5 ವರ್ಷದ ನಂತ್ರ ತೆರೆಯಿತು ಸಿಎಂ ಕಚೇರಿ ಪಶ್ಚಿಮ ದ್ವಾರ; ಗಾಳಿ-ಬೆಳಕೇ ಉತ್ತಮ ವಾಸ್ತು ಎಂದ ಸಿದ್ದರಾಮಯ್ಯ
ಬೆಂಗಳೂರು; ವಾಸ್ತು ಸರಿ ಇಲ್ಲ ಎಂದು ಕಳೆದ ಐದು ವರ್ಷಗಳಿಂದ ಮುಖ್ಯಮಂತ್ರಿ ಕಚೇರಿಯ ಪಶ್ಚಿಮ ದ್ವಾರ ತೆರೆದಿರಲಿಲ್ಲ. ಆದ್ರೆ ಇಂದು ಸಿಎಂ ಸಿದ್ದರಾಮಯ್ಯ ಅದನ್ನು ತೆರೆಸಿದ್ದಾರೆ. ಈ ಮೂಲಕ ಮೂಢನಂಬಿಕೆ ತಿಲಾಂಜಲಿ ಹಾಡಿದ್ದಾರೆ. ಅದೂ ಕೂಡಾ ಪಶ್ಚಿಮ ದ್ವಾರದ ಬೀಗ ತೆರೆಸಿಯೇ ಒಳ ನಡೆದಿದ್ದಾರೆ.
ಅನ್ನಭಾಗ್ಯ ಯೋಜನೆ ಸಂಬಂಧ ಸಿಎಂ ಸಿದ್ದರಾಮಯ್ಯ ಇಂದು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ತಮ್ಮ ಕಚೇರಿಯ ಪ್ರಶ್ವಿಮ ದ್ವಾರ ಮುಚ್ಚಿರುವುದನ್ನು ನೋಡಿದ್ದಾರೆ. ಯಾಕೆ ಇದನ್ನು ತೆಗೆದಿಲ್ಲ ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ವಾಸ್ತು ಸರಿಯಿಲ್ಲ ಅಂತ ಐದು ವರ್ಷಗಳಿಂದ ಅದನ್ನು ತೆಗೆಯುತ್ತಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಸಿದ್ದರಾಮಯ್ಯ ಅವರು ಅದೇ ದ್ವಾರದ ಬಳಿಯೇ ನಿಂತಿದ್ದಾರೆ. ಆಗ ಅಧಿಕಾರಿಗಳು ದಕ್ಷಿಣ ದ್ವಾರದಿಂದ ಒಳಗೆ ಹೋಗಿ ಪಶ್ಚಿಮ ಒಳಗೆ ಹೋಗಿ ಪಶ್ಚಿಮ ದ್ವಾರವನ್ನು ತೆಗೆದಿದ್ದಾರೆ. ಆಗ ಸಿಎಂ ಸಿದ್ದರಾಮ್ಯಯ್ಯ ಅವರು ಪಶ್ಚಿಮ ದ್ವಾರದಿಂದಲೇ ಒಳ ನಡೆದಿದ್ದಾರೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಕೂಡಾ ಮಾಡಿದ್ದಾರೆ.
ಜನರ ಬಗ್ಗೆ ಕಾಳಜಿ, ನಡತೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ. ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ, ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ. ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ. ನಡೆ – ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ. ಜನತೆಯ ಆಶೀರ್ವಾದ ಇರಲಿ
ಹೀಗಂತ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.