Amith sha; ಜೆಡಿಎಸ್ ಮೈತ್ರಿಗೆ ಬಗ್ಗೆ ಅಪಸ್ವರ; ಎಚ್ಚರಿಕೆ ಕೊಟ್ಟ ಅಮಿತ್ ಶಾ!
ಮೈಸೂರು; ಲೋಕಸಭಾ ಚುನಾವಣೆ ಇನ್ನೇನು ಎರಡು ಮೂರು ತಿಂಗಳಲ್ಲಿ ಬರಲಿದೆ. ಅದಕ್ಕಾಗಿ ಎಲ್ಲಾ ಕಡೆ ಸಿದ್ಧತೆಗಳು ನಡೆದಿವೆ. ಹೆಚ್ಚು ಕಡಿಮೆ ಎಲ್ಲಾ ಪಕ್ಷಗಳಲ್ಲೂ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್ ಕುಡಾ ರೆಡಿಯಾಗಿದೆ. ಇತ್ತ ಬಿಜೆಪಿ ನಾಯಕರು ರಾಜ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಎರಡೂ ಪಕ್ಷಗಳ ನಡುವೆ ಹಲವು ಸುತ್ತಿನ ಮಾತುಕತೆಗಳೂ ನಡೆದಾಗಿದೆ. ರಾಜ್ಯದಲ್ಲಿ ಯಾವುದೇ ಹೋರಾಟಗಳು ನಡೆಯಲಿ, ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಮಾಡುತ್ತಿದ್ದಾರೆ. ಹೀಗಿದ್ದರೂ, ಈಗ ಮೈತ್ರಿ ಬಗ್ಗೆ ಅಪಸ್ವರ ಕೇಳಿಬಂದಿದೆ.
ಇದನ್ನೂ ಓದಿ; Siddaramaiah; ಮಿಸ್ಟರ್ ಶಾ ರಾಜ್ಯಕ್ಕೆ ಬರಿಗೈಲಿ ಬಂದಿದ್ದಾರೆ; ಸಿದ್ದರಾಮಯ್ಯ
ಮೈತ್ರಿ ಬೇಡ ಎಂದು ಅಪಸ್ವರ ಎತ್ತಿದ ಕೆಲ ನಾಯಕರು!;
ಮೈತ್ರಿ ಬೇಡ ಎಂದು ಅಪಸ್ವರ ಎತ್ತಿದ ಕೆಲ ನಾಯಕರು!; ಇಂದು ಮುಂಜಾನೆಯೇ ಮೈಸೂರಿಗೆ ಬಂದಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರೆಲ್ಲಾ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಕೆಲ ನಾಯಕರು ಜೆಡಿಎಸ್ ಜೊತೆ ಮೈತ್ರಿ ಬೇಕಿತ್ತಾ..? ಮೈತ್ರಿ ಅವಶ್ಯಕತೆ ಇರಲಿಲ್ಲ ಎಂದು ಕೆಲವರು ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಅಮಿತ್ ಶಾ ಅವರು ಕೆರಳಿದ್ದಾರೆ. ಅವರಿಗೆ ಈ ರೀತಿ ಅಪಸ್ವರ ಎತ್ತದಂತೆ ಖಡಕ್ ಎಚ್ಚರಿಕೆ ಕೂಡ ಆ ಕೊಟ್ಟಿದ್ದಾರೆ ಎನ್ನಲಾಗಿದೆ.
ಈಗಾಗಲೇ ದೆಹಲಿಯಲ್ಲಿ ಮಾತುಕತೆ ಆಗಿದೆ. ಸೀಟು ಹಂಚಿಕೆ ಬಗ್ಗೆಯೂ ಬಹುತೇಕ ಮಾತುಕತೆ ಮುಗಿದಿದೆ. ಇಂತಹ ಸಂದರ್ಭದಲ್ಲಿ ಅಪಸ್ವರ ಎತ್ತುವುದು ಸರಿಯಲ್ಲ. ಎರಡೂ ಪಕ್ಷಗಳೂ ಒಟ್ಟಾಗಿ ನಡೆಯಬೇಕು ಎಂದು ಅಮಿತ್ ಶಾ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ; Amith Sha in Mysore; ಮೈಸೂರಿನಲ್ಲಿ ಅಮಿತ್ ಹೈ ವೋಲ್ಟೇಜ್ ಮೀಟಿಂಗ್!
ಕೋರ್ ಕಮಿಟಿ ಸಭೆಯಲ್ಲಿ ಏನು ನಡೀತು?
ಮೈಸೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೆಲ ಬಿಜೆಪಿ ನಾಯಕರು, ಬಿಜೆಪಿಗೆ ಒಳ್ಳೆಯ ವಾತಾವರಣವಿದೆ. ಹೀಗಾಗಿ ಜೆಡಿಎಸ್ ಜೊತೆ ಹೊಂದಾಣಿಕೆ ಯಾಕೆ ಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಉತ್ತರ ಕೊಟ್ಟಿರುವ ಅಮಿತ್ ಶಾ, ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದ್ದವು. ಈ ವೇಳೆ ಕೂಡಾ ಅವರ ಪಕ್ಷಗಳಲ್ಲಿ ಇಂತಹದ್ದೇ ಅಪಸ್ವರಗಳು ಕೇಳಿಬಂದಿದ್ದವು. ಹೀಗಾಗಿ, ಹೊಂದಾಣಿಕೆ ಮಾಡಿಕೊಂಡರೂ, ಅವರು ಒಟ್ಟಾಗಿ ಚುನಾವಣೆ ಎದುರಿಸಲಿಲ್ಲ. ಇದರಿಂದಾಗಿ ಎರಡೂ ಪಕ್ಷಗಳೂ ಹೀನಾಯವಾಗಿ ಸೋತವು. ಹೀಗಾಗಿ, ಅಪಸ್ವರಗಳು ಯಾರೂ ಎತ್ತಬಾರದು. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಖಡಕ್ ಆಗಿ ಅಮಿತ್ ಶಾ ಸೂಚನೆ ಕೊಟ್ಟಿದಾರೆ ಎನ್ನಲಾಗಿದೆ.
ಮೈತ್ರಿಗೆ ಧಕ್ಕೆಯಾಗುವ ಯಾವ ಹೇಳಿಕೆಯೂ ಬರಬಾರದು;
ಯಾರಾದರೂ ಅಪಸ್ವರ ಎತ್ತಿದರೆ ಮೈತ್ರಿಗೆ ಧಕ್ಕೆ ಆಗುತ್ತದೆ. ಚುನಾವಣೆ ಹತ್ತಿರವಿರುವಾಗ ಇದರಿಂದ ನಮಗೆ ನಷ್ಟವೇ ಹೆಚ್ಚು. ಯಾರೂ ಕೂಡಾ ಅಪದ್ವರದ ಮಾತುಗಳನ್ನು ಆಡಬಾರದು. ನಾವು ಎಲ್ಲವನ್ನೂ ವಿಚಾರ ಮಾಡಿಯೇ ಮೈತ್ರಿಗೆ ಒಪ್ಪಿಗೆ ಕೊಟ್ಟಿದ್ದೇವೆ. ಎಲ್ಲಾ ಮಾತುಕತೆಗಳೂ ಆದ ಮೇಲೆ ಅಪಸ್ವರ ಎತ್ತುವುದು ಸರಿಯಲ್ಲ. ಎಲ್ಲರೂ ಒಟ್ಟಾಗಿ ಹೋಗಿ ಎಂದು ಅಮಿತ್ ಶಾ ಸೂಚಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.
ಇದನ್ನೂ ಓದಿ; Amith Sha; ಇಂದು ಮೈಸೂರಿಗೆ ಅಮಿತ್ ಶಾ, ನಾಳೆ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಅಂತಿಮ ತೀರ್ಮಾನ!
ಸಭೆಯಲ್ಲಿ ಯಾರ್ಯಾರಿದ್ದರು..?
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಡಿ.ವಿ ಸದಾನಂದಗೌಡ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಂಸದ ಪ್ರತಾಪ್ ಸಿಂಹ, ಶ್ರೀರಾಮುಲು, ರಾಮದಾಸ್ ಮುಂತಾದವರಿದ್ದರು. ಮೊನ್ನೆ ಸಿದ್ದರಾಮಯ್ಯ ಅವರೊಂದಿಗೆ ಕಾಣಿಸಿಕೊಂಡಿದ್ದ ಮಾಜಿ ಸಚಿವ ನಾರಾಯಣಗೌಡ ಕೂಡಾ ಸಭೆಯಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದರು.