DistrictsPolitics

ಚನ್ನಪಟ್ಟಣ ಉಪಚುನಾವಣೆ; ನಿಖಿಲ್‌ ಸ್ಪರ್ಧಿಸಿದರೂ ನನ್ನ ಬೆಂಬಲ ಇರುತ್ತೆ ಎಂದ ಸೈನಿಕ!

ನವದೆಹಲಿ; ಕುಮಾರಸ್ವಾಮಿ ರಾಜೀನಾಮೆಯಿಂದಾಗಿ ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆಯಲಿದೆ.. ದಿನಾಂಕ ಇನ್ನೂ ಘೋಷಣೆಯಾಗಿಲ್ಲ.. ಆದರೂ ಈ ಹೈವೋಲ್ಟೇಜ್‌ ಕ್ಷೇತ್ರ ಚರ್ಚೆಯಲ್ಲಿದೆ.. ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್‌ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿರುವುದರಿಂದ ಈ ಕ್ಷೇತ್ರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.. ಇನ್ನೊಂದೆಡೆ ಜೆಡಿಎಸ್‌-ಬಿಜೆಪಿ ಮೈತ್ರಿ ಇರುವುದರಿಂದ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಅನ್ನೋದು ಕೂಡಾ ಕುತೂಹಲ.. ಜೆಡಿಎಸ್‌ ಅವರು ಬಿಜೆಪಿಗೆ ಈ ಕ್ಷೇತ್ರ ಬಿಟ್ಟುಕೊಟ್ಟರೆ ಸಿ.ಪಿ.ಯೋಗೇಶ್ವರ್‌ ಅವರು ಅಭ್ಯರ್ಥಿಯಾಗೋದು ಪಕ್ಕಾ.. ಒಂದು ವೇಳೆ ಜೆಡಿಎಸ್‌ ಪಕ್ಷದವರೇ ಅಭ್ಯರ್ಥಿಯಾಗೋದಾದರೆ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ..

ಇನ್ನು ಸಿ.ಪಿ.ಯೋಗೇಶ್ವರ್‌ ಅವರು ನಿನ್ನೆ ರಾತ್ರಿ ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿದ್ದಾರೆ.. ನೀವು ಸಂಪೂರ್ಣ ಒಪ್ಪಿಗೆ ಕೊಟ್ಟರೆ ಮಾತ್ರ ನಾನು ಅಭ್ಯರ್ಥಿಯಾಗುತ್ತೇನೆ.. ಇಲ್ಲದೇ ಇದ್ದರೆ ನಿಖಿಲ್‌ ಏನಾದರೂ ಅಭ್ಯರ್ಥಿಯಾಗುವುದಿದ್ದರೆ ನಾನೇ ಸಂಪೂರ್ಣ ಬೆಂಬಲ ಕೊಡುತ್ತೇನೆ.. ನೀವೇ ಮುಂದೆ ನಿಂತು ಉಪಚುನಾವಣೆ ನಡೆಸಿ. ಆದ್ರೆ ಒಂದು ವಾರದಲ್ಲಿ ಈ ಸ್ಪಷ್ಟತೆ ಕೊಡಿ ಎಂದು ಕುಮಾರಸ್ವಾಮಿಯವರಲ್ಲಿ ಯೋಗೇಶ್ವರ್‌ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ..

ಚನ್ನಪಟ್ಟಣದಲ್ಲಿ ಈಗಾಗಲೇ ಕಾಂಗ್ರೆಸ್​ ಪಕ್ಷ ತಯಾರಿ ಚುನಾವಣೆಗೆ ತಯಾರಿ ಆರಂಭಿಸಿದೆ.. ಹೀಗಾಗಿ ನಮ್ಮ ಅಭ್ಯರ್ಥಿಯನ್ನೂ ಬೇಗ ಬೇಗ ಘೋಷಿಸಿದರೆ ಸಿದ್ಧತೆ ಸುಲಭವಾಗುತ್ತದೆ ಎಂದು ಯೋಗೇಶ್ವರ್‌ ಹೇಳಿದ್ದಾರೆ.. ಇದಕ್ಕೆ ಕುಮಾರಸ್ವಾಮಿಯವರು ಮುಂದಿನ ವಾರ ಬೆಂಗಳೂರಿಗೆ ಬರುತ್ತೇನೆ. ಆಗ ಮಾತನಾಡೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ..

 

Share Post