Politics

22 ಕ್ಷೇತ್ರಕ್ಕೆ BJP ಟಿಕೆಟ್ ಫೈನಲ್; 3 ಕ್ಷೇತ್ರ ಪೆಂಡಿಂಗ್ ಯಾಕೆ?

ಬೆಂಗಳೂರು; ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 3 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಬಿಜೆಪಿ, 22 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಇಂದು ಅಧಿಕೃತವಾಗಿ ಪಟ್ಟಿ ರಿಲೀಸ್ ಮಾಡುವ ಸಾಧ್ಯತೆ ಇದೆ.

ಪೆಂಡಿಂಗ್ ಇರುವ 3 ಕ್ಷೇತ್ರಗಳು ಯಾವುವು..?

 ದಕ್ಷಿಣ ಕನ್ನಡದಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಹಾಗೂ ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡ ಹಾಲಿ ಸಂಸದರಿದ್ದಾರೆ. ಇವರಿಗೆ ಟಿಕೆಟ್ ನೀಡಬಾರದು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಈ ಮೂರೂ ಕ್ಷೇತ್ರಗಳನ್ನು ಪೆಂಡಿಂಗ್ ಇಡಲಾಗಿದೆ.

  ದಕ್ಷಿಣ ಕನ್ನಡದಲ್ಲಿ ಕಟೀಲ್ ಗೆ ಬದಲಾಗಿ ಕಿಶೋರ್ ಬೆಟ್ಯಾಡಿ ಅಥವಾ ಬ್ರಿಜೇಶ್ ಚೌಟಗೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಉತ್ತರ ಕನ್ನಡದಲ್ಲಿ ಕಾಗೇರಿ ಅಥವಾ ಹರಿಪ್ರಕಾಶ್ ಕೋಣೆಮನೆ ಅವರಿಗೆ ಟಿಕೆಟ್ ಸಿಗುವ ಸಂಭವವಿದೆ. ಬೆಂಗಳೂರು ಉತ್ತರದಲ್ಲಿ ಕಾದು ನೋಡುವ ತಂತ್ರ ನಡೆಯುತ್ತಿದೆ. ಬೇರೆ ಕ್ಷೇತ್ರದಲ್ಲಿ ಸಿಗದವರು ಬಂಡಾಯ ಏಳಲು ಮುಂದಾದರೆ ಅವರನ್ನು ಬೆಂಗಳೂರು ಉತ್ತರದಲ್ಲಿ ನಿಲ್ಲಿಸಲು ಪ್ರಯತ್ನಿಸಲಾಗುತ್ತದೆ. ಬಂಡಾಯ ಹೆಚ್ಚಾಗಿ ಕಾಣಿಸದಿದ್ದರೆ ಪ್ರತಾಪ ಸಿಂಹಗೆ ಇಲ್ಲಿ ಅವಕಾಶ ನೀಡಬಹುದು ಎಂದು ಹೇಳಲಾಗುತ್ತಿದೆ.

22 ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್?

  ರಾಜ್ಯದ 28 ಕ್ಷೇತ್ರಗಳ ಪೈಕಿ ಕೋಲಾರ, ಹಾಸನ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ. ಮೂರು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳು ಫೈನಲ್ ಆಗಿಲ್ಲ. ಉಳಿದ 22 ಕ್ಷೇತ್ರಗಳಲ್ಲಿ ಇಬ್ಬರು ಮಾಜಿ ಸಿಎಂಗಳಿಗೆ ಟಿಕೆಟ್ ಕನ್ಫರ್ಮ್ ಆಗಿದೆ. ಇನ್ನು ಮೈಸೂರು-ಕೊಡಗು ಕ್ಷೇತ್ರಕ್ಕೆ ಯದುವೀರ್ ಒಡೆಯರ್, ಬೆಂಗಳೂರು ಗ್ರಾಮಾಂತರಕ್ಕೆ ಡಾ.ಸಿ.ಎನ್.ಮಂಜುನಾಥ್, ಹಾವೇರಿಗೆ ಬಸವರಾಜ ಬೊಮ್ಮಾಯಿ, ಬೆಳಗಾವಿಗೆ ಶೆಟ್ಟರ್, ತುಮಕೂರಿಗೆ ವಿ.ಸೋಮಣ್ಣ, ಚಿಕ್ಕಬಳ್ಳಾಪುರಕ್ಕೆ ಡಾ.ಕೆ.ಸುಧಾಕರ್ ಗೆ ಟಿಕೆಟ್ ಫೈನಲ್ ಆಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.

ಯಾರಿಗೆ ಟಿಕೆಟ್ ಫೈನಲ್ ಆಗಿದೆ?

ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರಗ

ಶಿವಮೊಗ್ಗ – ಬಿ.ವೈ.ರಾಘವೇಂದ್ರ

ಹಾವೇರಿ – ಬಸವರಾಜ ಬೊಮ್ಮಾಯಿ

ತುಮಕೂರು- ವಿ.ಸೋಮಣ್ಣ

ಮೈಸೂರು-ಕೊಡಗು– ಯದುವೀರ್​ ಒಡೆಯರ್

ಬೆಳಗಾವಿ- ಜಗದೀಶ್​ ಶೆಟ್ಟರ್​

ಚಿಕ್ಕೋಡಿ – ರಮೇಶ್​ ಕತ್ತಿ

ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್​.ಮಂಜುನಾಥ್​ಚಿತ್ರದುರ್ಗ- ನಾರಾಯಣಸ್ವಾಮಿ

ಬೆಂಗಳೂರು ಸೆಂಟ್ರಲ್- ಪಿ.ಸಿ ಮೋಹನ್

ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ

ಬೆಳಗಾವಿ- ಜಗದೀಶ್ ಶೆಟ್ಟರ್

ಚಿಕ್ಕೋಡಿ- ರಮೇಶ್ ಕತ್ತಿ

ಕಲ್ಬುರ್ಗಿ- ಉಮೇಶ್ ಜಾದವ್

ವಿಜಯಪುರ- ಗೋವಿಂದ ಕಾರಜೋಳ

Share Post