೆಳಗಿಳಿಸೋಕೆ ಭಾರೀ ಕಸರತ್ತು ನಡೆಯುತ್ತಿದೆ.. ಈ ನಡುವೆ ಜನಸೇನಾ ಪಾರ್ಟಿ ಮುಖ್ಯಸ್ಥ ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.. ಹೀಗಾಗಿ ಚುನಾವಣಾ ಪ್ರಚಾರವನ್ನು ಮುಂದೂಡಲಾಗಿದೆ..
ಇದನ್ನೂ ಓದಿ; ಬೋರ್‌ವೆಲ್ ದುರಂತ; 16 ಅಡಿ ಆಳದಲ್ಲಿ ಕಾಲು ಅಲ್ಲಾಡಿಸುತ್ತಿದೆ ಮಗು!
ಜ್ವರದ ಕಾರಣದಿಂದ ಪ್ರವಾಸ ಮುಂದೂಡಿದ ಪವನ್;
ಪವನ್ ಕಲ್ಯಾಣ್ ಅವರಿಗೆ ಮಾಡು ಇಲ್ಲವೆ ಮಡಿ ಎನ್ನುವ ಸ್ಥಿತಿ ಈ ಚುನಾವಣೆ.. ಈ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಜನಸೇನಾ ಪಾರ್ಟಿಗೆ ಕಷ್ಟವಾಗಲಿದೆ.. ಆದ್ರೆ ಚುನಾವಣೆ ಸಮಯದಲ್ಲೇ ಪವನ್ ಕಲ್ಯಾಣ್ ಅವರಿಗೆ ತೀವ್ರ ಜ್ವರ ಕಾಡುತ್ತಿವೆ.. ಅವರು ಕೆಲ ದಿನಗಳಿಂದ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು.. ಬೇಸಿಗೆ ಕಾರಣದಿಂದಾಗಿ ಬಿಸಿಲಿಗೆ ಅವರಿಗೆ ಜ್ವರ ಬಂದಿದೆ.. ಹೀಗಾಗಿ ಅವರು ಪ್ರವಾಸಗಳನ್ನು ಮುಂದೂಡಿದ್ದಾರೆ..
ಇದನ್ನೂ ಓದಿ; ಯುಗಾದಿ ನಂತರ ಈ ಐದು ರಾಶಿಗಳವರಿಗೆ ಮುಟ್ಟಿದ್ದೆಲ್ಲಾ ಚಿನ್ನ..
ಪಿಠಾಪುರಂನಿಂದ ಸ್ಪರ್ಧೆ ಮಾಡಿರುವ ಪವನ್ ಕಲ್ಯಾಣ್;
ನಟ ಹಾಗೂ ಜನಸೇನಾ ಪಾರ್ಟಿ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪಿಠಾಪುರಂನಿಂದ ಸ್ಪರ್ಧೆ ಮಾಡಿದ್ದಾರೆ.. ಅಲ್ಲಿಂದಲೇ ಅವರು ಪ್ರಚಾರ ಶುರು ಮಾಡಿದ್ದರು.. ಬೃಹತ್ ಸಮಾವೇಶ ನಡೆಸಿದ್ದರು.. ಆದರೆ ಅವರು ಬುಧವಾರ ಗುಂಟೂರು ಜಿಲ್ಲೆಯ ತೆನಾಲಿಗೆ ಭೇಟಿ ನೀಡಬೇಕಾಗಿತ್ತು.. ಈ ವೇಳೆ ಅವರಿಗೆ ತೀವ್ರ ಜ್ವರ ಕಾಡುತ್ತಿತ್ತು.. ಅಸ್ವಸ್ಥ ಸ್ಥಿತಿ ಉಂಟಾಗಿತ್ತು.. ಹೀಗಾಗಿ ಪವನ್ ಕಲ್ಯಾಣ್ ಅವರು ಗುಂಟೂರು ಜಿಲ್ಲೆ ತೆನಾಲಿ ಪ್ರವಾಸವನ್ನು ಮುಂದೂಡಿದ್ದಾರೆ.. ತೀವ್ರ ಜ್ವರದಿಂದ ಬಳಲುತ್ತಿದ್ದ ಜನಸೇನಾನಿ ಪವನ್ ಕಲ್ಯಾಣ್ ಕೂಡಲೇ ಹೈದರಾಬಾದ್‌ಗೆ ತೆರಳಿದ್ದಾರೆ. ಇಂದು ನಡೆಯಬೇಕಿದ್ದ ಉತ್ತರಾಂಧ್ರ ಪ್ರವಾಸವನ್ನು ಕೂಡಾ ಮುಂದೂಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪವನ್ ಕಲ್ಯಾಣ್, ಚೇತರಿಸಿಕೊಂಡ ನಂತರ ಚುನಾವಣಾ ಪ್ರಚಾರ ಪ್ರವಾಸ ಕೈಗೊಳ್ಳಲಿದ್ದಾರೆ..
ಇದನ್ನೂ ಓದಿ; ಪಾದ ನೋಡಿ ಮೈಯಲ್ಲಿರುವ ರೋಗ ಕಂಡು ಹಿಡಿಯಬಹುದು!
ಪಿಂಚಣಿ ಕೊಡದಿರುವುದಕ್ಕೆ ಪವನ್ ಆಕ್ರೋಶ;
ಇನ್ನು ಪ್ರಚಾರದ ವೇಳೆ ಪವನ್ ಕಲ್ಯಾಣ್ ಅವರು ಜಗನ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ಅವರ ಮನೆಯಲ್ಲಿ ಪಿಂಚಣಿ ನೀಡಲು ಏನು ತೊಂದರೆ ಎಂದು ಪ್ರಶ್ನೆ ಮಾಡಿದ್ದಾರೆ..ತಹಸೀಲ್ದಾರ್ ಫೋನ್ ನಂಬರ್ ಕೊಡ್ತಾರೆ. ಕರೋನಾ ಅವಧಿಯಲ್ಲಿ ಮದ್ಯದಂಗಡಿಗಳಲ್ಲಿ ಸರ್ಕಾರಿ ನೌಕರರಿಗೆ ಕರ್ತವ್ಯ ನೀಡುವ ಗೌರವ ಸರ್ಕಾರಕ್ಕಿದೆ.. ಪಿಂಚಣಿ ನೀಡಲು ನೌಕರರಿಲ್ಲವೇ? ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದಾರೆ..
ಗ್ರಾಮ ವಾರ್ಡ್ ಸೆಕ್ರೆಟರಿಯೇಟ್ ನೌಕರರು ಮತ್ತು ಗ್ರಾಮ ಕಂದಾಯ ಯಂತ್ರೋಪಕರಣಗಳ ಸಹಾಯದಿಂದ ಮನೆಮನೆಗೆ ಪಿಂಚಣಿ ನೀಡಲು ಸಾಧ್ಯ ಎಂದು ಅವರು ಹೇಳಿದರು. ಭೀಮ್ಲಾ ನಾಯಕ್ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ, ಅವರು ಫೆಬ್ರವರಿ 24, 2022 ರಂದು ಸರ್ಕಾರ ಒದಗಿಸಿದ ಬಯೋವನ್ನು ಟ್ವೀಟ್‌ಗೆ ಲಗತ್ತಿಸಿದ್ದಾರೆ. ವಯೋವೃದ್ಧರು ಹಾಗೂ ಅಂಗವಿಕಲರು ಪಿಂಚಣಿ ಪಡೆಯಬೇಕಾದವರಿಗೆ ಜನಸೇನಾ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗಿರಬೇಕು ಎಂದು ಪವನ್ ಸೂಚಿಸಿದರು. ಫಲಾನುಭವಿಗಳನ್ನು ಅವರವರ ಸ್ವಂತ ವಾಹನದಲ್ಲಿ ಕಚೇರಿಗಳಿಗೆ ಕರೆದೊಯ್ದು ಪಿಂಚಣಿ ಕೊಡಿಸಿ ನಂತರ ಅವರ ಮನೆಗಳಿಗೆ ಡ್ರಾಪ್ ಮಾಡಿ ಎಂದು ಕರೆ ನೀಡಿದ್ದಾರೆ. ಟಿಡಿಪಿ, ಬಿಜೆಪಿ, ಜನಸೇನಾ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕೂಡ ಇದರಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?