ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಅರೆಸ್ಟ್
ಬೆಂಗಳೂರು; ಬಿಗ್‌ಬಾಸ್ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆಗಿದ್ದಾರೆ. ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ವಿಚಾರವಾಗಿ ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಸೋನು ಶ್ರೀನಿವಾಸ ಗೌಡರನ್ನು ಅರೆಸ್ಟ್ ಮಾಡಿದ್ದಾರೆ. ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ನೀಡಿದ ದೂರಿನ ಮೇರೆಗೆ ಪೊಲೀಸರು ಸೋನು ಗೌಡರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ; ಒಟ್ಟು 24 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್; 12 ಕಡೆ ಮಕ್ಕಳು, ಸಂಬಂಧಿಕರಿಗೇ ಮಣೆ!
7 ವರ್ಷದ ಮಗುವನ್ನು ದತ್ತು ಪಡೆದಿದ್ದ ಸೋನು ಶ್ರೀನಿವಾಸ ಗೌಡ;
ಕೆಲ ತಿಂಗಳ ಹಿಂದೆ ಸೋನು ಶ್ರೀನಿವಾಸ ಗೌಡ ಅವರು ಏಳು ವರ್ಷದ ಮಗುವನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.. ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.. ಆದ್ರೆ ಯಾವುದೇ ಮಗುವನ್ನು ದತ್ತು ಪಡೆಯಬೇಕಾದರೆ ಕಾನೂನಿನ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.. ಸರ್ಕಾರದ ಅನುಮತಿ ಪಡೆದೇ ದತ್ತು ಪಡೆಯಬೇಕಾಗುತ್ತದೆ.. ಆದ್ರೆ ಸೋನು ಶ್ರೀನಿವಾಸ ಗೌಡ ಅವರು ಕಾನೂನು ಪಾಲಿಸದೇ ನೇರವಾಗಿ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದರು.. ಜೆಜೆ ಆಕ್ಟ್ ಪ್ರಕಾರ ಇದು ಅಪರಾಧವಾಗುತ್ತದೆ.. ಈ ಹಿನ್ನೆಲೆಯಲ್ಲಿ ಸೋನು ಶ್ರೀನಿವಾಸ ಗೌಡರನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ; Breaking; ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅರೆಸ್ಟ್
ರಾಯಚೂರು ಮೂಲದ ದಂಪತಿ ಪುತ್ರಿ ದತ್ತು;
ಸೋನು ಶ್ರೀನಿವಾಸ ಗೌಡ ಅವರು ರಾಯಚೂರು ಮೂಲದ ಕಾರ್ಮಿಕ ದಂಪತಿ ಪುತ್ರಿಯನ್ನು ದತ್ತು ಪಡೆದುಕೊಂಡಿದ್ದರು.. ಈ ಬಗ್ಗೆ ಸೋನು ಶ್ರೀನಿವಾಸ ಗೌಡ ಅವರೇ ಹೇಳಿಕೊಂಡು ವಿಡಿಯೋ ಮಾಡಿದ್ದರು.. ನಾನು ಅಪಾರ್ಟ್‌ಮೆಂಟ್‌ನ ಕೆಳಗೆ ನಾಯಿಗೆ ಬಿಸ್ಕೆಟ್ ಹಾಕುತ್ತಿದ್ದೆ.. ಈ ವೇಳೆ ಈ ಹುಡುಗಿ ಸಿಕ್ಕಿದಳು.. ಅವಳಿಗೆ ಚಾಕೋಲೇಟ್ ಕೊಡಿಸಿದರೆ, ನಂತರ ನಾವು ಶಾಪಿಂಗ್ ಮಾಡಿದೆವು. ಮನೆಗೆ ಕರೆದುಕೊಂಡು ಹೋಗಿ ಎಂದು ಆಕೆ ಕೇಳಿದಳು. ನಂತರ ನಾನು ಅವಳ ಅಮ್ಮನ ಬಳಿ ಮಗುವನ್ನು ದತ್ತು ಕೊಡುವಂತೆ ಕೇಳಿದ್ದೆ.. ಮಗುವಿನ ಅಮ್ಮ-ಅಪ್ಪನಿಗೆ ಇಬ್ಬರಿಗೂ ಇಷ್ಟವಿದೆ ದತ್ತು ಕೊಡುವುದಕ್ಕೆ… ಆದ್ರೆ ಕಾನೂನಾತ್ಮಕವಾಗಿ ದತ್ತು ಪಡೆಯವುದಕ್ಕೆ 3 ತಿಂಗಳು ಬೇಕು ಎಂದು ಸೋನುಗೌಡ ಈ ಹಿಂದೆ ಹೇಳಿದ್ದರು..
ಇದನ್ನೂ ಓದಿ; Breaking; ಕಾಂಗ್ರೆಸ್ ಎರಡನೇ ಪಟ್ಟಿ ರಿಲೀಸ್
ರಾಜ್ಯ ಮಕ್ಕಳ ಹಕ್ಕು ಘಟಕ ಮಧ್ಯ ಪ್ರವೇಶ;
ಕಾನೂನಾತ್ಮಕವಾಗಿ ದತ್ತು ಪಡೆಯುವ ಮುನ್ನವೇ ಸೋನು ಶ್ರೀನಿವಾಸ ಗೌಡ ಅವರು ಮಗುವನ್ನು ತನ್ನ ಮನೆಯಲ್ಲಿಟ್ಟುಕೊಂಡಿದ್ದರು.. ಈ ಮಾಹಿತಿ ರಾಜ್ಯ ಮಕ್ಕಳ ಹಕ್ಕು ಘಟಕಕ್ಕೆ ಗೊತ್ತಾಗಿತ್ತು.. ಹೀಗಾಗಿ ಅಧಿಕಾರಿಗಳು ಮಧ್ಯಪ್ರವೇಶ ಮಾಡಿದ್ದಾರೆ.. ಮಗುವನ್ನು ಅಕ್ರಮವಾಗಿ ಇಟ್ಟುಕೊಂಡಿರುವುದು ಖಚಿತಪಡಿಸಿಕೊಂಡ ಮೇಲೆ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಅವರು ಮಾಗಡಿ ರಸ್ತೆಯಲ್ಲಿರುವ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.. ಇದರ ಆಧಾರದ ಮೇಲೆ ಪೊಲೀಸರು ಸೋನು ಶ್ರೀನಿವಾಸ ಗೌಡ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ; ಅಂಗನವಾಡಿ ಮೊಟ್ಟೆ ಕದ್ದರು; ಇಲ್ಲಿ ಸಮಾಧಿಗಳನ್ನೇ ಧ್ವಂಸ ಮಾಡಿದರು!