Loksabha; ರಾಜ್ಯಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ; ಮಾರ್ಚ್ 15-19ರವರೆಗೆ ಭರ್ಜರಿ ಕ್ಯಾಂಪೇನ್
ನವದೆಹಲಿ; ಲೋಕಸಭಾ ಅಖಾಡ ಬೇಸಿಗೆಯಷ್ಟೇ ಬಿಸಿಯೇರುತ್ತಿದೆ.. ಇನ್ನೇನು ಎರಡೂ ಮೂರು ದಿನದಲ್ಲಿ ಚುನಾವಣಾ ದಿನಾಂಕ ಕೂಡಾ ಕೂಡಾ ಘೋಷಣೆಯಾಗಲಿದೆ.. ಅಷ್ಟರೊಳಗೆ ಬಹುತೇಕ ಎಲ್ಲಾ ಪಕ್ಷಗಳ ಕ್ಯಾಂಡಿಡೇಟ್‌ಗಳ ಲಿಸ್ಟ್ ಕೂಡಾ ಅನೌನ್ಸ್ ಆಗಿರುತ್ತೆ.. ಹೀಗಾಗಿ ಈ ವಾರದ ಕೊನೆಯಿಂದ ಚುನಾವಣಾ ರ್ಯಾಲಿಗಳು, ಬಹಿರಂಗ ಸಭೆಗಳ ದರ್ಬಾರ್ ಜೋರಾಗಿರುತ್ತೆ.. ಎಲ್ಲರಿಗಿಂತ ಮೊದಲೇ 195 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದ ಬಿಜೆಪಿ ಪ್ರಚಾರದಲ್ಲೂ ಮುಂದಿದೆ.. ಪ್ರಧಾನಿ ನರೇಂದ್ರ ಮೋದಿ ಆಗಲೇ ಪ್ರಚಾರಕ್ಕೆ ರೆಡಿಯಾಗಿಬಿಟ್ಟಿದ್ದಾರೆ. ಪ್ರಧಾನಿ ಮೋದಿ ಈ ಬಾರಿ ದಕ್ಷಿಣ ಭಾರತದಿಂದ ಪ್ರಚಾರ ಶುರು ಮಾಡುತ್ತಿದ್ದಾರೆ.
ಇದಕ್ಕೂ ಮೋದಿ; ಬೆಂಗ್ಳೂರಲ್ಲಿ ಪ್ರಭಾಸ್-ಅಲ್ಲು ಅರ್ಜುನ್ ಫ್ಯಾನ್ಸ್ ಕಿತ್ತಾಟ; ಓರ್ವನಿಗೆ ಹಿಗ್ಗಾಮುಗ್ಗಾ ಥಳಿತ!
5 ದಿನಗಳ ಕಾಲ ದಕ್ಷಿಣದಲ್ಲಿ ಪ್ರಧಾನಿ ಪ್ರಚಾರ;
5 ದಿನಗಳ ಕಾಲ ದಕ್ಷಿಣದಲ್ಲಿ ಪ್ರಧಾನಿ ಪ್ರಚಾರ; ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಭಾರತದಲ್ಲಿ ಐದು ದಿನಗಳ ಪ್ರಚಾರ ಸಭೆಗಳು, ರ್ಯಾಲಿಗಳು, ರೋಡ್ ಶೋಗಳನ್ನು ನಡೆಸಲಿದ್ದಾರೆ. ಅದಕ್ಕಾಗಿ ದಿನಾಂಕ, ಸ್ಥಳಗಳ ಪಟ್ಟಿಯೂ ರೆಡಿಯಾಗಿದೆ. ಕರ್ನಾಟಕದಲ್ಲೂ ನಾಲ್ಕು ದಿನಗಳ ಕಾಲ ಪ್ರಚಾರದಲ್ಲಿ ತೊಡಗಲಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚಿನ ಆಸಕ್ತಿ ಇರೋದು ಕರ್ನಾಟಕ. ಯಾಕಂದ್ರೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.. ಇನ್ನು ಇಲ್ಲಿಯೇ ಹೆಚ್ಚಿನ ಲೋಕಸಭಾ ಸೀಟುಗಳು ಕೂಡಾ ಬಿಜೆಪಿಗೆ ಬರಲಿವೆ.. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಮೇಲೆ ವಿಶೇಷ ಕಾಳಜಿ ವಹಿಸಿದ್ದಾರೆ. ಪ್ರಧಾನಿ ಮೋದಿಯವರು ಮಾರ್ಚ್ 15 ರಿಂದ 19ರವರೆಗೆ ದಕ್ಷಿಣ ಭಾರತದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಇದರಲ್ಲಿ ನಾಲ್ಕು ದಿನ ಕರ್ನಾಟಕದಲ್ಲೂ ಅವರು ಪ್ರಚಾರ ಸಭೆಗಳನ್ನು ಮಾಡಲಿದ್ದಾರೆ.
ಇದನ್ನೂ ಓದಿ;ಮೈಸೂರು-ಕೊಡಗು ಲೋಕಸಭಾ; ಶೃಂಗೇರಿಗೆ ಭೇಟಿ ನೀಡಿದ ಯದುವೀರ್!
ಪ್ರಧಾನಿ ನರೇಂದ್ರ ಮೋದಿ ಪ್ರವಾಸ;
ಮಾರ್ಚ್ 15 : ಕೋಲಾರ, ಸೇಲಂ, ಪಾಲಕ್ಕಾಡ್
ಮಾರ್ಚ್ 16 : ಕನ್ಯಾಕುಮಾರಿ, ವಿಶಾಖಪಟ್ಟಣಂ, ಜಹೀರಾಬಾದ್
ಮಾರ್ಚ್ 17 : ಪತ್ತನಂತ್ತಿಟ್ಟ, ಶಿವಮೊಗ್ಗ, ಅಮರಾವತಿ
ಮಾರ್ಚ್ 18 : ಮಲ್ಕಾಜ್ಗಿರಿ, ಬೀದರ್, ಕೊಯಮತ್ತೂರು
ಮಾರ್ಚ್ 19: ನಾಗರ್ ಕರ್ನೂಲ್, ಧಾರವಾಡ, ಏಲೂರು
ಇದನ್ನೂ ಓದಿ;ಇಂದೇ ಬಿಜೆಪಿ ಎರಡನೇ ಪಟ್ಟಿ ರಿಲೀಸ್; ರಾಜ್ಯದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್!
ಐದು ಕ್ಷೇತ್ರಕ್ಕೊಂದು ಕಡೆ ಪ್ರಚಾರ ಸಭೆ;
ಐದು ಕ್ಷೇತ್ರಕ್ಕೊಂದು ಕಡೆ ಪ್ರಚಾರ ಸಭೆ; ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮೊದಲ ಹಂತದಲ್ಲಿ ಪ್ರಚಾರ ಸಭೆಗಳನ್ನು ಮಾಡಲಿದ್ದಾರೆ.. ಅಂದರೆ ಐದು ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರನ್ನು ಒಂದು ಕಡೆ ಸೇರಿ ಬಹಿರಂಗ ಸಭೆ ಹಾಗೂ ರ್ಯಾಲಿಗಳನ್ನು ನಡೆಸಲಾಗುತ್ತಿದೆ. ಮಾರ್ಚ್ 15ರಂದು ಕೋಲಾರದಿಂದ ಅವರ ರ್ಯಾಲಿ ಶುರುವಾಗಲಿದೆ. ಈ ವೇಳೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ ಕ್ಷೇತ್ರಗಳ ಕಾರ್ಯಕರ್ತರನ್ನು ಸೇರಿಸಲಾಗುತ್ತದೆ. ಇನ್ನು ಮಾರ್ಚ್ 17ರಂದು ಶಿವಮೊಗ್ಗದಲ್ಲಿ ಮೋದಿ ಭಾರಿ ಬಹಿರಂಗ ಸಭೆ ನಡೆಸಲಿದ್ದಾರೆ. ಇದಕ್ಕೆ ಶಿವಮೊಗ್ಗ ಸುತ್ತಮುತ್ತಲಿನ ಐದು ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರನ್ನು ಸೇರಿಸಲಾಗುತ್ತದೆ. ಇದಲ್ಲದೆ ಬೀದರ್, ಧಾರವಾಡದಲ್ಲೂ ಮೋದಿ ಪ್ರಚಾರ ಭಾಷಣಗಳನ್ನು ಮಾಡಲಿದ್ದಾರೆ. ಇಲ್ಲಿಗೆ ಸುತ್ತಲಿನ ಐದು ಲೋಕಸಭಾ ಕ್ಷೇತ್ರದ ಜನರನ್ನು ಸೇರಿ ಮತ ಬೇಟೆ ನಡೆಸಲಾಗುತ್ತಿದೆ.
ಇದನ್ನೂ ಓದಿ; ಪುನೀತ್ ರಾಜ್‌ಕುಮಾರ್ ನೆನೆದು ಕಣ್ಣೀರು ಹಾಕಿದ ಸದ್ಗುರು ಜಗ್ಗಿ ವಾಸುದೇವ್!
ಇದಕ್ಕೂ ಮೊದಲು ಗುಜರಾತ್, ರಾಜಸ್ಥಾನದಲ್ಲಿ ಪ್ರಚಾರ;
ಇದಕ್ಕೂ ಮೊದಲು ಗುಜರಾತ್, ರಾಜಸ್ಥಾನದಲ್ಲಿ ಪ್ರಚಾರ; ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಭಾರತದಲ್ಲಿ ಪ್ರಚಾರ ಶುರು ಮಾಡುವ ಮೊದಲು ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 12 ರಿಂದ 14ರ ವರೆಗೆ ಮೂರು ದಿನಗಳ ಕಾಲ ಮೋದಿಯವರು ಮೊದಲ ಹಂತವಾಗಿ ಗುಜರಾತ್ ಹಾಗೂ ರಾಜಸ್ಥಾನಗಳಲ್ಲಿ ಪ್ರಚಾರ ರ್ಯಾಲಿಗಳನ್ನು ಮಾಡಲಿದ್ದಾರೆ.
ಇದನ್ನೂ ಓದಿ; ಅಕ್ಕಿ ಒಳ್ಳೆಯದಾ..? ಗೋಧಿ ಒಳ್ಳೆಯದಾ..?; ಯಾವುದು ದೇಹಕ್ಕೆ ಉತ್ತಮ.?