ಸಾಲಬಾಧೆ ತಾಳಲಾದರೆ ರೈತ ಆತ್ಮಹತ್ಯೆಗೆ ಶರಣು
ತುಮಕೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬೆಂಡೊಣಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ರೈತ ಸಿದ್ದರಾಜು(45) ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೈತ ಸಿದ್ದರಾಜು ಕೆನರಾ ಬ್ಯಾಂಕ್ ನಲ್ಲಿ 5 ಲಕ್ಷ ಸಾಲ ಕಟ್ಟಲಾಗದೆ ಬಡ್ಡಿ ಹೆಚ್ಚಾಗಿತ್ತು, ಸೊಸೈಟಿ ಸಾಲ, ಮೈಕ್ರೋ ಫೈನಾನ್ಸ್ ನಲ್ಲಿ ಸಾಲ, ಕೈ ಸಾಲಗಳು ಸೇರಿದಂತೆ ಇನ್ನಿತರೆ 10 ಲಕ್ಷ ಸಾಲ ಮಾಡಿಕೊಂಡು ತೀರಿಸಲಾಗದೆ ಮನನೊಂದಿದ್ದರು ಎನ್ನಲಾಗಿದೆ.
ಒಂದೆಡೆ ಬ್ಯಾಂಕ್ ನ ಸಾಲದ ಬಡ್ಡಿ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಕೈ ಸಾಲಗಾರರ ಕಾಟ, ಮೈಕ್ರೋ ಫೈನಾನ್ಸ್ ಗಳ ಒತ್ತಡ ಇದರಿಂದ ಬೇಸತ್ತು ಸಿದ್ದರಾಜು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.