Politics

ಹೆಣ್ಣು ಮಕ್ಕಳಿಗೆ ಅಮ್ಮನಿಗಿಂತ ಅಪ್ಪನೇ ಅಕ್ಕರೆ ಯಾಕೆ ಗೊತ್ತಾ..?

ಹೆಣ್ಣು ಮಕ್ಕಳಿಗೆ ತಂದೆ ಎಂದರೆ ಹೆಚ್ಚು ಪ್ರೀತಿ, ಅಕ್ಕರೆ. ಹುಡುಗರಿಗೆ ತಾಯಿ ಅಂದರೆ ಮಮತೆ.. ಮಗಳು ಯಾವಾಗಲೂ ತನ್ನ ತಂದೆಯನ್ನು ತನ್ನ ತಾಯಿಗಿಂತ ಹೆಚ್ಚು ಇಷ್ಟಪಡುತ್ತಾರೆ. ಎಲ್ಲಾ ಹೆಣ್ಣು ಮಕ್ಕಳೂ ತನ್ನ ತಂದೆಯ ಜೊತೆ ಸ್ನೇಹಿತರಂತೆ ಇರುತ್ತಾರೆ. ತಾಯಿಯನ್ನು ದೇವರು ಎಂದು ಪರಿಗಣಿಸಿದರೂ ಕೂಡಾ, ಹೆಣ್ಣು ಮಕ್ಕಳು ತಂದೆಯ ಜೊತೆ ಹೆಚ್ಚು ಒಡನಾಟ ಇಟ್ಟುಕೊಂಡಿರುತ್ತಾರೆ. ಇದಕ್ಕೆ ಕಾರಣಗಳೇನು..? ನೋಡುತ್ತಾ ಹೋಗೋಣ..

ಜೀವನದ ಮೊದಲ ವ್ಯಕ್ತಿ ತಂದೆ;

  ಹೆಣ್ಣು ತಾನು ನೋಡುವ ಜೀವನದ ಮೊದಲ ವ್ಯಕ್ತಿ ತಂದೆ. ಅವರು ಬದುಕು, ಹೋರಾಟವನ್ನು ನೋಡಿಕೊಂಡೇ ಮಗಳು ಬೆಳೆಯುತ್ತಾರೆ.. ಇದರಿಂದಾಗಿ ಹೆಣ್ಣು ಮಕ್ಕಳಿಗೆ ತಂದೆ ಆದರ್ಶವಾಗುತ್ತಾರೆ. ಹೀಗಾಗಿ ಮಗಳಿಗೆ ಮೊದಲ ಹೀರೋ ಅಪ್ಪನೇ ಆಗುತ್ತಾನೆ.

ಧೈರ್ಯ, ಶಕ್ತಿ ತಂದೆಯೇ;

  ಹೆಣ್ಣು ಮಗಳ ಧೈರ್ಯ, ಶಕ್ತಿ ಎಲ್ಲವೂ ಅಪ್ಪನೇ.. ಯಾಕಂದ್ರೆ ಅಪ್ಪ ಸಮಾಜದಲ್ಲಿ ಹೇಗೆ ಬದುಕುವುದು ಅನ್ನೋದನ್ನು ಕಲಿಸಿಕೊಡುತ್ತಾನೆ.. ಯಾವ ಸಂದರ್ಭದಲ್ಲಿ ಸ್ಟ್ರಾಂಗ್ ಇರಬೇಕು ಎಂದು ಹೇಳಿಕೊಡುತ್ತಾನೆ. ಯಾವುದೇ ಸಮಸ್ಯೆಯನ್ನು ಎದುರಿಸುವುದರ ಬಗ್ಗೆ ತಂದೆಯಿಂದ‌ ಮಗಳು ಕಲಿಯುತ್ತಾಳೆ. ಹೀಗಾಗಿ ತಂದೆ ಎಂದರೆ ಮಗಳಿಗೆ ಪ್ರಾಣ.

ತಂದೆ ಕಾಪಾಡುತ್ತಾನೆ ಎಂಬ ನಂಬಿಕೆ;

   ಮಗಳಿಗೆ ತಾಯಿಯಿಂದಲೂ ಪ್ರೀತಿ, ವಾತ್ಸಲ್ಯ ಸಿಗುತ್ತದೆ.. ಆದ್ರೆ ಭದ್ರತೆ ವಿಚಾರಕ್ಕೆ ಬಂದಾಗ ತಂದೆಯೇ ಹೀರೋ ಆಗುತ್ತಾನೆ. ತಂದೆ ನಮ್ಮನ್ನೆಲ್ಲಾ ಸಲಹುತ್ತಿದ್ದಾನೆ.. ಕಾಪಾಡುತ್ತಿದ್ದಾನೆ.. ಎಂದು ಮಗಳು ಭಾವಿಸುತ್ತಾಳೆ.. ತಂದೆ ನನ್ನ ಮನೆಗೆ ಒಬ್ಬ ಯೋಧ ಎಂದೇ ಮಗಳು ಅಂದುಕೊಳ್ಳುತ್ತಾಳೆ.

ಹೆಚ್ಚು ನನ್ನ ಹಿತ ಕಾಯುತ್ತಾರೆ ಎಂಬ ನಂಬಿಕೆ;

  ತಂದೆ ಹಣ್ಣು ಮಕ್ಕಳ ಸಂತೋಷವನ್ನು ಬಯಸುತ್ತಾರೆ.. ಮಗಳು ಕೇಳಿದ್ದೆಲ್ಲಾ ಕೊಡಿಸುತ್ತಿರುತ್ತಾರೆ.. ಯಾವುದೇ ಸಂದರ್ಭದಲ್ಲಿಯೂ ತಂದೆ ಹೆಣ್ಣು‌ ಮಕ್ಕಳ ರಕ್ಷಣೆಗೆ ನಿಲ್ಲುತ್ತಾರೆ.. ಹೀಗಾಗಿ ಹೆಣ್ಣು‌ಮಕ್ಕಳಿಗೆ ತಂದೆ ಎಂದರೆ ಪ್ರೀತಿ.

ಮಗಳನ್ನು ರಾಣಿಯಂತೆ ಸಾಕುತ್ತಾರೆ;

  ಯಾವುದೇ ಅಪ್ಪ ಎಷ್ಟೇ ಸಮಸ್ಯೆ ಇದ್ದರೂ ಮಗಳನ್ನು ರಾಣಿಯಂತೆ ಸಾಕುತ್ತಾರೆ. ಆಕೆಗೆ ಏನನ್ನೂ ಕಡಿಮೆ ಮಾಡುವುದಿಲ್ಲ. ತಂದೆಯಾದವನು ಮನೆಯಲ್ಲಿ ಮಗಳಿಗೆ ತುಂಬಾ ಸ್ವಾತಂತ್ರ್ಯ ಕೊಡುತ್ತಾನೆ.. ಸ್ವತಂತ್ರವಾಗಿ ಬೆಳೆಯುವುದು ಹೇಗೆ ಎಂಬುದನ್ನು ಕಲಿಸಿಕೊಡುತ್ತಾನೆ.. ಮಗಳ ಹಿಂದೆ ಎಚ್ಚರಿಕೆಯೂ ಕೊಡುತ್ತಾನೆ. ಪ್ರೋತ್ಸಾಹವನ್ನೂ‌ನೀಡುತ್ತಾನೆ. ಹೀಗಾಗಿ ಹೆಣ್ಣು‌ಮಕ್ಕಳಿಗೆ ತಂದೆ ಎಂದರೆ ಪ್ರೀತಿ.

ಯಾವುದೇ ಸಂದರ್ಭದಲ್ಲಿ ಬೆನ್ನಿಗೆ ನಿಲ್ಲುವ ತಂದೆ;

ಉದ್ಯೋಗದಲ್ಲಿ ಯಾವ ಸವಾಲುಗಳನ್ನು ಎದುರಿಸಬೇಕು ಮತ್ತು ಅಪಾಯಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಓದಿ ಮತ್ತು ತಿಳಿಸಿ. ನೀವು ಎತ್ತರಕ್ಕೆ ಏರಿದರೂ ಅಥವಾ ಕೆಳಕ್ಕೆ ಬೀಳಲಿ ತಂದೆ ಹೆಣ್ಣು‌ಮಕ್ಕಳ‌ ಹಿಂದೆ ಇರುತ್ತಾರೆ.  ಹೀಗಾಗಿ ಹೆಣ್ಣು ಮಕ್ಕಳಿಗೆ ತಂದೆ ಎಂದರೆ ಪ್ರೀತಿ ಹೆಚ್ಚು.

Share Post