Politics

ಗೋವಾದಲ್ಲಿ ಪಕ್ಷಾಂತರ ಪರ್ವ ಜೋರು; 5 ವರ್ಷದಲ್ಲಿ ಶೇ.60 ಶಾಸಕರು ಜಂಪ್‌

ಪಣಜಿ: ಗೋವಾ ಅತ್ಯಂತ ಚಿಕ್ಕ ರಾಜ್ಯ. ಇಲ್ಲಿನ ವಿಧಾನಸಭೆಯಲ್ಲಿ ಕೇವಲ 40 ಸ್ಥಾನಗಳಿವೆ. ಆದರೂ ಇಲ್ಲಿ ಎಲ್ಲೂ ಇಲ್ಲದ ಪಕ್ಷಾಂತರ ನಡೆಯುತ್ತದೆ. ಇವತ್ತು ಒಂದು ಪಕ್ಷದಲ್ಲಿರುವವರು ನಾಳೆ ಇನ್ನೊಂದು ಪಕ್ಷಕ್ಕೆ ಜಂಪ್‌ ಆಗಿರುತ್ತಾರೆ. ಕಳೆದ ಐದು ವರ್ಷದಲ್ಲಿ ಈ ರಾಜ್ಯದಲ್ಲಿ ಶೇಕಡಾ ಅರವತ್ತರಷ್ಟು ಮಂದಿ ಪಕ್ಷಾಂತರವಾಗಿದ್ದಾರಂತೆ. ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಇಂತದ್ದೊಂದು ವರದಿ ನೀಡಿದ್ದು, ಇದೊಂದು ದಾಖಲೆಯ ಪಕ್ಷಾಂತರ ಎಂದು ಹೇಳಿದೆ.

2019 ರಲ್ಲಿ ವಿಪಕ್ಷ ನಾಯಕರಾಗಿದ್ದ ಚಂದ್ರಕಾಂತ್ ಕವ್ಲೇಕರ್ ಸೇರಿ ಕಾಂಗ್ರೆಸ್ ಶಾಸಕರು ಗುಂಪಾಗಿ ಬಿಜೆಪಿ ಸೇರಿದ್ದರು. ಅದಾದ ಮೇಲೂ ಪಕ್ಷಾಂತರ ಮುಂದುವರೆದೇ ಇತ್ತು. ಇದೀಗ ಚುನಾವಣೆ ಘೋಷಣೆಯಾಗಿದ್ದು, ಈ ಟಿಕೆಟ್‌ ಕಾರಣಕ್ಕಾಗಿ ಶಾಸಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಂಪ್‌ ಆಗುತ್ತಿದ್ದಾರೆ.  2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಅಂದರೆ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಕೇವಲ 13 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ, ಕಾಂಗ್ರೆಸ್‌ ಶಾಸಕರನ್ನು ಸೆಳೆದು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು.

Share Post