Politics

ಕರ್ನಾಟಕದಲ್ಲಿ ಪ್ರಚಾರಕ್ಕೆ ಕಾಂಗ್ರೆಸ್‌ ರೂಟ್‌ ಮ್ಯಾಪ್‌; ಮೋದಿಗೆ ಠಕ್ಕರ್‌ ಕೊಡಲು ಪ್ಲ್ಯಾನ್‌

ಬೆಂಗಳೂರು; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಎರಡು ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ.. ಈಗ ಮತ್ತೆ ಅವರು ರಾಜ್ಯದಲ್ಲಿ ಎರಡು ಕಡೆ ಸಮಾವೇಶಗಳನ್ನು ನಡೆಸಲಿದ್ದಾರೆ.. ಪ್ರಚಾರದ ವಿಷಯದಲ್ಲಿ ರಾಜ್ಯದಲ್ಲಿ ಬಿಜೆಪಿ ಮುಂದಿದೆ.. ಕಾಂಗ್ರೆಸ್‌ ಇನ್ನೂ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದೆ.. ಈ ನಡುವೆಯೂ ಕಾಂಗ್ರೆಸ್‌ ಬಿಜೆಪಿಗೆ ಠಕ್ಕರ್‌ ಕೊಡಲು ಹೊಸ ಪ್ಲ್ಯಾನ್‌ ಗೇಮ್‌ ಶುರು ಮಾಡಿದೆ.. ರಾಜ್ಯದಲ್ಲಿ ರಾಹುಲ್‌ ಗಾಂಧಿಯವರನ್ನು ಮುಂದಿಟ್ಟುಕೊಂಡು ಮೋದಿಗೆ ಟಾಂಗ್‌ ಕೊಡಲು ಪ್ರಚಾರದ ರೂಟ್‌ ಮ್ಯಾಪ್‌ ಸಿದ್ಧ ಮಾಡಲಾಗುತ್ತಿದೆ..

ಇದನ್ನೂ ಓದಿ; Loksabha Election; ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕ್ಷಣಗಣನೆ; ಇವರೇನಾ 17 ಅಭ್ಯರ್ಥಿಗಳು..?

ರಾಹುಲ್‌ ಗಾಂಧಿ ಕರೆಸಿ ಚುನಾವಣಾ ಪ್ರಚಾರ;

ರಾಹುಲ್‌ ಗಾಂಧಿ ಎರಡು ಬಾರಿ ಭಾರತ್‌ ಜೋಡೋ ಯಾತ್ರೆಗಳನ್ನು ಮಾಡಿದ್ದಾರೆ.. ಇದೀಗ ಅವರು ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.. ಇನ್ನು ಕರ್ನಾಟಕದಲ್ಲಿ ಈಗಾಗಲೇ ಮೋದಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ.. ಹೀಗಾಗಿ ಜನರು ಬಿಜೆಪಿ ಕಡೆಗೆ ವಾಲುವ ಮೊದಲು ಕಾಂಗ್ರೆಸ್‌ನಿಂದ ಸಮಾವೇಶಗಳನ್ನು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.. ರಾಹುಲ್‌ ಗಾಂಧಿಯವರನ್ನು ಕರೆಸಿ ಪ್ರಚಾರ ಆರಂಭಿಸಲು ರಾಜ್ಯ ನಾಯಕರು ಚಿಂತನೆ ನಡೆಸಿದ್ದಾರೆ.. ಈ ಕುರಿತು ಸಿಎಂ ಮತ್ತು ಡಿಸಿಎಂ ಜೊತೆ ಬಸವರಾಜ್ ರಾಯರೆಡ್ಡಿ, ಜಿ.ಸಿ.ಚಂದ್ರಶೇಖರ್ ಸೇರಿದಂತೆ ಹಲವು ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ…

ಇದನ್ನೂ ಓದಿ; ಚುನಾವಣೆ ಬಳಿಕ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ತಾರೆ; ಮಾಜಿ ಸಚಿವ ಈಶ್ವರಪ್ಪ

ಭಾರತ್‌ ಜೋಡೋ ಯಾತ್ರೆಯಿಂದ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಲಾಭ;

ರಾಹುಲ್‌ ಗಾಂಧಿಯವರು ವಿಧಾನಸಭಾ ಚುನಾವಣೆಗೂ ಮುಂಚೆ ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಸಿದ್ದರು.. ಅವರು ಪಾದಯಾತ್ರೆ ಮಾಡಿದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಅಂದ್ರೆ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ ಅನುಕೂಲವಾಗಿತ್ತು… ಈ ಹಿನ್ನೆಲೆಯಲ್ಲಿ ಈ ಬಾರಿಯೂ ಕೂಡಾ ರಾಜ್ಯದಲ್ಲಿ ರಾಹುಲ್‌ ಗಾಂಧಿಯವರನ್ನು ಬಳಸಿಕೊಂಡು ಪ್ರಚಾರ ಮಾಡಿದರೆ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ.. ಈ ಬಾರಿಯೂ ಕೂಡಾ ಒಂದು ರೂಟ್‌ ಮ್ಯಾಪ್‌ ರೆಡಿ ಮಾಡಿ, ರಾಜ್ಯದ ಹೆಚ್ಚು ಕಡೆಗಳಲ್ಲಿ ರಾಹುಲ್‌ ಗಾಂಧಿ ರ್ಯಾಲಿ ಆಯೋಜನೆ ಮಾಡಲು ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಪಕ್ಕದ ಮನೆ ದಂಪತಿ ಸರಸ ಸಲ್ಲಾಪ ನೋಡೋಕೆ ಆಗ್ತಿಲ್ಲ; ಬೆಂಗಳೂರು ಮಹಿಳೆಯಿಂದ ವಿಚಿತ್ರ ದೂರು

ಬಸವಕಲ್ಯಾಣ ಅಥವಾ ಕುರುಡು ಮಲೆಯಿಂದ ಪ್ರಚಾರ;

ಕಾಂಗ್ರೆಸ್‌ ಸರ್ಕಾರ ಬವಸಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರೆದಿದೆ.. ಬಸವಣ್ಣನವರ ಸಿದ್ಧಾಂತಗಳಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಅವರು ಯಾವಾಗಲೂ ಹೇಳುತ್ತಿರುತ್ತಾರೆ.. ಇದೀಗ ರಾಹುಲ್‌ ಗಾಂಧಿಯವರನ್ನು ಕರೆತಂದು ಬಸವಕಲ್ಯಾಣದಿಂದ ಪ್ರಚಾರ ಶುರು ಮಾಡಿಸಿದರೆ ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆದಿದೆ.. ಇದರಿಂದಾಗಿ ಲಿಂಗಾಯತರ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ಪ್ಲ್ಯಾನ್‌ ಮಾಡಿದೆ.. ಇನ್ನು ಬಸವಕಲ್ಯಾಣದಿಂದ ಸಾಧ್ಯವಾಗದಿದ್ದರೆ ಕುರುಡು ಮಲೆಯಿಂದ ರಾಹುಲ್‌ ಗಾಂಧಿ ಪ್ರಚಾರಕ್ಕೆ ಚಾಲನೆ ನೀಡಲು ಕೂಡಾ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಲಿಂಗಾಯತ ಮತಬ್ಯಾಂಕ್‌ ಮೇಲೆ ಕಾಂಗ್ರೆಸ್‌ ಕಣ್ಣು;

ಯಡಿಯೂರಪ್ಪನವರಿಂದಾಗಿ ಲಿಂಗಾಯತ ಮತಗಳು ಬಿಜೆಪಿಗೆ ಬೀಳುತ್ತಿದ್ದರು.. ಆದ್ರೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿರುವುದರಿಂದ ಈ ಬಾರಿ ಯಡಿಯೂರಪ್ಪ ಅವರು ಶಕ್ತಿಗುಂದಿದಂತೆ ಕಾಣುತ್ತಿದ್ದಾರೆ.. ಇದೇ ಸಮಯದಲ್ಲಿ ಕಾಂಗ್ರೆಸ್‌ ಲಾಭ ಮಾಡಿಕೊಳ್ಳಲು ಪ್ಲ್ಯಾನ್‌ ಮಾಡಿದೆ.. ಬಸವಕಲ್ಯಾಣದಿಂದ ಪ್ರಚಾರ ಆರಂಭಿಸಿದರೆ ಲಿಂಗಾಯತರನ್ನು ಸೆಳೆಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ಗಿದೆ. ಮೊದಲ ಹಂತದಲ್ಲಿ ಕುರುಡು ಮಲೆಯಿಂದ ಹಾಗೂ ಎರಡನೇ ಹಂತದಲ್ಲಿ ಬಸವಕಲ್ಯಾಣದಿಂದ ರಾಹುಲ್‌ ಗಾಂಧಿ ಪ್ರಚಾರ ಆರಂಭಿಸಿದರೆ ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಒಂದೇ ಕುಟುಂಬದ ಮೂವರು ನಿಗೂಢ ಸಾವು; ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ್ರಾ..?

ರೂಟ್‌ ಮ್ಯಾಪ್‌ ರೆಡಿ ಮಾಡಿ ಪ್ರಚಾರ ಸಭೆಗಳು;

ಮೊದಲ ಹಂತ ಹಾಗೂ ಎರಡನೇ ಹಂತಕ್ಕೆ ರೂಟ್‌ ಮ್ಯಾಪ್‌ಗಳನ್ನು ರೆಡಿ ಮಾಡಲಾಗುತ್ತಿದ್ದು, ಎಲ್ಲಾ ಕ್ಷೇತ್ರಗಳೂ ಕವರ್‌ ಆಗುವಂತೆ ನೋಡಿಕೊಳ್ಳಲಾಗುತ್ತದೆ.. ರಾಹುಲ್‌ ಗಾಂಧಿಯವರನ್ನು ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿಸಿ, ಕಾಂಗ್ರೆಸ್‌ ಪರ ಪಲವು ಹೆಚ್ಚಾಗುವಂತೆ ಮಾಡಲು ರಾಜ್ಯ ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ.. ಇದಕ್ಕೆ ಏನೇನು ಬೇಕು ಎಲ್ಲವನ್ನೂ ರೆಡಿಮಾಡಿಕೊಳ್ಳಲಾಗುತ್ತಿದೆ.

 

Share Post