Valentines day Special; ಪ್ರೀತಿಯಲ್ಲಿ ಮಿಂದೆದ್ದ ಕನ್ನಡ ಸೆಲೆಬ್ರಿಟಿಗಳಿವರು!
Valentines day Special; ಸಿನಿಮಾ ಅಂದ ಮೇಲೆ ಅದರ ಬಹುತೇಕ ಲವ್ ಸ್ಟೋರಿ ಇದ್ದೇ ಇರುತ್ತದೆ. ಯಾವುದೇ ಹೀರೋ ತಾನ ಮಾಡಿರುವ ಸಿನಿಮಾಗಳಲ್ಲಿ ಬಹುತೇಕ ಸಿನಿಮಾಗಳಲ್ಲಿ ಪ್ರೀತಿ ಇದ್ದೇ ಇರುತ್ತದೆ.. ಹಾಗೆ ರೀಲ್‌ನಲ್ಲಿ ಪ್ರೀತಿ ಮಾಡಿದವರು, ನಿಜ ಜೀವನದಲ್ಲೂ ಪ್ರೀತಿ ಮಾಡಿ ಮದುವೆಯಾದ ಸಿನಿಮಾ ಮಂದಿ ಸಾಕಷ್ಟು ಜನ ಇದ್ದಾರೆ. ಸಿನಿಮಾ ರಂಗದಲ್ಲೇ ಇರುವವರನ್ನೇ ಕೆಲವರು ಪ್ರೀತಿ ಮಾಡಿ ಮದುವೆಯಾದರೆ, ಇನ್ನು ಕೆಲವರು ಸಿನಿಮಾ ಹೊರಗಿನ ಮಂದಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಪ್ರೇಮಿಗಳ ದಿನದ ಪ್ರಯುಕ್ತ ಇಂತಹ ಕೆಲವರ ಸ್ಟೋರಿಯನ್ನು ಇಲ್ಲಿ ಹೇಳಿದ್ದೇವೆ.
ಇದನ್ನೂ ಓದಿ; Valentaines Day; ಪ್ರೇಮಿಗಳ ದಿನದ ಹಿಂದೆ ಇಷ್ಟೊಂದು ಕತೆ ಇದೆಯಾ?
ವಿಜಯ್ ರಾಘವೇಂದ್ರ-ಸ್ಪಂದನಾ;
ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಅವರು ಸ್ಪಂದನಾ ಅವರನ್ನು ಕಾಫಿ ಡೇ ಒಂದರಲ್ಲಿ ನೋಡುತ್ತಾರೆ. ಮೊದಲ ಬಾರಿ ನೋಡಿದಾಗಲೇ ಸ್ಪಂದನಾಳ ಬಗ್ಗೆ ಪ್ರೀತಿ ಹುಟ್ಟುತ್ತದೆ. ಅನಂತರ ಹೋಟೆಲ್ ಒಂದರಲ್ಲೂ ಅಚಾನಕ್ಕಾಗಿ ಇಬ್ಬರು ಭೇಟಿಯಾಗುತ್ತದೆ. ಒಮ್ಮೆ ವಿಜಯ್ ರಾಘವೇಂದ್ರ ಪರಿಚಯ ಮಾಡಿಕೊಂಡು ಮಾತನಾಡುತ್ತಾರೆ. ಅನಂತರ ಇದು ಪ್ರೀತಿ ತಿರುಗುತ್ತದೆ. ಕೊನೆಗೆ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗುತ್ತದೆ. ಈ ಜೋಡಿ ಒಬ್ಬ ಮುದ್ದಾದ ಮಗನಿದ್ದಾನೆ. ದೃರದೃಷ್ಟವಶಾತ್, ಇತ್ತೀಚೆಗೆ ಸ್ಪಂದನಾ ಹೃದಯಾಘಾತಕ್ಕೆ ಬಲಿಯಾದರು.
ಪುನೀತ್ ರಾಜ್‌ಕುಮಾರ್-ಅಶ್ವಿನಿ;
ಸ್ಯಾಂಡಲ್‌ವುಡ್ ಸ್ಟಾರ್ ನಟರಾಗಿದ್ದ ಪುನೀತ್ ರಾಜ್ ಕುಮಾರ್ ಅವರು ಕೂಡಾ ಪ್ರೀತಿಸಿ ಮದುವೆಯಾದವರೇ.. ಅವರ ಕುಟುಂಬದ ಸಮಾರಂಭವೊಂದರಲ್ಲಿ ಅಶ್ವಿನಿಯವರನ್ನು ನೋಡಿ ಪುನೀತ್ ಮನಸೋಲುತ್ತಾರೆ.. ಸಂಬಂಧಿಗಳೇ ಆದ್ದರಿಂದ ಇವರ ಮದುವೆಗೆ ಎರಡೂ ಕಡೆಯಿಂದ ಒಪ್ಪಿಗೆ ಸಿಗುತ್ತದೆ. ಮದುವೆಯಾದ ಮೇಲೆ ಇಬ್ಬರು ಸಾಕಷ್ಟು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ. ಇತರರಿಗೆ ಮಾದರಿಯಾಗುತ್ತಾರೆ.. ಆದ್ರೆ ವಿಧಿ ಬರಹ ಬೇರೆಯದೇ ಬರೆದಿರುತ್ತದೆ.. ಪುನೀತ್ ರಾಜ್ ಕುಮಾರ್ ಎರಡು ವರ್ಷದ ಹಿಂದೆ ಹೃದಯಾಘಾತಕ್ಕೆ ಬಲಿಯಾಗುತ್ತಾರೆ. ಇಡೀ ಕರುನಾಡನ್ನು ದುಃಖದ ಮಡುವಿಗೆ ಜಾರುತ್ತದೆ.
ಇದನ್ನೂ ಓದಿ; Valentine’s Day Special; ಯಾವ ಸಿನಿಮಾಗೂ ಕಡಿಮೆ ಇಲ್ಲದ ಮುಖೇಶ್-ನೀತಾ ಅಂಬಾನಿ ಲವ್ ಸ್ಟೋರಿ!
ಯಶ್-ರಾಧಿಕಾ ಪಂಡಿತ್;
ಕೆಜಿಎಫ್ ಸಿನಿಮಾದ ಮೂಲಕ ದೊಡ್ಡ ಹೆಸರು ಮಾಡಿರುವ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರು ಕೂಡಾ ಪ್ರೀತಿಸಿ ಮದುವೆಯಾಗಿದ್ದು. ಇವರು ಕಿರುತೆರೆಯಲ್ಲಿ ಸೀರಿಯಲ್ ಮಾಡುವಾಗಲೇ ಇಬ್ಬರ ನಡುವೆ ಪ್ರೀತಿಯಾಗಿತ್ತು.. ಅನಂತರ ಮೊಗ್ಗಿನ ಮನಸು ಚಿತ್ರದಲ್ಲಿ ಇಬ್ಬರೂ ಬಣ್ಣ ಹಚ್ಚಿದ್ದರು. ಯೀಗರಾಜ್ ಭಟ್ ನಿರ್ದೇಶನದ ಈ ಚಿತ್ರ ಸಖತ್ ಹಿಟ್ ಆಗಿತ್ತು. ಇವರು 2016ರಲ್ಲಿ ಮದುವೆಯಾದರು. ಇವರಿಗೆ ಯಥರ್ವ್ ಹಾಗೂ ಆರ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಅಂಬರೀಷ್-ಸುಮಲತಾ:
ರೆಬೆಲ್ ಸ್ಟಾರ್ ಅಂಬರೀಷ್ ಅವರ ಪ್ರೇಮಕಥೆ ಕೂಡಾ ಎವರ್ ಗ್ರೀನ್.. 80ರ ದಶಕದಲ್ಲಿ ಇವರ ಪ್ರೇಮಕಥೆ ಶುರುವಾಗುತ್ತದೆ. ಆಗ ಇವರಿಬ್ಬರೂ ಟಾಪ್ ಹೀರೋ, ಹೀರೋಯಿನ್ ಆಗಿದ್ದರು. ಆಹುತಿ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇದಾದ ಮೇಲೆ ಅಂಬರೀಷ್‌ಗೆ ಸುಮಲತಾ ಅವರ ಮೇಲೆ ಲವ್ ಆಗುತ್ತದೆ. ಸಿನಿಮಾ ಸೆಟ್‌ನಲ್ಲಿ ಪರಿಚಯವಾದ ಸುಮಲತಾ ಮೇಲೆ ಮೋಹಗೊಂಡ ಅಂಬರೀಶ್, ಸುಮಲತಾ ಪ್ರಪೋಸ್ ಮಾಡುತ್ತಾರೆ. ಅನಂತರ ಇಬ್ಬರೂ ಒಪ್ಪಿ ಮದುವೆಯೂ ಆಗುತ್ತಾರೆ. ಸದ್ಯ ಅಂಬರೀಶ್ ನಮ್ಮ ಮುಂದೆ ಇಲ್ಲ. ಅಂಬರೀಶ್ ಅವರು ಪುತ್ರ ಅಭಿಷೇಕ್ ಕೂಡಾ ಪ್ರೀತಿ ಮಾಡಿಯೇ ಮದುವೆಯಾಗಿದ್ದಾರೆ.
ಐಂದ್ರಿತಾ ರೇ-ದಿಗಂತ್:
ಸ್ಯಾಂಡಲ್ವುಡ್ನ ಮತ್ತೊಂದು ಕ್ಯೂಟ್ ಜೋಡಿಗಳಲ್ಲಿ ದಿಗಂತ ಹಾಗೂ ಐಂದ್ರಿತಾ ರೇ ಜೋಡಿ ಕೂಡಾ ಒಂದು.. ಮನಸಾರೆ ಚಿತ್ರದಲ್ಲಿ ಐಂದ್ರಿತಾ ಹಾಗೂ ದಿಗಂತ್ ಒಟ್ಟಿಗೆ ನಟಿಸಿದ್ದರು. ಹಲವು ವರ್ಷಗಳಿಂದ ಇವರಿಬ್ಬರ ನಡುವೆ ಲವ್ ಇತ್ತು.. ಕೆಲ ವರ್ಷಗಳ ಹಿಂದೆ ಇಬ್ಬರೂ ಮದುವೆಯೂ ಆಗಿದ್ದಾರೆ. ಮನಸಾರೆ ಚಿತ್ರದ ಶೂಟಿಂಗ್ ವೇಳೆ ದಿಗಂತ್‌ಗೆ ಅನಾರೋಗ್ಯ ಕಾಡುತ್ತಿತ್ತು. ಈ ವೇಳೆ ಐಂದ್ರಿತಾ ಅವರು ಹಣ್ಣು ಕಳುಹಿಸಿದ್ದರಂತೆ. ಇದರಿಂದ ಪ್ರೀತಿ ಚಿಗುರಿತ್ತು. ಅದು ಮದುವೆವರೆಗೂ ಬಂದಿದೆ.
ಇದನ್ನೂ ಓದಿ; Ramcharan; ಬಾಲಿವುಡ್‌ಗೆ ಹಾರಲಿದ್ದಾರಂತೆ ಚಿರಂಜೀವಿ ಪುತ್ರ ರಾಮ್‌ಚರಣ್!
ಮೇಘನಾ ರಾಜ್- ಚಿರು ಸರ್ಜಾ;
ಚಿರಂಜೀವಿ ಸರ್ಜಾ ಅವರು ಕರೊನಾ ಸಮಯದಲ್ಲಿ ಹೃದತಘಾತಕ್ಕೆ ಬಲಿಯಾದರು. ‘ಪೈರಸಿ ಮುಕ್ತ ಕನ್ನಡ ಚಲನಚಿತ್ರ’ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಭೇಟಿಯಾಗುತ್ತಾರೆ. ಆಗಿನಿಂದ ಸ್ನೇಹ ಬೆಳೆಯುತ್ತದೆ. ಆ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಆಟಗಾರ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸುತ್ತಾರೆ. ಅನಂತರ ಇಬ್ಬರೂ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತಾರೆ. ಇವರಿಗೆ ಒಂದು ಮುದ್ದಾದ ಗಂಡು ಮಗು ಇದೆ.
ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್;
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಕೂಡಾ ಸಿನಿಮಾ ಮೂಲಕವೇ ಪರಿಚಯವಾದವರು.. ನಂತರ ಅವರಿಬ್ಬರ ನಡುವೆ ಪ್ರೇಮಾಂಕುರವಾಯಿತು… ‘ಲವ್ ಮಾಕ್ಟೇಲ್’ ಬಳಿಕ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಚಾರ್ಲಿ ಸಿನಿಮಾದ ಮೂಲಕ ಇಬ್ಬರು ಪರಿಚಯವಾಯಿತು.. ಅನಂತರ ಇದು ಪ್ರೀತಿಯಾಗಿ ಬದಲಾಯಿತು. ಇವರೂ ಕೂಡಾ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರು ಮಿಲನಾ ಅವರನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗಿ ಲವ್ ಪ್ರಪೋಸ್ ಮಾಡಿದ್ದರಂತೆ.
ಜಗ್ಗೇಶ್-ಪರಿಮಳ;
ಜಗ್ಗೇಶ್ ಹಾಗೂ ಪರಿಮಳ ಅವರು ಚಿತ್ರರಂಗಕ್ಕೆ ಬರುವ ಮುನ್ನವೇ ಪ್ರೀತಿಯಲ್ಲಿ ಬಿದ್ದಿದ್ದರು. ಪರಿಮಳ ಅವರು ಅಪ್ರಾಪ್ತರಾಗಿದ್ದರು. ಪರಿಮಳ ಅವರು ಶಾಲೆಗೆ ಹೋಗುವ ಸಮಯದಲ್ಲೇ ಜಗ್ಗೇಶ್ ಪರಿಮಳ ಅವರನ್ನು ಪ್ರೀತಿಸಿದ್ದರು. ಪರಿಮಳ ಅವರ ಒಪ್ಪಿಗೆಯೂ ಸಿಕ್ಕಿತ್ತು. ಅಪ್ರಾಪ್ತರಾಗಿದ್ದರೂ ಇಬ್ಬರೂ ಓಡಿಹೋಗಿ ಮದುವೆಯಾಗಿದ್ದರು. ಇದು ದೊಡ್ಡ ಕಾನೂನು ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕೊನೆಗೆ ಇವರಿಬ್ಬರ ಹೊಂದಾಣಿಕೆ ನೋಡಿ, ಅಪ್ರಾಪ್ತರಾಗಿದ್ದರು, ಕೋರ್ಟ್ ಇವರ ಮದುವೆಗೆ ಒಪ್ಪಿಗೆ ಸೂಚಿಸಿತ್ತು.
ಪ್ರಜ್ವಲ್ ದೇವರಾಜ್-ರಾಗಿಣಿ:
ಪ್ರಜ್ವಲ್ ದೇವರಾಜ್ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಖ್ಯಾತ ನಟ ದೇವರಾಜ್ ಅವರ ಮಗ. ಇವರು ನಟಿ ರಾಗಿಣಿಯವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. 9ನೇ ತರಗತಿಯಲ್ಲಿ ಓದುತ್ತಿರುವಾಗ ರಾಗಿಣಿ ಚಂದ್ರನ್ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಕಣ್ಣಿಗೆ ಬಿದ್ದರು. ಆಗ ರಾಗಿಣಿ ಚಂದ್ರನ್ 6ನೇ ತರಗತಿಯಲ್ಲಿ ಓದುತ್ತಿದ್ದರಂತೆ. ನಂತರ ಇಬ್ಬರೂ ಡ್ಯಾನ್ಸ್ ಕ್ಲಾಸ್ಗೆ ಒಟ್ಟಿಗೆ ಹೋಗುತ್ತಿದ್ದರು. ಹೀಗೆ ಶುರುವಾದ ಇವರ ಪ್ರೇಮ ಮದುವೆ ವರೆಗೂ ಬಂದಿತ್ತು. ಎರಡೂ ಮನೆಯವರು ಒಪ್ಪಿ ಇವರ ಇಬ್ಬರ ಮದುವೆ ಮಾಡಿದ್ದಾರೆ. ಇಬ್ಬರೂ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ.