NationalPolitics

ವಿದೇಶಕ್ಕೆ ಹಾರಿದ ರಾಹುಲ್‌ ಗಾಂಧಿ; ರಾಷ್ಟ್ರಪತಿ ಚುನಾವಣೆಗೆ ಬರ್ತಾರಾ..?

ಮುಂಬೈ; ರಾಷ್ಟ್ರಪತಿ ಚುನಾವಣೆ ಹತ್ತಿರದಲ್ಲಿರುವಾಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿದೇಶಕ್ಕೆ ಹಾರಿದ್ದಾರೆ. ಈ ಎಎನ್‌ಐ ಸಂಸ್ಥೆ ವರದಿ ಮಾಡಿದೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ರಾಹುಲ್‌ ಗಾಂಧಿ ಸಂಸದರಾಗಿರುವುದರಿಂದ ಅವರೂ ಮತದಾನ ಮಾಡಬೇಕಿದೆ. ಈಗ ಅವರು ವಿದೇಶಕ್ಕೆ ಹಾರಿದ್ದು, ಚುನಾವಣೆಗೆ ಮುನ್ನಾ ದಿನ ವಾಪಸಾಗುತ್ತಾರೆ ಎಂದು ಹೇಳಲಾಗುತ್ತಿದೆ.

 

ರಾಹುಲ್‌ ಗಾಂಧಿ ಇತ್ತೀಚೆಗೆ ಐದು ದಿನಗಳ ಕಾಲ ಇಡಿ ವಿಚಾರಣೆ ಎದುರಿಸಿದ್ದರು. ಇದಾದ ಮೇಲೆ ರಾಹುಲ್‌ ರಿಲ್ಯಾಕ್ಸ್‌ಗಾಗಿ ವಿದೇಶ ಪ್ರವಾಸ ಕೈಗೊಂಡಿದಾರೆ ಎಂದು ಹೇಳಲಾಗಿದೆ. ಆದ್ರೆ ಅವರು ಯಾವ ದೇಶಕ್ಕೆ ತೆರಳಿದ್ದಾರೆ ಅನ್ನೋದು ಮಾತ್ರ ಗೊತ್ತಾಗಿಲ್ಲ.

Share Post