EconomyNational

Roof Top Solar Scheme; ಹೇಗೆ ಅಪ್ಲೈ ಮಾಡೋದು, ಸ್ಟೆಪ್‌ ಬೈ ಸ್ಟೆಪ್‌ ಮಾಹಿತಿ!

Roof Top Solar Scheme (ಮೇಲ್ಛಾವಣಿ ಸೌರ ಯೋಜನೆ): ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಯೊಂದನ್ನು ಘೋಷಿಸಿದ್ದರು. ಅದರ ಹೆಸರು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ. ಇದರಡಿ ಉಚಿತ ಕರೆಂಟ್ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ರೂಫ್‌ಟಾಪ್ ಸೌರೀಕರಣ ಯೋಜನೆ ಎಂದು ಘೋಷಣೆ ಮಾಡಿದರು. ಕೋಟ್ಯಾಂತರ ಮನೆಗಳಿಗೆ ಸೋಲಾರ್ ಪ್ಯಾನಲ್ ಅಳವಡಿಕೆಗೆ ಉತ್ತೇಜನ ನೀಡಲು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಫೆಬ್ರವರಿ 13 ರಂದು ಮೋದಿ ಅವರು ಯೋಜನೆಯ ಹೆಸರನ್ನು ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ ಎಂದು ಬದಲಾಯಿಸಲಾಗಿದೆ.ಮಂಗಳವಾರ ಮೋದಿಯವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಹಾಗಾದರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಅಂತ ನೋಡೋಣ.

ಇದನ್ನೂ ಓದಿ; Valentines day Special; ಪ್ರೀತಿಯಲ್ಲಿ ಮಿಂದೆದ್ದ ಕನ್ನಡ ಸೆಲೆಬ್ರಿಟಿಗಳಿವರು!

ಈ ಯೋಜೆನೆಗೆ ಅರ್ಜಿ ಸಲ್ಲಿಸುವುದು ಹೇಗೆ..?

ಸೌರ ವಿದ್ಯುತ್ ಬಳಕೆಯನ್ನು ವಿಸ್ತರಿಸುವುದು ಮತ್ತು ಸಾಮಾನ್ಯ ಮಧ್ಯಮ ವರ್ಗದ ಜನರ ಮೇಲಿನ ವಿದ್ಯುತ್ ಶುಲ್ಕದ ಹೊರೆಯನ್ನು ಕಡಿಮೆ ಮಾಡುವುದು ಈ ಹೊಸ ಯೋಜನೆಯ ಉದ್ದೇಶ. ಈ ಯೋಜನೆಗೆ ರೂ. 75 ಸಾವಿರ ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ದೇಶಾದ್ಯಂತ ಕೋಟಿ ಮನೆಗಳಿಗೆ 300 ಯೂನಿಟ್‌ವರೆಗೆ ಉಚಿತ ಕರೆಂಟ್ ನೀಡಲಾಗುವುದು ಎಂದೂ ಹೇಳಲಾಗಿದೆ. ಈ ಯೋಜನೆಗೆ ಅರ್ಜಿಯನ್ನು pmsuryaghar.gov.in ವೆಬ್‌ಸೈಟ್‌ನಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

ಇದನ್ನೂ ಓದಿ; Valentaines Day; ಪ್ರೇಮಿಗಳ ದಿನದ ಹಿಂದೆ ಇಷ್ಟೊಂದು ಕತೆ ಇದೆಯಾ?

ಸ್ಟೆಪ್‌ ಬೈ ಸ್ಟೆಪ್‌ ಮಾಹಿತಿ;
೧.ಮೊದಲು ನೀವು ನಿಮ್ಮ ಹೆಸರನ್ನು pmsuryaghar.gov.in ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ನೀವು ನಿಮ್ಮ ರಾಜ್ಯದ ಹೆಸರು ಮತ್ತು ವಿದ್ಯುತ್ ಸರಬರಾಜು ಕಂಪನಿಯ ಹೆಸರನ್ನು ಆಯ್ಕೆ ಮಾಡಬೇಕಾಗುತ್ತದೆ. ವಿದ್ಯುತ್ ಸಂಪರ್ಕದ ಗ್ರಾಹಕರ ಸಂಖ್ಯೆ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ನಮೂದಿಸಬೇಕು. ಪೋರ್ಟಲ್ ನಿಯಮಗಳ ಪ್ರಕಾರ ನೋಂದಣಿಯನ್ನು ಪೂರ್ಣಗೊಳಿಸಬೇಕು.

೨. ಮುಂದಿನ ಹಂತದಲ್ಲಿ ಬಳಕೆದಾರರ ಸಂಖ್ಯೆ, ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ. ಅಲ್ಲಿ ನೀವು ಮೇಲ್ಛಾವಣಿ ಸೌರಕ್ಕಾಗಿ ಅರ್ಜಿ ಸಲ್ಲಿಸಬೇಕು. ಅಪ್ಲಿಕೇಶನ್ ಅನ್ನು ಪೂರ್ಣಗೊಳಿಸಿ ಮತ್ತು ಡಿಸ್ಕಮ್ ಅನುಮೋದನೆಗಳಿಗಾಗಿ ಕಾಯಬೇಕು. ಅನುಮತಿಯನ್ನು ಪಡೆದ ನಂತರ, ನಿಮ್ಮ ಡಿಸ್ಕಮ್‌ನ ನೋಂದಾಯಿತ ಮಾರಾಟಗಾರರಿಂದ ಸೌರ ಸ್ಥಾವರವನ್ನು ಸ್ಥಾಪಿಸಬೇಕು. ಅನುಸ್ಥಾಪನೆಯು ಪೂರ್ಣಗೊಂಡ ನಂತರ, ಅದರ ವಿವರಗಳನ್ನು ಪೋರ್ಟಲ್‌ನಲ್ಲಿ ಸಲ್ಲಿಸಬೇಕು ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ;Valentine’s Day Special; ಯಾವ ಸಿನಿಮಾಗೂ ಕಡಿಮೆ ಇಲ್ಲದ ಮುಖೇಶ್-ನೀತಾ ಅಂಬಾನಿ ಲವ್‌ ಸ್ಟೋರಿ!

ನೆಟ್ ಮೀಟರ್ ಅಳವಡಿಸಿದ ನಂತರ, ವಿದ್ಯುತ್‌ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ನಂತರ ಪೋರ್ಟಲ್‌ನಿಂದ ಆಯೋಗದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ವರದಿಯನ್ನು ಪಡೆದ ನಂತರ, ನೀವು ರದ್ದುಪಡಿಸಿದ ಚೆಕ್ ಅನ್ನು ನಿಮ್ಮ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಪೋರ್ಟಲ್‌ನಲ್ಲಿ ಸಲ್ಲಿಸಿದರೆ, ಸಬ್ಸಿಡಿಯನ್ನು 30 ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

Share Post