ಒಂದೇ ಕುಟುಂಬದ ಮೂವರು ನಿಗೂಢ ಸಾವು; ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ್ರಾ..?
ಬೆಂಗಳೂರು; ಅದೊಂದು ಸುಂದರ ಕುಟುಂಬ.. ಗಂಡ-ಹೆಂಡತಿ ಇಬ್ಬರು ಮಕ್ಕಳು.. ಒಂದು ಫ್ಯಾಕ್ಟರಿ ಕೂಡಾ ಇತ್ತು.. ಆದ್ರೆ ಕೊರೊನಾ ಕಾರಣಕ್ಕೋ ಏನೋ ಫ್ಯಾಕ್ಟರಿ ಲಾಸ್ ಹಾಕಿ ಬಾಗಿಲು ಹಾಕಲಾಗಿತ್ತು.. ಮೈತುಂಬಾ ಸಾಲ ಇದ್ದರೂ ಹೇಗೆ ಜೀವನ ಸಾಗಿಸುತ್ತಿದ್ದ ಕುಟುಂಬದಲ್ಲಿ ಈ ದಾರುಣ ಘಟನೆ ನಡೆದುಹೋಗಿದೆ.. ಮನೆಯಲ್ಲಿದ್ದ ನಾಲ್ವರಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ತಾಯಿ ಹಾಗೂ ಇಬ್ಬರು ಮಕ್ಕಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.. ಬೆಂಗಳೂರಿನ ಜೆಪಿ ನಗರದ ಮನೆಯಲ್ಲಿ ಈ ದುರ್ಘಟನೆ ನಡೆದುಹೋಗಿದೆ.
ಇದನ್ನೂ ಓದಿ; ಇಂದೇ ಕಾಂಗ್ರೆಸ್ ಪಟ್ಟಿ ರಿಲೀಸ್; ಸಚಿವರ ಮಕ್ಕಳು, ಸಂಬಂಧಿಕರಿಗೇ ಹೆಚ್ಚು ಮಣೆ?
ತಾಯಿ, ಇಬ್ಬರು ಮಕ್ಕಳು ಆತ್ಮಹತ್ಯೆ;
ಜೆಪಿ ನಗರದ ಮೂರನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸುಕನ್ಯಾ ಜಯಾನಂದ (48), ನಿಖಿತ್ (28), ನಿಶಿತ್ (28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.. ಇಂದು ಮುಂಜಾನೆ ಮೂವರೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.. ಆದ್ರೆ ಸಕನ್ಯಾ ಅವರು ಪತಿ ಜಯಾನಂದ್ ಮಾತ್ರ ಬದುಕುಳಿದಿದ್ದಾರೆ..
ಫ್ಯಾಕ್ಟರಿ ನಡೆಸುತ್ತಿದ್ದ ಕುಟುಂಬಕ್ಕೆ ಲಾಸ್;
ಈ ಕುಟುಂಬಕ್ಕೆ ಫ್ಯಾಕ್ಟರಿ ಒಂದಿತ್ತು.. ಆದ್ರೆ ಅದರಲ್ಲಿ ತುಂಬಾ ಲಾಸ್ ಆಗಿತ್ತು.. ಹೀಗಾಗಿ ಅದನ್ನು ಮುಚ್ಚಲಾಗಿತ್ತು… ಫ್ಯಾಕ್ಟರಿಯಲ್ಲಿ ಲಾಸ್ ಆಗಿದ್ದರಿಂದಾಗಿ ಸಾಲ ಹೆಚ್ಚಾಗಿತ್ತು. ಸಾಲಗಾರರ ಕಾಟ ತುಂಬಾನೇ ಜಾಸ್ತಿಯಾಗಿತ್ತು.. ಮನೆಯ ಯಜಮಾನ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಇಬ್ಬರು ಮಕ್ಕಳಲ್ಲಿ ಒಬ್ಬ ನಿಶ್ಚಿತ್ ಹ್ಯಾಂಡಿಕ್ಯಾಪ್ ಆಗಿದ್ದು, ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ.. ಮತ್ತೊನ್ನ ಮಗ ನಾಲ್ಕೈದು ತಿಂಗಳಿಂದ ಕೆಲಸವಿಲ್ಲದೆ ಮನೆಯಲ್ಲಿದ್ದ… ತಾಯಿ ಸುಕನ್ಯಾ ಅವರು ಮಾತ್ರ ಮಕ್ಕಳಿಗೆ ಟ್ಯೂಷನ್ ಹೇಳಿಕೊಂಡು ಮನೆ ನಡೆಸುತ್ತಿದ್ದರು.. ಆದ್ರೆ ಅದೇನಾಯ್ತೋ ಏನೋ ಇಂದು ಮುಂಜಾನೆ 6 ಗಂಟೆ ಸಮಯದಲ್ಲಿ ಮೂವರೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ; ಮನೆಯಲ್ಲೇ ತಯಾರಿಸಬಹುದು ಪ್ರೊಟೀನ್ ಪೌಡರ್
ಸಾಲಗಾರರ ಕಾಟ ತಾಳದೇ ಆತ್ಮಹತ್ಯೆ ಮಾಡಿಕೊಂಡರಾ..?
ಫ್ಯಾಕ್ಟರಿ ಲಾಸ್ ಆಗಿದ್ದರಿಂದ ಸಾಲ ಹೆಚ್ಚಾಗಿತ್ತು. ಸಾಲ ಕೊಟ್ಟವರು ಮನೆ ಮುಂದೆ ಬರುತ್ತಿದ್ದರು.. ಆದ್ರೆ ದುಡಿಯುತ್ತಿದ್ದದ್ದು ಮನೆ ನಡೆಸುವುದಕ್ಕೇ ಸಾಕಾಗುತ್ತಿರಲಿಲ್ಲ. ಒಂದು ಮನೆಯ ಯಜಮಾನ ಅನಾರೋಗ್ಯಕ್ಕೀಡಾಗಿದ್ದಾರೆ.. ಒಬ್ಬ ಮಗ ಕೆಲಸ ಕಳೆದುಕೊಂಡು ಮನೆ ಸೇರಿದ್ದಾನೆ.. ತಾಯಿ ಟ್ಯೂಷನ್ ಹೇಳಿ ಬಂದ ಅಲ್ಪ ಹಣದಲ್ಲೇ ಮನೆ ನಡೆಯಬೇಕು.. ವಿಕಲಚೇತನ ಮಗ ಸ್ವಲ್ಪ ಹಣ ದುಡಿಯುತ್ತಿದ್ದ.. ಇದರಿಂದ ಸಾಲ ತೀರಿಸೋದಕ್ಕೆ ಸಾಧ್ಯವಾಗುತ್ತಿರಲಿಲ್ಲ.. ಆದ್ರೆ ಸಾಲಗಾರರು ಹಣ ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಮೂವರೂ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.. ಈ ಬಗ್ಗೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ… ಘಟನೆಗೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಬೇಕಿದೆ..
ಇದನ್ನೂ ಓದಿ; ಲೋಕಸಭಾ ಚುನಾವಣೆ; ಇಂದಿನಿಂದ ಮೊದಲ ಹಂತದ ನಾಮಪತ್ರ ಸಲ್ಲಿಕೆ