HealthNational

ದೇಶದಲ್ಲಿ ಕೊವಿಡ್‌ ಪ್ರಕರಣ ಹೆಚ್ಚಳ; 24 ಗಂಟೆಯಲ್ಲಿ 621 ಬಲಿ..!

ನವದೆಹಲಿ; ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಚಾಗುತ್ತಿದೆ. ಪ್ರತಿದಿನ ಪಾಸಿಟಿವಿಟಿ ರೇಟ್‌ ಜಾಸ್ತಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 8774 ಮಂದಿಗೆ ಕೊರೋನಾ ಪಾಸಿವಿಟ್‌ ಬಂದಿದೆ. ದೇಶದಲ್ಲಿ ನಿನ್ನೆ ಒಂದು ದಿನದಲ್ಲೇ ಒಟ್ಟು 621 ಮಂದಿ ಕೊವಿಡ್‌ಗೆ ಬಲಿಯಾಗಿದ್ದಾರೆ.

ಕೊವಿಡ್‌ ಎರಡನೇ ಅಲೆ ಕಡಿಮೆಯಾದ ಮೇಲೆ ಜನ ನಿಟ್ಟುಸಿರುಬಿಟ್ಟಿದ್ದರು. ಕೊರೋನಾ ದೇಶದಿಂದ ಮಾಯವಾಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೋನಾ ತಳಿ ಪತ್ತೆಯಾಗುತ್ತಿದ್ದಂತೆ ಎಲ್ಲಡೆ ಮತ್ತೆ ಆತಂಕ ಶುರುವಾಗಿದೆ.

ಈ ಬೆನ್ನಲ್ಲೇ ಮತ್ತೆ ದೇಶದಲ್ಲಿ ಕೊರೋನಾ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿವೆ. ಕರ್ನಾಟಕದಲ್ಲೂ ದಿನದಿಂದ ದಿನಕ್ಕೆ ಸೋಂಕಿತರು ಹೆಚ್ಚಾಗುತ್ತಿದ್ದಾರೆ.

Share Post