CrimeNational

ಪಾಠ ಮಾಡೋದು ಬಿಟ್ಟು ಮೇಕಪ್‌ ಮಾಡಿಸಿಕೊಳ್ಳುವುದರಲ್ಲಿ ಬ್ಯುಸಿ; ಶಿಕ್ಷಕಿಯ ವಿಡಿಯೋ ವೈರಲ್‌!

ಲಖನೌ; ಸೋಷಿಯಲ್‌ ಮೀಡಿಯಾ ಜನಪ್ರಿಯತೆ ಪಡೆದುಕೊಂಡಿರುವುದರಿಂದ ಎಲ್ಲರೂ ಕೂಡಾ ರೀಲ್ಸ್‌ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.. ರೀಲ್ಸ್‌ ಹುಚ್ಚು ಎಷ್ಟಿದೆ ಎಂದರೆ ಮಾಡೋ ಕೆಲಸವನ್ನೂ ಬಿಡುತ್ತಾರೆ.. ಅದೇ ರೀತಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಒಬ್ಬರು ಶಾಲೆಯನ್ನೇ ಬ್ಯೂಟಿ ಪಾರ್ಲರ್‌ ಮಾಡಿಕೊಂಡಿದ್ದಾರೆ.. ತಮಗೆ ರೀಲ್ಸ್‌ ಮಾಡಬೇಕು ಎನಿಸಿದಾಗಲೆಲ್ಲಾ ಶಾಲೆಯಲ್ಲೇ ಫೇಷಿಯಲ್‌, ಮೇಕಪ್‌ ಮಾಡಿಸಿಕೊಳ್ಳುತ್ತಾರೆ.. ಹೀಗೆ ಮಾಡುತ್ತಾ ಸಿಕ್ಕಿಬಿದ್ದಿದ್ದಾರೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಯುವತಿಗೆ 11 ಬಾರಿ ಇರಿದು ಕೊಂದ ಪಾಪಿ; ರಾಜಕಾಲುವೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿ ಫಯಾಜ್‌!

ಉನ್ನೋವೋ ಸರ್ಕಾರಿ ಶಾಲೆಯಲ್ಲಿ ಘಟನೆ;

ಉತ್ತರ ಪ್ರದೇಶದ ಉನ್ನಾವೋದ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ ಸಂಗೀತಾ ಸಿಂಗ್‌ ಅವರು ಪಾಠ ಮಾಡೋದನ್ನು ಬಿಟ್ಟು ಬರೀ ಮೇಕಪ್‌ ಮಾಡಿಸಿಕೊಳ್ಳುವುದರಲ್ಲೇ ಮುಳುಗಿರುತ್ತಾರೆ ಎಂದು ಆರೋಪಿಸಲಾಗಿದೆ.. ಮುಖ್ಯೋಪಾಧ್ಯಾಯಿನಿ ಸಂಗೀತಾ ಅವರು ಶಾಲೆಯ ಅಡುಗೆ ಕೊಠಡಿಯಲ್ಲಿ ಮಹಿಳೆಯೊಬ್ಬರಿಂದ ಮೇಕಪ್‌ ಮಾಡಿಸಿಕೊಳ್ಳುತ್ತಿದ್ದರು.. ದಿನಾ ಇದೇ ರೀತಿ ಮಾಡುತ್ತಾರೆ ಎಂದು ತಿಳಿದಿದ್ದ ವ್ಯಕ್ತಿಯೊಬ್ಬರು, ವಿಡಿಯೋ ಮಾಡುತ್ತಲೇ ಎಂಟ್ರಿ ಕೊಟ್ಟಿದ್ದಾರೆ.. ಆಗ ಶಿಕ್ಷಕಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ; ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ!; ಕಾರಣ ಏನು..?

ವಿಡಿಯೋ ಮಾಡುತ್ತಿದ್ದವನ ಮೇಲೆ ಹಲ್ಲೆಗೆ ಯತ್ನ;

ವಿದ್ಯಾರ್ಥಿಗಳೇ ಮುಖ್ಯೋಪಾಧ್ಯಾಯಿನಿ ಪಾಠ ಮಾಡೋದನ್ನು ಬಿಟ್ಟು ಮೇಕಪ್‌ ಮಾಡಿಸಿಕೊಳ್ಳುತ್ತಿರುತ್ತಾರೆ ಎಂದು ಹೇಳಿದ್ದರು.. ಈ ಹಿನ್ನೆಲೆಯಲ್ಲಿ ಎಂಎಸ್‌ ಖಾನ್‌ ಎಂಬುವವರು ಮೊಬೈಲ್‌ ಹಿಡಿದು ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾರೆ.. ಇದನ್ನು ನೋಡುತ್ತಲೇ ಮುಖ್ಯೋಪಾಧ್ಯಾಯಿನಿಯವರು ಎದ್ದು ನಿಂತು ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಜೊತೆಗೆ ಆತನ ಕೈಕಚ್ಚಿದ್ದಾಳೆ ಎಂದು ತಿಳಿದುಬಂದಿದೆ.. ಇದರಿಂದ ರಕ್ತಸ್ರಾವವಾಗುತ್ತಿದ್ದರೂ ಖಾನ್‌ ಹಾಗೆಯೇ ವಿಡಿಯೋ ಮಾಡಿದ್ದಾರೆ.

ಮುಖ್ಯೋಪಾಧ್ಯಾಯಿನಿ ಸಂಗೀತಾ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲು ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ..

ಇದನ್ನೂ ಓದಿ; ಸಿದ್ದರಾಮಯ್ಯ ಸೀಟು ಅಲುಗಾಡುತ್ತಿದೆಯಾ..?; ಸಿಎಂ ಶಿಷ್ಯನೇ ಹೀಗೆ ಹೇಳಿದ್ಯಾಕೆ..?

 

Share Post