CrimeDistricts

ಗರ್ಭಿಣಿಯನ್ನು ಉಸಿರುಗಟ್ಟಿಸಿ ಕೊಂದರಾ..?; ರೀಲ್ಸ್‌ ಮಾಡುತ್ತಿದ್ದ ಯುವತಿ ಸತ್ತಿದ್ದು ಹೇಗೆ..?

ಬೆಳಗಾವಿ; ರೀಲ್ಸ್‌ ಮಾಡುತ್ತಾ ಹೆಸರು ಮಾಡಿದ್ದ ಗರ್ಬಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.. ಮೈಸೂರು ಮೂಲದ 22 ವರ್ಷ ಮಂಜುಳಾ ಎಂಬಾಕೆಯೇ ಸಾವನ್ನಪ್ಪಿದಾಕೆ. ಬೆಳಗಾವಿಯ ಮಚ್ಚೆ ಮೂಲಕ ಬಾಳೇಶ ಎಂಬಾತನಿಗೆ ಮಂಜುಳಾಳನ್ನು ಕೊಟ್ಟು ಮದುವೆ ಮಾಡಲಾಗಿತ್ತು.. ಆಕೆ ನಾಲ್ಕು ತಿಂಗಳ ಗರ್ಬಿಣಿಯಾಗಿದ್ದಳು ಎಂದು ತಿಳಿದುಬಂದಿದೆ..
ಮಂಜುಳಾಗೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡುವ ಹುಚ್ಚಿತ್ತು.. ಇನ್ಸ್ಟಾಟದಲ್ಲೇ ಈ ಬಾಳೇಶನ ಪರಿಚಯವಾಗಿತ್ತು.. ಒಂದೂವರೆ ವರ್ಷದ ಹಿಂದೆ ಮಂಜುಳಾ ಮನೆಯವರ ವಿರೋಧದ ನಡುವೆಯೂ ಬಾಳೇಶನನ್ನು ಮದುವೆಯಾಗಿದ್ದಳು.. ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಳೇಶನ ಜೊತೆ ಮಂಜುಳಾ ವಾಸವಿದ್ದರು.. ಆದ್ರೆ ಆಕೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾಳೆ.. ಮಂಜುಳಾ ಪೋಷಕರು ಮಾತ್ರ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.. ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ..

Share Post