Politics

ಆಂಧ್ರದಲ್ಲಿ ಚಂದ್ರಬಾಬು ಸಿಎಂ, ಪವನ್‌ ಕಲ್ಯಾಣ್‌ ಡಿಸಿಎಂ ಬಹುತೇಕ ಫಿಕ್ಸ್‌!

ಆಂಧ್ರಪ್ರದೇಶ; ಆಂಧ್ರಪ್ರದೇಶ ವಿಧಾನಸಭೆಯ 175 ಸ್ಥಾನಗಳ ಪೈಕಿ ತೆಲುಗು ದೇಶಂ ಹಾಗೂ ಜನಸೇನಾ ಮೈತ್ರಿಕೂಟ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ.. ಈ ಬಾರಿ ಆಂಧ್ರದಲ್ಲಿ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ.. ಜಗನ್‌ ಮೋಹನ್‌ ರೆಡ್ಡಿ ಮುಖಭಂಗ ಅನುಭವಿಸುತ್ತಾರೆ ಎಂದು ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ.. ಈ ಬೆನ್ನಲ್ಲೇ ಮೈತ್ರಿ ಪಕ್ಷದಲ್ಲಿ ಅಧಿಕಾರ ಹಂಚಿಕೆ ಯಾವ ರೀತಿ ಆಗುತ್ತದೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ..

175 ಸ್ಥಾನಗಳ ಪೈಕಿ ಪವನ್‌ ಕಲ್ಯಾಣ್‌ ಅವರ ಜನಸೇನಾ ಪಾರ್ಟಿ 21 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ.. ಇದರಲ್ಲಿ ಬಹುತೇಕ ಸ್ಥಾನಗಳಲ್ಲಿ ಜನಸೇನಾ ಪಾರ್ಟಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ.. ಜೊತೆಗೆ ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಾರ್ಟಿಗೆ ಇಷ್ಟೊಂದು ಜನಬೆಂಬಲ ಸಿಗೋದಕ್ಕೆ ಪವನ್‌ ಕಲ್ಯಾಣ್‌ ಅವರ ಅಭಿಮಾನಿಗಳೂ ಕಾರಣ.. ಹೀಗಾಗಿ, ಸರ್ಕಾರ ರಚನೆ ವೇಳೆ ಪವನ್‌ ಕಲ್ಯಾಣ್‌ ಅವರಿಗೆ ಪ್ರಮುಖ ಹೊದ್ದೆ ದೊರೆಯುವ ಸಾಧ್ಯತೆ ಇದೆ..

ಚಂದ್ರಬಾಬು ನಾಯ್ಡು ಸಿಎಂ ಸ್ಥಾನಕ್ಕೇರಿದರೆ, ಪವನ್‌ ಕಲ್ಯಾಣ್‌ ಡಿಸಿಎಂ ಸ್ಥಾನ ಹಾಗೂ ಒಂದು ಪ್ರಮುಖ ಮಂತ್ರಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.. ಸಮೀಕ್ಷೆಗಳಂತೆಯೇ ಫಲಿತಾಂಶ ಬಂದರೆ ಜನಸೇನಾ ಪಾರ್ಟಿಗೆ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳು ಸಿಗಲಿವೆ ಎಂದು ಹೇಳಲಾಗುತ್ತಿದೆ..

Share Post