BengaluruTechnology

Driverless Metro Train; ಬಂದೇ ಬಿಡ್ತು ಚಾಲಕ ರಹಿತ ಮೆಟ್ರೋ ರೈಲು; ಏನಿದರ ವಿಶೇಷತೆ..?

ಬೆಂಗಳೂರು; ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಮಾರ್ಗಗಳ ವಿಸ್ತರಣೆ ಕೂಡಾ ಆಗುತ್ತಿದೆ. ಲಕ್ಷಾಂತರ ಜನಕ್ಕೆ ನಮ್ಮ ಮೆಟ್ರೋದಿಂದ ಅನುಕೂಲ ಆಗಿದೆ. ಹೀಗಾಗಿರುವಾಗಲೇ ನಮ್ಮ ಮೆಟ್ರೋ ಸಾಕಷ್ಟು ಅಪ್‌ ಗ್ರೇಡ್‌ ಆಗುತ್ತಿದೆ. ಶೀಘ್ರದಲ್ಲೇ ನಮ್ಮ ಮೆಟ್ರೋ ಹಳಿಗಳಿಗೆ ಚಾಲಕ ರಹಿತ ಮೆಟ್ರೋ ರೈಲು ಕಾರ್ಯಾಚರಣೆ ಮಾಡಲಾಗಿದೆ. ಈಗಾಗಲೇ ಚೀನಾದಿಂದ ಬೆಂಗಳೂರಿಗೆ ಚಾಲಕರಹಿತ  ಮೆಟ್ರೋ ರೈಲೊಂದರ ಆಗಮನವಾಗಿದೆ. ಅದನ್ನು ಜೋಡಿಸಿ, ಹಳಿಗೆ ಬಿಡುವುದೊಂದೇ ಬಾಕಿ ಇದೆ.. 

ಇದನ್ನೂ ಓದಿ; INFI NarayanaMurthy and Akshatha; ತಂದೆಯ ಜೊತೆ ಐಸ್‌ಕ್ರೀಂ ತಿಂದ ಇಂಗ್ಲೆಂಡ್‌ ಪ್ರಧಾನಿ ಪತ್ನಿ

ಹೆಬ್ಬಗೋಡಿ ಡಿಪೋಗೆ ಬಂದ ಚಾಲಕ ರಹಿತ ರೈಲು!;

ಹೆಬ್ಬಗೋಡಿ ಡಿಪೋಗೆ ಬಂದ ಚಾಲಕ ರಹಿತ ರೈಲು!; ಚೀನಾದಿಂದ ಹಡಗಿನ ಮೂಲಕ ಜನವರಿ 24ರಂದು ಭಾರತಕ್ಕೆ ಡ್ರೈವರ್‌ಲೆಸ್‌ ಮೆಟ್ರೋ ರೈಲೊಂದನ್ನು ಕಳುಹಿಸಲಾಗಿತ್ತು. ಅದು ಫೆಬ್ರವರಿ 6 ರಂದು ಚೆನ್ನೈ ಬಂದರಿಗೆ ಆಗಮಿಸಿತ್ತು. ಆರು ಬೋಗಿಗಳ ರೈಲು ಇದಾದಗಿದ್ದು, ಚೆನ್ನೈನಿಂದ 6 ಲಾರಿಗಳಲ್ಲಿ ಬೆಂಗಳೂರಿಗೆ ತರಲಾಗಿದೆ. ಇಂದು ಮುಂಜಾನೆ 3.30ಕ್ಕೆ ಹೆಬ್ಬಗೋಡಿ ಮೆಟ್ರೋ ಡಿಪೋದಲ್ಲಿ ಬೋಗಿಗಳನ್ನು ಇಳಿಸಲಾಗಿದೆ.

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗ;

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗ; ಇದು ಮೊದಲ ಚಾಲಕ ರಹಿತ ಮೆಟ್ರೋ ರೈಲಾಗಿದೆ. ಇನ್ನೊಂದು ಒಂದಷ್ಟು ರೈಲುಗಳಿಗೆ ಆರ್ಡರ್‌ ಮಡಲಾಗಿದ್ದು, ಶೀಘ್ರದಲ್ಲೇ ಅವರು ಬೆಂಗಳೂರಿಗೆ ಬರಲಿವೆ. ಈಗ ಬಂದಿರುವ ಆರು ಬೋಗಿಗಳ ಕೋಚ್‌ರನ್ನು ಜೋಡಿಸುವ ಕೆಲಸ ಇಂದಿನಿಂದ ನಡೆಯಲಿದೆ. ಜೋಡಣೆ ಬಳಿ ಹಳದಿ  ಮಾರ್ಗ ಅಂದರೆ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮಾರ್ಗದಲ್ಲಿ ಈ ಚಾಲಕ ರಹಿತ ರೈಲಿನ ಓಡಾಟ ನಡೆಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ನಾವು ಚಾಲಕ ರಹಿತ ಮೆಟ್ರೋ ರೈಲಿನಲ್ಲಿ ಓಡಾಟ ನಡೆಸಬಹುದಾಗಿದೆ.

ಇದನ್ನೂ ಓದಿ; Roof Top Solar Scheme; ಹೇಗೆ ಅಪ್ಲೈ ಮಾಡೋದು, ಸ್ಟೆಪ್‌ ಬೈ ಸ್ಟೆಪ್‌ ಮಾಹಿತಿ!

ಚೀನಾದ ಟಿಟಾಗರ್‌ ಘಟಕದಲ್ಲಿ ರೈಲುಗಳ ತಯಾರಿ;

ಚೀನಾದ ಟಿಟಾಗರ್‌ ಘಟಕದಲ್ಲಿ ರೈಲುಗಳ ತಯಾರಿ; ಶೀಘ್ರದಲ್ಲೇ ಜೋಡಣೆ ಮಾಡಿ, ಕೆಲವು ದಿನಗಳು ಟಸ್ಟ್‌ ರನ್‌ ಮಾಡಲಾಗುತ್ತದೆ. ರಾತ್ರಿ ವೇಳೆಯಲ್ಲಿ ನಿರಂತರವಾಗಿ ಟೆಸ್ಟ್‌ ರನ್‌ ಮಾಡಲಾಗುತ್ತದೆ. ಯಾವುದೇ ತೊಂದರೆಯಿಲ್ಲದೆ ಟೆಸ್ಟ್‌ ರನ್‌ ಯಶಸ್ವಿಯಾದರೆ, ನಂತರ ಪ್ರಯಾಣಿಕರ ಅನುಕೂಲಕ್ಕೆ ಬಳಕೆ ಮಾಡಲಾಗುತ್ತದೆ.

ಅಂದಹಾಗೆ ಟಿಟಾಗರ್‌ ವ್ಯಾಗನ್ಸ್‌ ಮೂಲಕ ಈ ಮಾರ್ಗಕ್ಕಾಗಿ 216 ಕೋಚ್‌ ಸಿದ್ದವಾಗಿದೆ. ಚೀನಾ ಟಿಟಾಗರ್‌ ಉತ್ಪಾದನ ಘಟ‌ಕದಲ್ಲಿ ಕೋಚ್ ತಯಾರು ಮಾಡಲಾಗಿದೆ. ಸುಮಾರು ಎರಡೂವರೆ ತಿಂಗಳುಗಳ ಕಾಲ ಟೆಸ್ಟ್‌ ನರ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಸುರಕ್ಷತಾ ಆಯುಕ್ತರು, ಇದನ್ನು ಪರಿಶೀಲನೆ ಅನುಮೋದನೆ ನೀಡಿದ ನಂತರವೇ ಸಾರ್ವಜನಿಕರ ಅನುಕೂಲಕ್ಕೆ ಲಭ್ಯವಾಗುತ್ತದೆ.

ಇದನ್ನೂ ಓದಿ; Valentines Day; ಪ್ರೇಮಿಗಳ ದಿನದ ಹಿಂದೆ ಇಷ್ಟೊಂದು ಕತೆ ಇದೆಯಾ?

ಚೀನಾ-ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್‌ ಕಂಪನಿ ಈ ಮೆಟ್ರೋ ಚಾಲಕ ರಹಿತ ರೈಲನ್ನು ತಯಾರಿಸುವ ಜವಾಬ್ದಾರಿ ಹೊತ್ತುಕೊಂಡಿದೆ.  ಮೊದಲಿಗೆ ಈ ಚಾಲಕ ರಹಿತ ಟ್ರೈನ್ ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ನಲ್ಲಿ ಸಂಚಾರ ಮಾಡಲಿದೆ. ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Share Post