Politics

ಮಹಿಳೆಯರ ಮೇಲೆ ವಿಶ್ವಾಸವಿಟ್ಟ ಕಾಂಗ್ರೆಸ್‌; ಮತ ʻಗ್ಯಾರೆಂಟಿʼನಾ..?

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಲು ಹರಸಾಹಸ ಮಾಡುತ್ತಿದೆ.. ಕಾಂಗ್ರೆಸ್‌ ಮೊದನಿಂದಲೂ ಮುಸ್ಲಿಂ, ಹಿಂದುಳಿದ ಹಾಗೂ ದಲಿತ ಮತಗಳನ್ನು ನಂಬಿಕೊಂಡು ರಾಜಕಾರಣ ನಡೆಸುತ್ತಾ ಬಂದಿದೆ.. ಆದ್ರೆ ಅದಕ್ಕಿಂತ ಹೆಚ್ಚಾಗಿ ಈ ಬಾರಿ ಕಾಂಗ್ರೆಸ್‌ ಪಕ್ಷ ಮಹಿಳಾಮಣಿಗಳ ಮೇಲೆ ವಿಶ್ವಾಸ ಇಟ್ಟಿದೆ.. ಗ್ಯಾರೆಂಟಿ ಯೋಜನೆಗಳು ಮಹಿಳೆಯರಿಗೆ ಹೆಚ್ಚು ತಲುಪುತ್ತಿದ್ದು, ಹೀಗಾಗಿ ಮಹಿಳೆಯರು ಹೆಚ್ಚಾಗಿ ಈ ಬಾರಿ ಕಾಂಗ್ರೆಸ್‌ ಗೆ ಮತ ನೀಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ.

ಇದನ್ನೂ ಓದಿ; ಪಾಠ ಮಾಡೋದು ಬಿಟ್ಟು ಮೇಕಪ್‌ ಮಾಡಿಸಿಕೊಳ್ಳುವುದರಲ್ಲಿ ಬ್ಯುಸಿ; ಶಿಕ್ಷಕಿಯ ವಿಡಿಯೋ ವೈರಲ್‌!

20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ;

ಒಂದು ಕಡೆ ಬಿಜೆಪಿ-ಜೆಡಿಎಸ್‌ ಪಕ್ಷಗಳು 28 ಕ್ಕೆ 28 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ಹೇಳುತ್ತಿವೆ.. ಆದ್ರೆ ಕಾಂಗ್ರೆಸ್‌ ಮಾತ್ರ ನಾವೂ ಕೂಡಾ 20ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದೆ.. ಸಮೀಕ್ಷೆಗಳು ಎರಡೂ ಕಡೆಗೂ ವರದಿ ನೀಡುತ್ತಿವೆ.. ಕೆಲ ಸಮೀಕ್ಷೆಗಳು ಕಾಂಗ್ರೆಸ್‌ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೆ ಅಂತ ಹೇಳಿದರೆ, ಕೆಲ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳುತ್ತಿವೆ.. ಅಂದಹಾಗೆ ಕಾಂಗ್ರೆಸ್‌ ಈ ಬಾರಿ ಎಲ್ಲಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ವಿಶ್ವಾಸ ಇರಿಸಿಕೊಂಡಿದೆ.. ಜಾತಿ ಮತ ಮೀರಿ ಮಹಿಳೆಯರು ಕಾಂಗ್ರೆಸ್‌ಗೆ ಮತ ನೀಡುತ್ತಾರೆ ಎಂದು ನಂಬಲಾಗಿದೆ..

ಇದನ್ನೂ ಓದಿ; ಯುವತಿಗೆ 11 ಬಾರಿ ಇರಿದು ಕೊಂದ ಪಾಪಿ; ರಾಜಕಾಲುವೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿ ಫಯಾಜ್‌!

ಮಹಿಳೆಯರಿಗೆ ಈ ಬಾರಿ ಹೆಚ್ಚು ಟಿಕೆಟ್‌;

ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಪಕ್ಷ ರಾಜ್ಯದ 28 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿದೆ.. ಈ ಮೂಲಕ ನಾವು ಮಹಿಳೆಯರಿಗೆ ಪ್ರಾಶಸ್ತ್ಯ ನೀಡುತ್ತಿದ್ದೇವೆ ಎಂದು ಕಾಂಗ್ರೆಸ್‌ ಹೇಳುತ್ತಿದೆ.. ಇದರ ಜೊತೆಗೆ ಮಹಿಳೆಯರಿಗೆ ಅನುಕೂಲವಾಗಿ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.. ಇದರಿಂದಾಗಿ ಮಹಿಳೆಯರು ಹೆಚ್ಚು ಫಲಾನುಭವಿಗಳಿದ್ದಾರೆ.. ಗ್ರಾಮೀಣ ಮಹಿಳೆಯರು ಇದರಿಂದ ಸಾಕಷ್ಟು ಅನುಕೂಲ ಪಡೆಯುತ್ತಿದ್ದಾರೆ.. ಇದು ಅನಗತ್ಯ ಎಂದು ಸರ್ಕಾರವನ್ನು ಬೈಯ್ಯುವವರೂ ಕೂಡಾ ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ.. ಹೀಗಾಗಿ ಮಹಿಳೆಯರು ಕೈಹಿಡಿಯುತ್ತಾರೆಂಬ ಗಟ್ಟಿ ವಿಶ್ವಾಸ ಇಟ್ಟುಕೊಂಡಿದ್ದಾರೆ..

ಇದನ್ನೂ ಓದಿ; ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ!; ಕಾರಣ ಏನು..?

ಸೋಲಿಸಿದರೆ ಗ್ಯಾರೆಂಟಿ ನಿಂತು ಹೋಗುತ್ತವಾ..?;

ಇನ್ನು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳು ಬಂದರೆ ಕಷ್ಟವಾಗುತ್ತದೆ.. ಇದರಿಂದ ಬಿಜೆಪಿಯವರು ರಾಜ್ಯ ಸರ್ಕಾರವನ್ನು ಅತಂತ್ರ ಮಾಡುತ್ತಾರೆ.. ಆಪರೇಷನ್‌ ಕಮಲ ನಡೆಯಬಹುದು.. ಸರ್ಕಾರವನ್ನು ಬೀಳಿಸಬಹುದು ಎಂಬ ಪ್ರಚಾರ ನಡೆಯುತ್ತಿದೆ.. ಆ ಮೂಲಕ ಗ್ಯಾರೆಂಟಿ ಯೋಜನೆಗಳು ಇರಬೇಕು ಅಂದ್ರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ.. ಆದ್ರೆ ಮಹಿಳೆಯರ ಒಲವು ಯಾರ ಕಡೆ ಅನ್ನೋದು ಇನ್ನೂ ಅರ್ಥವಾಗುತ್ತಿಲ್ಲ.. ಯಾಕಂದ್ರೆ ಮತದಾರರು ಲೋಕಸಭಾ ಚುನಾವಣೆಯಲ್ಲಿ ಒಂದು ನಿರ್ಧಾರ ತೆಗೆದುಕೊಂಡು ವಿಧಾನಸಭಾ ಚುನಾವಣೆಗೆ ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ.. ಹೀಗಾಗಿ ಈ ಲೋಕಸಭಾ ಚುನಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ..

ಇದನ್ನೂ ಓದಿ; ಸಿದ್ದರಾಮಯ್ಯ ಸೀಟು ಅಲುಗಾಡುತ್ತಿದೆಯಾ..?; ಸಿಎಂ ಶಿಷ್ಯನೇ ಹೀಗೆ ಹೇಳಿದ್ಯಾಕೆ..?

 

Share Post