13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ; ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಹವಾ ಜೋರು!
ನವದೆಹಲಿ; ದೇಶದ ವಿವಿಧ ರಾಜ್ಯಗಳಲ್ಲಿ ನಡೆದ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಹವಾ ಜೋರಾಗಿದೆ.. 13 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಇಂಡಿಯಾ ಕೂಟ ಮುನ್ನಡೆಯಲ್ಲಿದ್ದು, ಬಹುತೇಕ ಫಲಿತಾಂಶ ಇದೇ ರೀತಿ ಬರುವ ಸಾಧ್ಯತೆ ಇದೆ..
ಇದನ್ನೂ ಓದಿ; ಯುವಕನನ್ನು ಶೆಡ್‌ಗೆ ಕರೆಸಿ ಕೊಲೆ ಮಾಡಿ ಕಾರಿನ ಜೊತೆ ಬೆಂಕಿ ಇಟ್ಟರು!
ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಹಿಮಾಚಲ, ತಮಿಳುನಾಡು, ಪಂಜಾಬ್ ಹಾಗೂ ಉತ್ತರಾಖಂಡ್‌ನಲ್ಲಿ ಉಪ ಚುನಾವಣೆ ನಡೆದಿದೆ.. ಹಿಮಾಚಲದಲ್ಲಿ ಮೂರು, ಮಧ್ಯಪ್ರದೇಶದ 1 ಹಾಗೂ ಜಾರ್ಖಂಡ್‌ನಲ್ಲಿ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.. ಪಶ್ಚಿಮ ಬಂಗಾಳದಲ್ಲಿ ನಾಲ್ಕು ಕ್ಷೇತ್ರಗಳಲ್ಲೂ ಟಿಎಂಸಿ ಮುನ್ನಡೆಯಲ್ಲಿದೆ.. ಇನ್ನು ಪಂಜಾಬ್‌ನ ಜಲಂಧರ್‌ನಲ್ಲಿ ಆಪ್ ಅಭ್ಯರ್ಥಿ 37 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.. ತಮಿಳುನಾಡಿನ ಒಂದು ಕ್ಷೇತ್ರದಲ್ಲಿ ಡಿಎಂಕೆ ಪಕ್ಷದ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ.. ಬಿಹಾರದಲ್ಲಿ ಮಾತತ್ರ ಎನ್‌ಡಿಎ ಮೈತ್ರಿಕೂಟದ ಜೆಡಿಯು ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ..
ಇದನ್ನೂ ಓದಿ; ಅಂಬಾನಿ ಪುತ್ರನ ಮದುವೆಯಲ್ಲಿ ಹೊಸ ಲುಕ್‌ನಲ್ಲಿ ಕಂಡ ನಟ ಯಶ್