Lifestyle

Valentines Day; ಪ್ರೇಮಿಗಳ ದಿನದ ಹಿಂದೆ ಇಷ್ಟೊಂದು ಕತೆ ಇದೆಯಾ?

ಫೆಬ್ರವರಿ 14 ಪ್ರೇಮಿಗಳಿಗೆ ಹಬ್ಬ. ಈ ದಿನ ಪ್ರೇಮಿಗಳ ದಿನವನ್ನಾಗಿ ಪ್ರೀತಿಯಿಂದ ಆಚರಿಸಲಾಗುತ್ತದೆ. ಅಷ್ಟಕ್ಕೂ ಪ್ರೇಮಿಗಳಿಗೆ ಈ ದಿನ ಏಕೆ ವಿಶೇಷ.. ಇದರ ಹಿಂದಿನ ಕಥೆ ಏನು..? ಪ್ರೇಮಿಗಳ ದಿನಾಚರಣೆ ಯಾವತ್ತಿನಿಂದ ಶುರುವಾಯ್ತು..? ಅದರ ವಿವರ ಇಲ್ಲಿದೆ..

ಫೆಬ್ರವರಿ ಬಂತೆಂದರೆ ಪ್ರೇಮಿಗಳಿಗೆ ಹಬ್ಬ. ವ್ಯಾಲೆಂಟೈನ್ಸ್ ವೀಕ್ ಮತ್ತು ವ್ಯಾಲೆಂಟೈನ್ಸ್ ಡೇ ಅನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಪ್ರತಿ ದಿನವನ್ನು ಪ್ರೇಮಿಗಳ ವಾರದಲ್ಲಿ ಒಂದು ದಿನವನ್ನಾಗಿ ಆಚರಿಸಲಾಗುತ್ತದೆ. ಈ ಪ್ರೇಮಿಗಳ ದಿನ ಆಚರಣೆ ಹಿಂದೆ ಹಲವು ಕತೆಗಳಿವೆ.

ಇದನ್ನೂ ಓದಿ; Valentine’s Day Special; ಯಾವ ಸಿನಿಮಾಗೂ ಕಡಿಮೆ ಇಲ್ಲದ ಮುಖೇಶ್-ನೀತಾ ಅಂಬಾನಿ ಲವ್‌ ಸ್ಟೋರಿ!

ಪ್ರೇಮಿಗಳ ದಿನ ಹೇಗೆ ಪ್ರಾರಂಭವಾಯಿತು?;

ಪ್ರೇಮಿಗಳ ದಿನ ಹೇಗೆ ಪ್ರಾರಂಭವಾಯಿತು?; ಸೇಂಟ್ ವ್ಯಾಲೆಂಟೈನ್ ಕ್ರಿ.ಶ. 3ನೇ ಶತಮಾನದ ರೋಮನ್ ಕ್ಯಾಥೋಲಿಕ್. ಅವರು ಫೆಬ್ರವರಿ 14, 270 AD ರಂದು ನಿಧನರಾದರು. ಅವರ ನೆನಪಿಗಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ.

ಗುಟ್ಟಾಗಿ ಮದುವೆಯಾದ ಸೈನಿಕ;

ಗುಟ್ಟಾಗಿ ಮದುವೆಯಾದ ಸೈನಿಕ; ಆಗಿನ ಕಾಲದಲ್ಲಿ ಸೈನಿಕರು ಮದುವೆಯಾಗುವಂತಿರಲಿಲ್ಲ. ಆದ್ರೆ ಕೆಲ ಸೈನಿಕರು ಚಕ್ರವರ್ತಿಗಳ ಆದೇಶವನ್ನು ಧಿಕ್ಕರಿಸಿ ರಹಸ್ಯವಾಗಿ ಮದುವೆಯಾಗುತ್ತಿದ್ದರು. ಆದ್ರೆ ಮದುವೆಯಾದರೆ, ಬದ್ಧತೆಯಿಂದ ಕೆಲ ಮಾಡೋದಿಲ್ಲ ಎಂಬ ಕಾರಣಕ್ಕೆ ಸೈನಿಕರು ಮದುವೆಯಾಗಬಾರದು ಎಂದು ಹೇಳಲಾಗಿತ್ತು. ಆದರೂ ಗುಟ್ಟಾಗಿ ಮದುವೆಯಾಗುತ್ತಿದ್ದರು.. ಈ ಹಿನ್ನೆಲೆಯಲ್ಲಿ ಪ್ರೇಮಿಗಳ ಹಬ್ಬ ಬಂತು ಎಂದೂ ಹೇಳಲಾಗುತ್ತದೆ. ಆದ್ರೆ ಇದಕ್ಕೆ ಫೆಬ್ರವರಿ 14 ಅನ್ನೇ ಯಾಕೆ ನಿಗದಿ ಮಾಡಿದರು ಅನ್ನೋದಕ್ಕೆ ಸಾಕ್ಷ್ಯ ಇಲ್ಲ.

ಇದನ್ನೂ ಓದಿ; qatar; ಕತಾರ್‌ನಲ್ಲಿ ಮರಣದಂಡನೆ; ಭಾರತೀಯರನ್ನು ಪಾರು ಮಾಡಿದ್ದು ಶಾರುಖ್ ಖಾನ್‌ ಅಂತೆ ಹೌದಾ..?

ವ್ಯಾಲೆಂಟೈನ್‌ ಶಿರಚ್ಛೇದ ಮಾಡಿದ ಚಕ್ರವರ್ತಿ;

ವ್ಯಾಲೆಂಟೈನ್‌ ಶಿರಚ್ಛೇದ ಮಾಡಿದ ಚಕ್ರವರ್ತಿ; ಹೀಗೆ ಯೋಧರು ಚಕ್ರವರ್ತಿಯ ಆದೇಶವನ್ನು ದಿಕ್ಕರಿಸಿ ಮದುವೆಯಾಗುತ್ತಿದ್ದರು. ಪ್ರೀತಿ ಮಾಡುತ್ತಿದ್ದರು. ಇದನ್ನು ತಿಳಿದ ಚಕ್ರವರ್ತಿ ಕ್ಲಾಡಿಯಸ್ ಗೋಥಿಕಸ್ ವ್ಯಾಲೆಂಟೈನ್‌ಗೆ ಮರಣದಂಡನೆ ವಿಧಿಸುತ್ತಾನೆ. ಅದೇ ದಿನವನ್ನು ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಎರಡು ದಶಕಗಳ ನಂತರ ಏನಾಯ್ತು..?;

ಎರಡು ದಶಕಗಳ ನಂತರ ಏನಾಯ್ತು..?; ಈ ಘಟನೆ ನಡೆದು ಎರಡು ದಶಕಗಳ ನಂತರ, ಆಗಿನ ಪೋಪ್ ಗಲಾಟಿಯನ್ಸ್ ವ್ಯಾಲೆಂಟೈನ್ಸ್ ಮರಣದ ದಿನವನ್ನು ಪ್ರೇಮಿಗಳ ದಿನವೆಂದು ಘೋಷಿಸಿದರು. ಅಂದಿನಿಂದ, ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನದಂದು ಪ್ರೇಮಿಗಳು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂತೋಷದಿಂದ ಕಳೆಯುತ್ತಾರೆ.

Share Post