Politics

ಚುನಾವಣೆ ಬಳಿಕ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ತಾರೆ; ಮಾಜಿ ಸಚಿವ ಈಶ್ವರಪ್ಪ

ಶಿವಮೊಗ್ಗ; ಶಿವಮೊಗ್ಗ ಬಿಜೆಪಿಯಲ್ಲಿ ಸಮರ ಈಗಲೂ ಮುಂದುವರೆದಿದೆ.. ಮಗನಿಗೆ ಟಿಕೆಟ್‌ ನೀಡದಿದ್ದಕ್ಕೆ ಬಿಜೆಪಿ ನಾಯಕರು ಈಶ್ವರಪ್ಪ ಅವರು ಪಟ್ಟು ಸಡಿಲಿಸದೆ ಕುಳಿತಿದ್ದಾರೆ.. ಶಿವಮೊಗ್ಗ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಯಡಿಯೂರಪ್ಪ ಮಗ ರಾಘವೇಂದ್ರಗೆ ಸೋಲುಣಿಸಲು ಈಶ್ವರಪ್ಪ ರೆಡಿಯಾಗಿದ್ದಾರೆ.. ಈ ನಡುವೆ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.. ಇಂದು ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ಲೋಕಸಭಾ ಚುನಾವಣೆಯ ನಂತರ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ; ಪಕ್ಕದ ಮನೆ ದಂಪತಿ ಸರಸ ಸಲ್ಲಾಪ ನೋಡೋಕೆ ಆಗ್ತಿಲ್ಲ; ಬೆಂಗಳೂರು ಮಹಿಳೆಯಿಂದ ವಿಚಿತ್ರ ದೂರು

ಶಿವಮೊಗ್ಗದಲ್ಲಿ ಗೆಲ್ಲೋದು ನಾನೇ ಎಂದ ಈಶ್ವರಪ್ಪ;

ಶಿವಮೊಗ್ಗದಲ್ಲಿ ಮಾತನಾಡಿರುವ ಈಶ್ವರಪ್ಪ ಅವರು ತಮ್ಮ ಮಗನಿಗೆ ಹಾವೇರಿಯಿಂದ ಟಿಕೆಟ್‌ ಕೈತಪ್ಪಿದ್ದಕ್ಕೆ ಆಕ್ರೋಶ ಹೊರಹಾಕಿದರು.. ನಾನು ರೆಬೆಲ್‌ ಆಗಿದ್ದಕ್ಕೆ ಕಾಂತೇಶ್‌ಗೆ ಪರಿಷತ್‌ ಸ್ಥಾನ ಹಾಗೂ ನನ್ನನ್ನು ರಾಜ್ಯಪಾಲರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದರು.. ಆದ್ರೆ ನನಗೆ ಯಾವುದೇ ಸ್ಥಾನಮಾನ ಬೇಡ.. ಬಿಜೆಪಿ ಪಕ್ಷ ಉಳಿಯಬೇಕು.. ಅದಕ್ಕಾಗಿ ನಾನು ಅಖಾಡಕ್ಕಿಳಿದಿದ್ದೇನೆ.. ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ಚುನಾವಣೆ ನಂತರ ವಿಜಯೇಂದ್ರ ಅವರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹೋಗುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ; ಶುಕ್ರವಾರ ಬಿಜೆಪಿಯ ಉಳಿದ 5 ಕ್ಷೇತ್ರಗಳ ಪಟ್ಟಿ ರಿಲೀಸ್‌; ಯಾರು ಆ ಅಭ್ಯರ್ಥಿಗಳು..?

ನನಗೆ ಸ್ಥಾನಮಾನ ಬೇಡ ಎಂದ ಬಿ.ವೈ.ವಿಜಯೇಂದ್ರ;

ಒಂದು ಈಶ್ವರಪ್ಪ ನಾನು ಪಕ್ಷ ಉಳಿಸಲು ಸ್ಪರ್ಧೆ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ.. ಯಡಿಯೂರಪ್ಪ ಅವರ ಕುಟುಂಬದಿಂದ ಬಿಜೆಪಿಗೆ ತೊಂದರೆಯಾಗುತ್ತಿದೆ ಎನ್ನುತ್ತಿದ್ದಾರೆ.. ಲೋಕಸಭಾ ಚುನಾವಣೆ ನಂತರ ವಿಜಯೇಂದ್ರ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುತ್ತಿದ್ದಾರೆ.. ಆದ್ರೆ ಇತ್ತ ವಿಜಯೇಂದ್ರ ಹೇಳೋದೇ ಬೇರೆ.. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿರುವ ವಿಜಯೇಂದ್ರ ಅವರು, ಈಶ್ವರಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡೋದಕ್ಕೆ ಹೋಗೋದಿಲ್ಲ ಎನ್ನುತ್ತಲೇ ಮಾತನಾಡಿದ್ದಾರೆ. ಒಂದು ಅವಧಿಗೆ ನನ್ನನ್ನು ನೇಮಕ ಮಾಡಿದ್ದಾರೆ ಅಂದುಕೊಂಡಿದ್ದೇನೆ. ನನಗೆ ಸ್ಥಾನಮಾನ ಬೇಡ, ಪಕ್ಷ ಉಳಿಯಬೇಕು ಮುಖ್ಯ ಅಷ್ಟೇ ಅಂತ ವಿಜಯೇಂದ್ರ ಕೂಡಾ ಹೇಳಿದ್ದಾರೆ.. ಆದ್ರೆ ಯಾರಿಂದ ಪಕ್ಷ ಉಳಿಯುತ್ತೋ ಗೊತ್ತಿಲ್ಲ..

ಇದನ್ನೂ ಓದಿ; ಒಂದೇ ಕುಟುಂಬದ ಮೂವರು ನಿಗೂಢ ಸಾವು; ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ್ರಾ..?

ಅಭ್ಯರ್ಥಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ;

ಇನ್ನು 9 ಕ್ಷೇತ್ರಗಳಲ್ಲಿ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದೆ.. ಹೀಗಾಗಿ ಅಭ್ಯರ್ಥಿಗಳು ಬದಲಾವಣೆಯಾಗುತ್ತಾ ಎಂಬ ಪ್ರಶ್ನೆಗೆ ವಿಜಯೇಂದ್ರ ಉತ್ತರ ಕೊಟ್ಟಿದ್ದಾರೆ. ಘೋಷಣೆಯಾಗಿರುವ ಕ್ಷೇತ್ರಗಳಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆಯಾಗೋದಿಲ್ಲ.. ಬಂಡಾಯದ ಬಗ್ಗೆ ಹೈಕಮಾಂಡ್‌ ಜೊತೆಗಿನ ಸಭೆಯಲ್ಲಿ ಚರ್ಚೆಯೇ ಆಗಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.. ಹೀಗಾಗಿ ಒಮ್ಮತದ ನಿರ್ಧಾರ ಆಗುವುದಿಲ್ಲ.. ಸ್ವಲ್ಪ ಅಸಮಾಧಾನಗಳು ಇರುತ್ತವೆ ಎಂದು ವಿಜಯೇಂದ್ರ ಇದೇ ವೇಳೆ ಹೇಳಿದ್ದಾರೆ. ಇನ್ನು ಮಾರ್ಚ್‌ 22 ರಂದು ಪ್ರಧಾನಿ ಜೊತೆ ಸಭೆ ನಡೆಯಲಿದ್ದು, ಈ ಸಭೆಯ ನಂತರ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಇಂದೇ ಕಾಂಗ್ರೆಸ್‌ ಪಟ್ಟಿ ರಿಲೀಸ್‌; ಸಚಿವರ ಮಕ್ಕಳು, ಸಂಬಂಧಿಕರಿಗೇ ಹೆಚ್ಚು ಮಣೆ?

 

Share Post