Politics

Siddaramaiah; ಮಿಸ್ಟರ್‌ ಶಾ ರಾಜ್ಯಕ್ಕೆ ಬರಿಗೈಲಿ ಬಂದಿದ್ದಾರೆ; ಸಿದ್ದರಾಮಯ್ಯ

ಬೆಂಗಳೂರು; ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡದಿದ್ದಕ್ಕೆ ರಾಜ್ಯ ಸರ್ಕಾರ ನಾಯಕರು ಕೇಂದ್ರದ ವಿರುದ್ಧ ಮುಗಿಬಿದ್ದಿದ್ದಾರೆ. ಈ ನಡುವೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸಿದ್ದಾರೆ. ಮೈಸೂರಿನ ಸುತ್ತೂರು ಮಠದ ಕಾರ್ಯಕ್ರಮಕ್ಕೆ ಆಗಮಿಸಿರುವ ಅವರು, ಮೈಸೂರಿನಲ್ಲಿ ಬಿಜೆಪಿ ನಾಯಕರ ಸಭೆಯನ್ನು ಕೂಡಾ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ-ಜೆಡಿಎಸ್‌ ಮೈತ್ರಿಗೆ ಹೆಚ್ಚಿನ ಸ್ಥಾನ ಗಳಿಸಿಕೊಳ್ಳುವ ಸಂಬಂಧ ಚರ್ಚೆ ನಡೆದಿದೆ.

ಇದನ್ನೂ ಓದಿ; Maheshbabu daughter Sitara; ನಟ ಮಹೇಶ್‌ ಬಾಬು ಪುತ್ರಿ ಸಿತಾರಾ ಫೋಟೋ, ವಿಡಿಯೋ ದುರ್ಬಳಕೆ

ಅಮಿತ್‌ ಶಾ ಬರಿಗೈಲಿ ಬಂದಿದ್ದಾರೆ ಎಂದ ಸಿದ್ದರಾಮಯ್ಯ

ಹೀಗಿರುವಾಗಲೇ  ಸಿಎಂ ಸಿದ್ದರಾಮಯ್ಯ ಅವರು ಅಮಿತ್‌ ಶಾ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದೆ. ಬಹುತೇಕ ಎಲ್ಲಾ ತಾಲ್ಲೂಕಿನ ರೈತರೂ ಬರಗಾಲದಲ್ಲಿಂದ ತತ್ತರಿಸಿದ್ದಾರೆ. ಬರ ಪರಿಹಾರ ಘೋಷಣೆ ಮಾಡಬೇಕಿದ್ದ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಬರ ಪರಿಹಾರ ಘೋಷಣೆ ಮಾಡುವುದು ಬಿಟ್ಟು, ಅಮಿತ್‌ ಶಾ ಬರಿಗೈಲಿ ರಾಜ್ಯ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕೇಂದ್ರದಿಂದ ಅಧ್ಯಯನಕ್ಕಾಗಿ ಬರ ತಂಡ ಬಂದಿತ್ತು. ರಾಜ್ಯದಲ್ಲಿ ಬರ ಸಮೀಕ್ಷೆ ನಡೆಸಿ ವರದಿಯನ್ನೂ ಕೇಂದ್ರಕ್ಕೆ ಸಲ್ಲಿಸಿದೆ. ಇದಕ್ಕೆ ಗೃಹ ಸಚಿವ ಅಮಿತ್‌ ಶಾ ಅವರೇ ಅನುಮೋದನೆ ನೀಡಬೇಕು. ಅನುಮೋದನೆ ನೀಡಿದರೆ ಬರ ಪರಿಹಾರ ಘೋಣೆಯಾಗುತ್ತದೆ. ಆದ್ರೆ, ಇದಕ್ಕೆ ಅಮಿತ್‌ ಶಾ ಅವರಿಗೆ ಸಮಯವಿಲ್ಲ. ರಾಜ್ಯಕ್ಕೆ ಬಂದು ಬಿಜೆಪಿ ನಾಯಕರ ಸಭೆ ನಡೆಸೋದಕ್ಕೆ ಸಮಯವಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; Kumaraswamy; ಕುಮಾರಸ್ವಾಮಿ ಈ 6 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಗೆಲ್ತಾರಂತೆ!

ನರೇಗಾದಡಿ ಕೆಲಸದ ದಿನಗಳು 150ಕ್ಕೇರಿಸಿ!

ಇನ್ನು ರಾಜ್ಯದಲ್ಲಿ ಬರಗಾಲವಿದೆ. ಗ್ರಾಮೀಣ ಜನರು ಸಾಲ ಮಾಡಿಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಾಡೋದಕ್ಕೆ ಕೆಲಸವೂ ಇಲ್ಲ. ಹೀಗಾಗಿ, ನರೇಗಾ ಯೋಜನೆಯಡಿ ವರ್ಷಕ್ಕೆ ನೂರು ದಿನ ಕೆಲಸ ನೀಡಲಾಗುತ್ತಿತ್ತು. ಅದನ್ನು 150 ದಿನಗಳಿಘೆ ಏರಿಸಬೇಕು. ಈ ಮೂಲಕ ರೈತರಿಗೆ ನೆರವಾಗಬೇಕು. ಇದಕ್ಕಾಗಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಕೂಡಾ ಬರೆಯಲಾಗಿದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಇನ್ನೂ ಅಸ್ತು ಎಂದಿಲ್ಲ.  ರಾಜ್ಯಗಳಿಗೆ ಬರ ಪರಿಹಾರ ಕೊಡೋ ಅಧಿಕಾರ ಮಿಸ್ಟರ್ ಅಮಿತ್ ಶಾ ಅವರಿಗೆ ಇದೆ.  ಹೀಗಿರುವಾಗ ರೈತರ ಬಗ್ಗೆ, ದೇಶದ ಬಗ್ಗೆ, ಬಡವರ ಬಗ್ಗೆ ಅವರಿಗೆ ಮಾತಾಡುವ ನೈತಿಕತೆ ಅವರಿಗಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ; Amith Sha in Mysore; ಮೈಸೂರಿನಲ್ಲಿ ಅಮಿತ್‌ ಹೈ ವೋಲ್ಟೇಜ್‌ ಮೀಟಿಂಗ್‌!

 

Share Post