Politics

44 ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮ-ಮಂಡಳಿ ಸ್ಥಾನ; ಸಾಧು ಕೋಕಿಲಗೂ ಸಿಕ್ತು ಹುದ್ದೆ

ಬೆಂಗಳೂರು; ಲೋಕಸಭಾ ಚುನಾವಣೆಗೂ ಮುಂಚೆ ಶಾಸಕರು ಹಾಗೂ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನ ನೀಡಲು ಸಿಎಂ ಹಾಗೂ ಡಿಸಿಎಂ ಸರ್ಕಸ್‌ ನಡೆಸಿದ್ದರು. ಕಳೆದ ತಿಂಗಳಷ್ಟೇ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಹಂಚಿಕೆ ಮಾಡಲಾಗಿತ್ತು. ಇದೀಗ 44 ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ನೀಡಲಾಗಿದೆ. ಹಲವು ನಿಗಮ ಮಂಡಳಿಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಕೌಶಲ್ಯಾಭಿವೃದ್ಧಿ. ಕ್ರೀಡಾ ಪ್ರಾಧಿಕಾರ, ಚಲನಚಿತ್ರ ಮಂಡಳಿ, ನಗರಾಭಿವೃದ್ಧಿ ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಘೋಷಿಸಲಾಗಿದೆ.

ಇದನ್ನೂ ಓದಿ; Vidyabalan; ನಟಿ ವಿದ್ಯಾಬಾಲನ್‌ಗೆ ಕಿರಿಕಿರಿ ಮಾಡಿದ ವ್ಯಕ್ತಿ; ವಿಡಿಯೋ ಇದೆ!

ವಿಧಾನಸಭಾ ಚುನಾವಣೆ ವೇಳೆ ಸಂಗೀತ ನಿರ್ದೇಶಕ ಹಾಗೂ ನಟ ಸಾಧು ಕೋಕಿಲ ಕಾಂಗ್ರೆಸ್‌ ಪಕ್ಷಕ್ಕೆ ಸೇರಿ, ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದರು. ಹೀಗಾಗಿ ಅವರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಅವರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ; Vidyabalan; ನಟಿ ವಿದ್ಯಾಬಾಲನ್‌ಗೆ ಕಿರಿಕಿರಿ ಮಾಡಿದ ವ್ಯಕ್ತಿ; ವಿಡಿಯೋ ಇದೆ!

ಯಾರಿಗೆ ಯಾವ ನಿಗಮ-ಮಂಡಳಿ ಸ್ಥಾನ..?
=========================
ನಾಗಲಕ್ಷ್ಮಿ ಚೌಧರಿ – ಅಧ್ಯಕ್ಷರು, ಮಹಿಳಾ ಆಯೋಗ
ಮರಿಗೌಡ – ಅಧ್ಯಕ್ಷರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ವಿನೋದ್ ಅಸೂಟಿ – ಉಪಾಧ್ಯಕ್ಷ, ಕ್ರೀಡಾ ಪ್ರಾಧಿಕಾರ
ಸರೋವರ ಶ್ರೀನಿವಾಸ್ – ಅಧ್ಯಕ್ಷ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಅಲ್ತಾಫ್ – ಅಧ್ಯಕ್ಷ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ
ಕಾಂತಾ ನಾಯಕ್ – ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ ನಿಗಮ
ಎಚ್.ಎಂ. ರೇವಣ್ಣ – ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ
ಆಂಜನೇಯಲು – ಅಧ್ಯಕ್ಷ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
ಮಂಜುನಾಥ್ ಗೌಡ – ಮಲೆನಾಡು ಪ್ರಾಧಿಕಾರ
ಸುಂದರೇಶ್ – ಶಿವಮೊಗ್ಗ ಅಭಿವೃದ್ಧಿ ಪ್ರಾಧಿಕಾರ
ಮಂಡ್ಯ ಡಾ.ಹೆಚ್ ಕೃಷ್ಣ – ಆಹಾರ ನಿಗಮ
ಪಲ್ಲವಿ – ಸಾಂಬಾರು ಮಂಡಳಿ
ಜಯಸಿಂಹ- ಬ್ರಾಹ್ಮಣ ಅಭಿವೃದ್ಧಿ ಮಂಡಳಿ
ವಿಜಯ್​ ಕೆ ಮುಳುಗುಂದ್​- ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ
ಮರಿಸ್ವಾಮಿ ಚಾಮರಾಜನಗರ- ಅಧ್ಯಕ್ಷರು ಕಾಡಾ, ಮೈಸೂರು
ಸದಾಶಿವ್​ ಉಲ್ಲಾಳ್​- ಮಂಗಳೂರು ನಗರಾಭಿಮೃದ್ಧಿ ಪ್ರಾಧಿಕಾರ
ರಘನಂದನ್​ ರಾಮಣ್ಣ- ಬೆಂಗಳೂರು ಮೈಸೂರು ಇನ್ಫಾಸ್ಟ್ರಕ್ಚರ್​ ಕಾರಿಡಾರ್​ ಪ್ರದೇಶ ಯೋಜನೆ ಪ್ರಾಧಿಕಾರ
ಬಸವರಾಜ್​ ಜಾಬಶೆಟ್ಟಿ- ಬೀದರ್​ ನಗರಾಭಿವೃದ್ಧಿ ಪ್ರಾಧಿಕಾರ
ಸಾಧು ಕೋಕಿಲ- ಕರ್ನಾಟಕ ಚಲನಚಿತ್ರ ಅಕಾಡೆಮಿ

ಇದನ್ನೂ ಓದಿ; Pushpa-2; ಆ ಒಂದು ಸೀನ್‌ಗಾಗಿ 50 ಕೋಟಿ ಖರ್ಚು ಮಾಡಿದರಾ..?

Share Post