NationalPolitics

ಪಾದಯಾತ್ರೆಗೆ ಬಿಜೆಪಿ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌!; ಮುರಿದುಬೀಳುತ್ತಾ ಜೆಡಿಎಸ್‌ ಮೈತ್ರಿ..?

ನವದೆಹಲಿ; ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರ ಹಾಗೂ ಮುಡಾ ಹಗರಣ ವಿರೋಧಿಸಿ ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಆಯೋಜಿಸಲಾಗಿದೆ.. ಆದ್ರೆ ಇದಕ್ಕೆ ಬಿಜೆಪಿಯಲ್ಲಿ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.. ಇತ್ತ ಮಿತ್ರ ಪಕ್ಷ ಜೆಡಿಎಸ್‌ ಕೂಡಾ ಪಾದಯಾತ್ರೆಗೆ ನಮ್ಮ ಬೆಂಬಲವಿಲ್ಲ ಎಂದು ಹೇಳಿಬಿಟ್ಟಿದೆ.. ಹೀಗಿರುವಾಗಲೇ ಬಿಜೆಪಿ ಹೈಕಮಾಂಡ್‌ ಯಾರಿಗೂ ತಲೆಕೆಡಿಸಿಕೊಳ್ಳಬೇಡಿ ನಿಮ್ಮಷ್ಟಕ್ಕೆ ನೀವು ಪಾದಯಾತ್ರೆ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಧೈರ್ಯ ತುಂಬಿ ಕಳುಹಿಸಿದೆ.. ಹೀಗಾಗಿ, ಬಿಜೆಪಿ-ಜೆಡಿಎಸ್‌ ಮೈತ್ರಿ ಏನಾಗುತ್ತೆ ಎಂಬುದರ ಬಗ್ಗೆ ಕುತೂಹಲಕ್ಕೆ ಕಾರಣವಾಗಿದೆ..

ಇದನ್ನೂ ಓದಿ; ತಾನೇ ಬಟ್ಟೆ ಹರಿದುಕೊಂಡು ಯುವಕನ ಮೇಲೆ ಆರೋಪ ಮಾಡಿದ ಮಹಿಳೆ!

ಕೇಂದ್ರ ಸಚಿವ ಕುಮಾರಸ್ವಾಮಿಯವರೇ ನೇರವಾಗಿ ಪಾದಯಾತ್ರೆಯಲ್ಲಿ ಜೆಡಿಎಸ್‌ ಭಾಗಿಯಾಗಲ್ಲ ಅಂತ ನಿನ್ನೆ ದೆಹಲಿಯಲ್ಲಿ ಹೇಳಿದ್ದರು.. ಇದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು.. ಪಾದಯಾತ್ರೆ ಆಗುತ್ತಿರುವ ವಿಘ್ನದ ಕುರಿತಂತೆ ಅಮಿತ್‌ ಶಾ ಜೊತೆ ಮಾತನಾಡಿದರು.. ಪಾದಯಾತ್ರೆ ಕ್ಯಾನ್ಸಲ್‌ ಮಾಡುವ ಚಾನ್ಸಸ್‌ ಇದೆ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು.. ಆದ್ರೆ ಅಮಿತ್‌ ಶಾ ಯಾವುದಕ್ಕೂ ಕೇರ್‌ ಮಾಡಿಲ್ಲ.. ಯಾರೇ ವಿರೋಧ ವ್ಯಕ್ತಪಡಿಸಿದರೂ ಪಾದಯಾತ್ರೆಯನ್ನು ನಿಲ್ಲಿಸಬೇಡಿ ಅಂದುಕೊಂಡಂತೆ ಪಾದಯಾತ್ರೆ ನಡೆಸಿ ಎಂದು ಹೈಕಮಾಂಡ್‌ ಹೇಳಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ನೀವು ಚಿಕನ್‌ ಲಿವರ್‌ ಪ್ರಿಯರಾ..?; ಹಾಗಾದ್ರೆ ಈ ವರದಿ ಓದಲೇಬೇಕು..

ನಾವು ಸುಮ್ಮನಾದರೆ ಎಲ್ಲಾ ವಿಚಾರದಲ್ಲೂ ಹೆದರಿಸುತ್ತಲೇ ಇರುತ್ತಾರೆ.. ನಿಮ್ಮ ಪಾಡಿಗೆ ನೀವು ಪಾದಯಾತ್ರೆ ನೀವು ಮಾಡಿ, ಮುಂದಿನದ್ದು ನಾವು ನೋಡಿಕೊಳ್ಳುತ್ತೇನೆ ಎಂದು ಅಮಿತ್‌ ಶಾ ಹೇಳಿದ್ದಾರೆ ಎಂದು ತಿಳಿದುಬಂದಿದೆ..

Share Post