Politics

Dr.C.N.Mnajunath; ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌?

ಬೆಂಗಳೂರು; ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ಕುತೂಹಲ ಇತ್ತು. ಆದ್ರೆ ನಿನ್ನೆ ದೇವೇಗೌಡರ ಮನೆಯಲ್ಲಿ ನಡೆದ ಸಭೆಯ ನಂತರ ಕುಮಾರಸ್ವಾಮಿ ಸ್ಪರ್ಧೆ ಮಾಡೋದು ಬಹುತೇಕ ಖಚಿತವಾಗಿದೆ. ಈಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಅನ್ನೋದರ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ ಈ ಕ್ಷೇತ್ರದಲ್ಲೂ ಡಿ.ಕೆ.ಸುರೇಶ್‌ ವಿರುದ್ಧದ ಅಭ್ಯರ್ಥಿ ಫೈನಲ್‌ ಆಗಿದೆ ಎನ್ನಲಾಗುತ್ತಿದೆ. ದೇವೇಗೌಡರ ಅಳಿಯ, ಖ್ಯಾತ ವೈದ್ಯ ಡಾ.ಸಿ.ಎನ್‌.ಮಂಜುನಾಥ್‌ ಅವರನ್ನು ಕಣಕ್ಕಿಳಿಸೋದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; Valentines Day; ಪ್ರೇಮಿಗಳ ದಿನದ ಹಿಂದೆ ಇಷ್ಟೊಂದು ಕತೆ ಇದೆಯಾ?

ಬಿಜೆಪಿ ಅಭ್ಯರ್ಥಿಯಾಗಿ ಡಾ.ಮಂಜುನಾಥ್‌ ಕಣಕ್ಕೆ..?;

ಬಿಜೆಪಿ ಅಭ್ಯರ್ಥಿಯಾಗಿ ಡಾ.ಮಂಜುನಾಥ್‌ ಕಣಕ್ಕೆ..?; ಡಾ.ಸಿ.ಎನ್‌.ಮಂಜುನಾಥ್‌ ಅವರು ದೇವೇಗೌಡರ ಅಳಿಯ. ಅವರನ್ನು ಜೆಡಿಎಸ್‌ ಪಕ್ಷದಿಂದಲೇ ಕಣಕ್ಕಿಳಿಸೋಕೆ ಪ್ರಯತ್ನಗಳಾಗಿದ್ದವು. ಈ ನಡುವೆ ಬಿಜೆಪಿ ನಾಯಕರೇ ಮಂಜುನಾಥ್‌ ಅವರನ್ನು ನಮ್ಮ ಪಕ್ಷಕ್ಕೆ ಕೊಡಿ ನಾವೇ ಅವರಿಗೆ ಒಂದು ಕ್ಷೇತ್ರ ಬಿಟ್ಟುಕೊಡುತ್ತೇವೆ ಎಂದು ಹೇಳಿದ್ದಾರೆ. ಅದೂ ಕೂಡಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಂಜುನಾಥ್‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸೋದಕ್ಕೆ ಎಲ್ಲಾ ಸಿದ್ಧತೆಗಳೂ ನಡೆದಿವೆ. ದೇವೇಗೌಡರ ಮನೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಮಂಜುನಾಥ್‌ ಅವರೂ ಸ್ಪರ್ಧೆಗೆ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; Valentine’s Day Special; ಯಾವ ಸಿನಿಮಾಗೂ ಕಡಿಮೆ ಇಲ್ಲದ ಮುಖೇಶ್-ನೀತಾ ಅಂಬಾನಿ ಲವ್‌ ಸ್ಟೋರಿ!

ಏನಿದು ಜೆಡಿಎಸ್‌-ಬಿಜೆಪಿ ಲೆಕ್ಕಾಚಾರ?;

ಏನಿದು ಜೆಡಿಎಸ್‌-ಬಿಜೆಪಿ ಲೆಕ್ಕಾಚಾರ?; ಒಕ್ಕಲಿಗ ಸಮುದಾಯದ ಡಾ.ಸಿ.ಎನ್. ಮಂಜುನಾಥ್ ದೇವೇಗೌಡರ ಅಳಿಯರಾಗಿರುವುದರಿಂದ ಈ ಭಾಗದ ಒಕ್ಕಲಿಗರು ಮಂಜುನಾಥ್‌ಗೆ ಅವರಿಗೆ ಬೆಂಬಲವಾಗಿ ನಿಲುತ್ತಾರೆ. ಜೊತೆಗೆ ಅವರು ವೈದ್ಯಕೀಯ ಲೋಕದಲ್ಲಿ ಒಳ್ಳೇ ಹೆಸರಿದೆ, ಜನರಿಗೂ ಚಿರಪರಿಚಿತರಾಗಿದ್ದಾರೆ. ಇದನ್ನು ಬಳಸಿಕೊಂಡು ಗೆಲ್ಲೋದಕ್ಕೆ ಸುಲಭವಾಗುತ್ತದೆ. ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದರೆ ಕುಟುಂಬ ರಾಜಕಾರಣ ಎಂಬ ಆರೋಪ ಬರುತ್ತದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಎಲ್ಲಾ ರೀತಿಯಿಂದಲೂ ಅನುಕೂಲ ಎಂಬ ಲೆಕ್ಕಾಚಾರ ಇದೆ. ಜೆಡಿಎಸ್‌ಗೆ ಮೂರರಿಂದ ನಾಲ್ಕು ಕ್ಷೇತ್ರ ಬಿಟ್ಟುಕೊಡಲಾಗುತ್ತದೆ. ಇದರ ಜತೆಗೆ ಮಂಜುನಾಥ್‌ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆದ್ದರೂ ಯಾವತ್ತಿದ್ದರೂ ಜೆಡಿಎಸ್‌ಗೆ ಬರಲಿದ್ದಾರೆ. ಹೀಗಾಗಿ ಒಟ್ಟು ಐದು ಕ್ಷೇತ್ರ ಜೆಡಿಎಸ್‌ಗೆ ಸಿಕ್ಕಂತಾಗುತ್ತದೆ. ಜೊತೆಗೆ ಮಂಜುನಾಥ್‌ ಅವರಾದರೆ ಸಿ,ಪಿ.ಯೋಗೇಶ್ವರ್‌ ಅವರ ಬೆಂಬಲವೂ ಸಿಗಲಿದೆ.

ಇದನ್ನೂ ಓದಿ; INFI NarayanaMurthy and Akshatha; ತಂದೆಯ ಜೊತೆ ಐಸ್‌ಕ್ರೀಂ ತಿಂದ ಇಂಗ್ಲೆಂಡ್‌ ಪ್ರಧಾನಿ ಪತ್ನಿ

ಡಾ.ಮಂಜುನಾಥ್‌ ಸ್ಪರ್ಧೆ ಬಗ್ಗೆ ಮೊದಲೇ ಸುದ್ದಿ ಮಾಡಿದ್ದ ನ್ಯೂಸ್‌ ಎಕ್ಸ್‌ ಕನ್ನಡ!;

ಡಾ.ಮಂಜುನಾಥ್‌ ಸ್ಪರ್ಧೆ ಬಗ್ಗೆ ಮೊದಲೇ ಸುದ್ದಿ ಮಾಡಿದ್ದ ನ್ಯೂಸ್‌ ಎಕ್ಸ್‌ ಕನ್ನಡ!; ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್‌.ಮಂಜುನಾಥ್‌ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆಂದು ಈ ಹಿಂದೆಯೇ ನ್ಯೂಸ್‌ ಎಕ್ಸ್‌ ಕನ್ನಡದಲ್ಲಿ ಸುದ್ದಿ ಮಾಡಲಾಗಿತ್ತು. ಈ ಸುದ್ದಿಯ ಡಿಟೇಲ್ಸ್‌ ಇಲ್ಲಿದೆ.

ಫೆಬ್ರವರಿ 4ರಂದು ನ್ಯೂಸ್‌ ಎಕ್ಸ್‌ ಕನ್ನಡದಲ್ಲಿ ಪ್ರಕಟವಾಗಿದ್ದ ಸುದ್ದಿ ಹೀಗಿದೆ..?
ಬೆಂಗಳೂರು; ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಡಿ.ಕೆ.ಸುರೇಶ್‌ ಹಾಲಿ ಸಂಸದರಿದ್ದಾರೆ. ಕರ್ನಾಟಕದಲ್ಲಿ ಇದೊಂದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿರೋದು. ಬಜೆಟ್‌ ಅಧಿವೇಶನದ ನಂತರ ಪ್ರತ್ಯೇಕ ದಕ್ಷಿಣ ಭಾರತದ ಕೂಗೆಬ್ಬಿಸಿದ್ದ ಡಿ.ಕೆ.ಸುರೇಶ್‌ ಈಗ ದೇಶಾದ್ಯಂತ ಸುದ್ದಿಯಾಗುತ್ತಿದ್ದಾರೆ. ಈ ನಡುವೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ ಅವರನ್ನು ಸೋಲಿಸೋದಕ್ಕೆ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಮೆಗಾ ಪ್ಲ್ಯಾನ್‌ ಮಾಡಿವೆ.

ಇದನ್ನೂ ಓದಿ; Roof Top Solar Scheme; ಹೇಗೆ ಅಪ್ಲೈ ಮಾಡೋದು, ಸ್ಟೆಪ್‌ ಬೈ ಸ್ಟೆಪ್‌ ಮಾಹಿತಿ!

ಡಾ.ಸಿ.ಎನ್‌.ಮಂಜುನಾಥ್‌ ಅವರನ್ನು ಕಣಕ್ಕಿಳಿಸಲು ಪ್ರಯತ್ನ

ಜಯದೇವದಿಂದ ಡಾ.ಸಿ.ಎನ್‌.ಮಂಜುನಾಥ್‌ ಅವರು ಇತ್ತೀಚೆಗಷ್ಟೇ ನಿವೃತ್ತಿಯಾಗಿದ್ದಾರೆ. ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ದೇವೇಗೌಡರ ಅಳಿಯನಾಗಿರುವ ಮಂಜುನಾಥ್‌ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಜೆಡಿಎಸ್‌ ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಜೆಡಿಎಸ್‌ ಮಿತ್ರಪಕ್ಷ ಬಿಜೆಪಿ ನಾಯಕರು ನಮ್ಮ ಪಕ್ಷದಿಂದಲೇ ಮಂಜುನಾತ್‌ ಅವರನ್ನು ಕಣಕ್ಕಳಿಸುತ್ತೇವೆ ಎಂದು ಹೇಳುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಿ.ಎನ್‌.ಮಂಜುನಾಥ್‌ ಅವರನ್ನು ಕಣಕ್ಕಿಳಿಸಿ ಡಿ.ಕೆ.ಸುರೇಶ್‌ ಅವರಿಗೆ ಸೋಲಿಣಿಸೋಕೆ ರಣತಂತ್ರ ರೂಪಿಸಲಾಗುತ್ತಿದೆ. ಆದ್ರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದಕ್ಕೆ ಮಂಜುನಾಥ್‌ ಅವರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; Valentines day Special; ಪ್ರೀತಿಯಲ್ಲಿ ಮಿಂದೆದ್ದ ಕನ್ನಡ ಸೆಲೆಬ್ರಿಟಿಗಳಿವರು!

ಶೀಘ್ರದಲ್ಲೇ ರಾಜ್ಯಕ್ಕೆ ಬರಲಿರುವ ಅಮಿತ್‌ ಶಾ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶೀಘ್ರದಲ್ಲೇ ಬೆಂಗಳೂರಿಗೆ ಬರುತ್ತಿದ್ದಾರೆ. ಈ ವೇಳೆ ಅಮಿತ್‌ ಶಾ ಅವರೇ ಡಾ.ಮಂಜುನಾಥ್‌ ಅವರ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿಯೇ ಮಂಜುನಾತ್‌ ಅವರನ್ನು ಕಣಕ್ಕಿಳಿಸಿ ಜೆಡಿಎಸ್‌ ಬೆಂಬಲ ಪಡೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗುತ್ತಿದೆ ಎನ್ನಲಾಗಿದೆ.

ಸೇಡು ತೀರಿಸಿಕೊಳ್ಳಲು ಹೆಚ್ಡಿಕೆ ಪ್ರಯತ್ನ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿಯವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಲಾಗಿತ್ತು. ಆದ್ರೆ ನಿಖಿಲ್‌ ಕುಮಾರಸ್ವಾಮಿ ಹೀನಾಯವಾಗಿ ಸೋತಿದ್ದರು. ಇದಕ್ಕೆ ಕಾರಣ ಡಿಕೆ ಬ್ರದರ್ಸ್‌. ಹೀಗಾಗಿ ಹೇಗಾದರೂ ಮಾಡಿ ಈ ಬಾರಿ ಡಿ.ಕೆ.ಸುರೇಶಗೆ ಸೋಲುಣಿಸಬೇಕು ಎಂದು ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಡಾ.ಮಂಜುನಾಥ್‌ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Share Post